ತನ್ನ ಸ್ವಂತ ಮದುವೆಯಲ್ಲಿ ಮದುಮಗಳು ಸಂಭ್ರಮಾಚರಣೆಗೆ ಮದುವೆ ಮಂಟಪದ ಬಳಿ ಗಾಳಿಯಲ್ಲಿ ಗುಂಡುಹಾರಿಸಿ ಸದ್ದು ಮಾಡಿದ್ದು ಈಗ ಕಾನೂನಿನ ಉರುಳಾಗಿ ಪರಿಣಮಿಸಿದೆ.
ವೇದಿಕೆಯಲ್ಲಿ ತನ್ನ ಪ್ರವೇಶದ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡಲು ಗಾಳಿಯಲ್ಲಿ ಗುಂಡು ಹಾರಿಸಿದ ಮಹಿಳೆಯ ವಿರುದ್ಧ ಈಗ ಎಫ್ಐಆರ್ ದಾಖಲಿಸಲಾಗಿದೆ. ಪರವಾನಗಿ ಪಡೆದ ಗನ್ ಹೊಂದಿದ್ದ ಮಹಿಳೆಯ ಚಿಕ್ಕಪ್ಪನ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಉತ್ತರ ಪ್ರದೇಶದ ಪ್ರತಾಪ್‌ಗಡ ಜಿಲ್ಲೆಯ ಜೇಥ್ವಾರ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ವಧು ತನ್ನ ವಿವಾಹ ಸಮಾರಂಭದಲ್ಲಿ “ಸಂಭ್ರಮಾಚರಣೆ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ದೃಶ್ಯದ ವಿಡಿಯೋ ಈಗ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸರ ಗಮನಕ್ಕೆ ಬಂದಿದೆ.
ವಧು, ರೂಪಾ ಪಾಂಡೆ, ವರನೊಂದಿಗೆ ವೇದಿಕೆಯ ಮೇಲೆ ಗಾಳಿಯಲ್ಲಿ ಗುಂಡು ಹಾರಿಸಿದ ಕೆಲವೇ ಕ್ಷಣಗಳ ವಿಡಿಯೊ ತುಣುಕು ಈಗ ಆಕೆಗೆ ಮುಳುವಾಗಿದೆ. ಆಕೆಯ ಚಿಕ್ಕಪ್ಪ ರಾಮಿನಿವಾಸ್ ಪಾಂಡೆ ರಿವಾಲ್ವರ್ ಅನ್ನು ರೂಪಾಗೆ ಹಸ್ತಾಂತರಿಸುವುದನ್ನು ಕಾಣಬಹುದು.
ಬಂದೂಕನ್ನು ತೆಗೆದುಕೊಂಡ ನಂತರ, ರೂಪಾ ಪಾಂಡೆ ಪರವಾನಗಿ ಪಡೆದ ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಾಳೆ. ಗುಂಡು ಹಾರಿಸಿದ ನಂತರ ರೂಪಾ ಪಾಂಡೆ ವರನ ಜೊತೆಗೂಡಿ ವೇದಿಕೆಗೆ ಬರುತ್ತಾಳೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋ ಅರಿತುಕೊಂಡ ಪೊಲೀಸರು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ರೂಪಾ ಪಾಂಡೆ ಮತ್ತು ಆಕೆಯ ಚಿಕ್ಕಪ್ಪ ರಾಮಿನಿವಾಸ್ ಪಾಂಡೆ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ಹಲವಾರು ಜನರು ಮದುವೆಗೆ ಹಾಜರಾಗಿದ್ದರಿಂದ ಸಾಂಕ್ರಾಮಿಕ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ. ಕೋವಿಡ್ -19 ರ ದೃಷ್ಟಿಯಿಂದ ಉತ್ತರ ಪ್ರದೇಶ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ರಾಜ್ಯದಲ್ಲಿ ಕೇವಲ 25 ಜನರಿಗೆ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಅವಕಾಶವಿದೆ.


ನಿಮ್ಮ ಕಾಮೆಂಟ್ ಬರೆಯಿರಿ