ಬೆಂಗಳೂರು: ಸದಾಶಿನಗರದಲ್ಲಿ ಮಾಸ್ಕ್ ಸರಿಯಾಗಿ ಧರಿಸದ ಮಹಿಳೆಯೊಬ್ಬರ ಮೇಲೆ ಇನ್ನೊಂದು ಮಹಿಳೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಸರಿಯಾಗಿ ಮಾಸ್ಕ್ ಹಾಕದೆ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದರು. ಅದೇ ಸಮಯದಲ್ಲಿ ಮತ್ತೊಬ್ಬ ಮಹಿಳೆ ವಾಕಿಂಗ್ಗೆ ಬಂದಿದ್ದರು. ಅವರು ಪಾರ್ಕ್ ಗೆ ವಾಕಿಂಗ್ ಬಂದ ಓರ್ವ ಮಹಿಳೆ ಮಾಸ್ಕನ್ನು ಸರಿಯಾಗಿ ಮೂಗಿನ ಮೇಲಿಂದ ಧರಿಸಿರಲಿಲ್ಲ ಎನ್ನಲಾಗಿದೆ. ಸರಿಯಾಗಿ ಮಾಸ್ಕ್ ಹಾಕಿಲ್ಲವೆಂದು ವಾಗ್ವಾದವಾಗಿದೆ. ಮಾಸ್ಕ್ ಹಾಕದ ಸರಿಯಾಗಿ ಮಹಿಳೆಗೆ ಮತ್ತೊಬ್ಬಳು ದೊಣ್ಣೆಯಿಂದ ಹೊಡೆದಿದ್ದಾರೆ. ಮಾಸ್ಕ್ ಸರಿಯಾಗಿ ಹಾಕದಿದ್ದರೆ ಕೇಳಲು ಪೊಲೀಸರಿದ್ದಾರೆ. ನನ್ನನ್ನು ಹೊಡೆಯುವುದಕ್ಕೆ ನೀವು ಯಾರು ಎಂದು ಹಲ್ಲೆಗೊಳಗಾದ ಮಹಿಳೆ ಕೇಳಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ದೂರು ಮಹಿಳೆ ಸ್ಥಳೀಯ ಠಾಣೆ ವರೆಗೆ ಹೋಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ