ಪೆರು ಕೋವಿಡ್ ಸಾವಿನ ಸಂಖ್ಯೆ ಪರಿಷ್ಕರಣೆ, ಮೂರು ಪಟ್ಟು ಹೆಚ್ಚಳ..! ತಲಾವಾರು ಸಾವು ಹೆಚ್ಚಿರುವ 20 ದೇಶಗಳು

ಪರಿಶೀಲನೆಯ ನಂತರ ಪೆರು ಕೊರೊನಾ ವೈರಸ್ ಕಾಯಿಲೆಯಿಂದ ತನ್ನ ದೇಶದ ಅಧಿಕೃತ ಸಾವಿನ ಸಂಖ್ಯೆಯನ್ನು (ಕೋವಿಡ್ -19) ಪರಿಷ್ಕರಿಸಿದೆ.
ಈ ಮೊದಲು ಪಟ್ಟಿ ಮಾಡಲಾದ ಸಂಖ್ಯೆ ಮೂರು ಪಟ್ಟುಮರಣ ಸಂಭವಿಸಿದೆ ಎಂದು ಈ ಪರಿಷ್ಕರಣೆ ಹೇಳಿದೆ. ಪರಿಷ್ಕೃತ ಕೋವಿಡ್ -19 ಸಾವಿನ ಸಂಖ್ಯೆಯೊಂದಿಗೆ, ಪೆರು ತಲಾವಾರು ಅತಿ ಹೆಚ್ಚು ಸಾವಿನ ಪ್ರಮಾಣವನ್ನು ಹೊಂದಿರುವ ಮೈಲಿಗಲ್ಲನ್ನು ತಲುಪಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ ಅಂಶಗಳು ತಿಳಿಸಿವೆ.
ಸುಮಾರು 3.30 ಕೋಟಿ ಜನಸಂಖ್ಯೆ ಇರುವ ದೇಶ ಪೆರುವಿನ ಅಧಿಕೃತ ಸಾವಿನ ಸಂಖ್ಯೆ 69,342 ರಿಂದ ಈಗ 180,764 ಏರಿಕೆಯಾಗಿದೆ. ಪರಿಷ್ಕೃತ ದತ್ತಾಂಶದ ಪ್ರಕಾರ 1,00,000 ಜನರಿಗೆ 500ಕ್ಕೂ ಹೆಚ್ಚು ಕೋವಿಡ್ ಸಾವುಗಳನ್ನು ಸಂಭವಿಸಿವೆ.
ಪೆರುವಿನ ಅಧಿಕೃತ ಸಾವಿನ ಸಂಖ್ಯೆ ನಿರಂತರವಾಗಿ ಸ್ಕ್ಯಾನರ್ ಅಡಿಯಲ್ಲಿತ್ತು. ಏಕೆಂದರೆ ಸ್ಮಶಾನಗಳ ದೃಶ್ಯಗಳು ಸರ್ಕಾರದ ದತ್ತಾಂಶಕ್ಕೆ ವಿರುದ್ಧವಾಗಿತ್ತು.
ಪರಿಷ್ಕೃತ ಕೊರೊನಾ ವೈರಸ್-ಸಂಬಂಧಿತ ಸಾವಿನ ಸಂಖ್ಯೆಯನ್ನು ಪ್ರಕಟಿಸಿದ ಪೆರುವಿನ ಪ್ರಧಾನಿ ವಿಯೊಲೆಟಾ ಬರ್ಮಡೆಜ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, “ಈ ನವೀಕರಿಸಿದ ಮಾಹಿತಿಯನ್ನು ಸಾರ್ವಜನಿಕಗೊಳಿಸುವುದು [ತಮ್ಮ] ಕರ್ತವ್ಯವೆಂದು ಭಾವಿಸಿದ್ದೇನೆ. ಪೆರುವಿಯನ್ ಮತ್ತು ಅಂತರರಾಷ್ಟ್ರೀಯ ತಜ್ಞರ ಸಲಹೆಯ ಮೇರೆಗೆ ಕೋವಿಡ್ ಸಾವಿನ ಸಂಖ್ಯೆಯನ್ನು ಪರಿಷ್ಕರಿಸಲಾಗಿದೆ ಎಂದು ಅವರು ಹೇಳಿದರು.
ಈ ಹಿಂದೆ, ಹಂಗೇರಿಯಲ್ಲಿ, 1,00,000 ಜನರಿಗೆ ಸುಮಾರು 300 ಕೋವಿಡ್ ಸಾವುಗಳು ಸಂಭವಿಸಿವೆ, ತಲಾ ಸಾವಿನ ಸಂಖ್ಯೆ ಅತಿ ಹೆಚ್ಚು, ನಂತರ ಜೆಕ್ ರಿಪಬ್ಲಿಕ್ ಮತ್ತು ಬೋಸ್ನಿಯಾ ಮತ್ತು ಹರ್ಜೆಗೋವಿನಾ. ಆದರೆ ಇತ್ತೀಚಿನ ಪರಿಷ್ಕರಣೆ ಪೆರುವನ್ನು ಹನ್ನೆರಡನೆಯಿಂದ ಮೊದಲ ಸ್ಥಾನಕ್ಕೆ ತಳ್ಳಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶಗಳು ತಿಳಿಸಿವೆ, ಇದು ತಲಾ ಕೊವಿಡ್ ಸಾವಿನ ವಿಷಯದಲ್ಲಿ ಅತ್ಯಂತ ಕೆಟ್ಟ ಪೀಡಿತ ದೇಶವಾಗಿದೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

ತಲಾವಾರು ಹೆಚ್ಚು ಕೋವಿಡ್ ಸಾವುಗಳನ್ನು ಹೊಂದಿರುವ 20 ದೇಶಗಳ ಪಟ್ಟಿ ಇಲ್ಲಿದೆ:
ಹಂಗೇರಿ, ಜೆಕಿಯಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಸ್ಯಾನ್ ಮರಿನೋ, ಉತ್ತರ ಮ್ಯಾಸಿಡೋನಿಯಾ, ಮಾಂಟೆನೆಗ್ರೊ, ಬಲ್ಗೇರಿಯಾ,ಮೊಲ್ಡೊವಾ,
ಸ್ಲೋವಾಕಿಯಾ, ಬ್ರೆಜಿಲ್, ಬೆಲ್ಜಿಯಂ, ಪೆರು, ಸ್ಲೊವೇನಿಯಾ, ಇಟಲಿ, ಕ್ರೊಯೇಷಿಯಾ, ಪೋಲೆಂಡ್, ಬ್ರಿಟನ್‌, ಅಮೆರಿಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement