ಕಾಪು ದಾಸ್ತಾನು ಅಡಿ ಸಂಗ್ರಹವಿರುವ ಡಿಎಪಿ ರಸಗೊಬ್ಬರದ ಪ್ರತಿಚೀಲಕ್ಕೆ.1200  ರೂ. ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶ 

ಧಾರವಾಡ: ಕಾಪು ದಾಸ್ತಾನು ಅಡಿ ಸಂಗ್ರಹವಿರುವ ಡಿಎಪಿ ರಸಗೊಬ್ಬರಕ್ಕೆ  ಪ್ರತಿ ಚೀಲಕ್ಕೆ 1200 ರೂ.ಗಳನ್ನು ನಿಗದಿಸಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಕಾಪು ದಾಸ್ತಾನು ಅಡಿ ಕೆಎಸ್.ಸಿ.ಎಮ್.ಎಫ್ ದಲ್ಲಿ ಸಂಗ್ರಹವಿದ್ದ 1960 ಟನ್ ಡಿ.ಎ.ಪಿ. ಗೊಬ್ಬರವು ಪ್ರತಿ ಚೀಲಕ್ಕೆ 1450 ರೂ.ಗಳ ದರ ನಿಗದಿಪಡಿಸಲಾಗಿತ್ತು.
ಈ ಕುರಿತು ಧಾರವಾಡ ಜಿಲ್ಲಾಡಳಿತ  ಪ್ರಸ್ತಾವನೆ ಸಲ್ಲಿಸಿ, ರೈತರ ಅನುಕೂಲಕ್ಕಾಗಿ, ಈಗಾಗಲೇ  ಕಾಪು ದಾಸ್ತಾನುವಿರುವ ಡಿಎಪಿ ಗೊಬ್ಬರ ದರವನ್ನು 1200 ರೂ.ಗಳಿಗೆ ಮರು ನಿಗದಿಗೊಳಿಸಲು ಪತ್ರ ಕಳುಸಿತ್ತು. ಮತ್ತು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಪಾಲೊ ಅಫ್ ಮಾಡಿದ್ದರು.

ಈಗಾಗಲೇ ಕಾಪು ದಾಸ್ತಾನು ಇರುವ ಡಿಎಪಿ ಗೊಬ್ಬರಕ್ಕೆ 1200 ರೂ. ನಿಗದಿಗೊಳಿಸಿದೆ.  ನಾಳೆಯಿಂದ ಹೊಸ ದರದಲ್ಲಿ ಮಾರಾಟ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಧಾರವಾಡ ಜಿಲ್ಲೆಯಲ್ಲೂ ನಾಳೆಯಿಂದ ಗೊಬ್ಬರ ಮಾರಾಟ ಮಳಿಗೆ, ಖಾಸಗಿ ವಿತರಕರು ಎಲ್ಲ  ಡಿಎಪಿ ಗೊಬ್ಬರವನ್ನು ಪ್ರತಿ ಚೀಲಕ್ಕೆ 1200 ರೂ.ಗಳಿಗೆ ಮಾರಾಟವಾಗುವಂತೆ ಜಿಲ್ಲಾಡಳಿತವು ಕೃಷಿ ಇಲಾಖೆ ಮೂಲಕ ಕ್ರಮ ಕೈಗೊಂಡಿದೆ. ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement