ವಾಷಿಂಗ್ಟನ್: ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವುದನ್ನು ಉತ್ತೇಜಿಸುವುದಕ್ಕೆ ಅಮೆರಿಕದ ಜೋ ಬೈಡನ್ ಆಡಳಿತ ಹೊಸ ಘೋಷಣೆ ಮಾಡಿದ್ದು, ಲಸಿಕೆ ಪಡೆಯುವವರಿಗೆ ಉಚಿತ ಬಿಯರ್ ನೀಡುವುದಾಗಿ ಘೋಷಣೆ ಮಾಡಿದೆ.
ಮಂತ್ ಆಫ್ ಆಕ್ಷನ್” ಘೋಷಣೆ ಮಾಡಿರುವ ಶ್ವೇತ ಭವನ, ಜುಲೈ ನ 4 ರಜೆಗೂ ಮುನ್ನ ಹೆಚ್ಚು ಲಸಿಕೆಗಳನ್ನು ಪಡೆಯುವುದಕ್ಕೆ ಅಮೆರಿಕನ್ನರನ್ನು ಉತ್ತೇಜಿಸುತ್ತಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಶೇ.70 ರಷ್ಟು ವಯಸ್ಕ ಜನಸಂಖ್ಯೆಗೆ ಲಸಿಕೆ ನೀಡುವ ಹಾಗೂ ಬೇಸಿಗೆ ವೇಳೆಗೆ ಸಹಜ ಸ್ಥಿತಿಗೆ ಅಮೆರಿಕವನ್ನು ತರುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಲಸಿಕೆ ಪಡೆಯುವುದನ್ನು ಉತ್ತೇಜಿಸಲು ಹಲವು ಆಕರ್ಷಕ ಕೊಡುಗೆಗಳನ್ನು ಅಮೆರಿಕ ಸರ್ಕಾರ ನೀಡಲು ಮುಂದಾಗಿದ್ದು, ನಗದು ಬಹುಮಾನ, ಕ್ರೀಡೆಗೆ ಸಂಬಂಧಪಟ್ಟ ಟಿಕೆಟ್ ಗಳು, ಅಥವಾ ವೇತನ ಸಹಿತ ರಜೆಗಳನ್ನು ಘೋಷಣೆ ಮಾಡಿದೆ.
ಈವರೆಗೂ ಅಮೆರಿಕದ ವಯಸ್ಕ ಜನಸಂಖ್ಯೆಯ ಶೇ.62.8 ರಷ್ಟು ಮಂದಿ ಒಂದು ಡೋಸ್ ಲಸಿಕೆ ಪಡೆದಿದ್ದರೆ 13.36 ಕೋಟಿ ಜನ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೊಸದಾಗಿ ಲಸಿಕೆ ಹಾಕಿಸಿಕೊಳ್ಳುತ್ತಿರುವವರ ಸಂಖ್ಯೆ ಕುಸಿಯುತ್ತಿದ್ದು, ದಿನವೊಂದಕ್ಕೆ ಸರಾಸರಿ 6,00,000 ಜನ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ, ಇದಕ್ಕೂ ಮುನ್ನ ಲಾಟರಿಗಳನ್ನು ಘೋಷಣೆ ಮಾಡಿದಾಗ ದಿನವೊಂದಕ್ಕೆ 8,00,000 ಮಂದಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದರು.
ಬೈಡನ್ ಶೇ.70 ರಷ್ಟು ಮಂದಿಗೆ ಲಸಿಕೆ ನೀಡುವ ಗುರಿ ದಾಟಿದರೆ, 21+ ಅಮೆರಿಕನ್ನರಿಗೆ ಉಚಿತವಾಗಿ ಬೀರ್ ನೀಡುವುದಾಗಿ
ಅನ್ಹ್ಯೂಸರ್-ಬುಷ್ (ಮದ್ಯದ ಕಂಪನಿ) ಘೋಷಿಸಿತ್ತು. ಅಷ್ಟೇ ಅಲ್ಲದೇ ಗುರಿ ದಾಟಿದ ಬೆನ್ನಲ್ಲೇ ಮೊದಲ 2,00,000 ಅದೃಷ್ಟಶಾಲಿಗಳಿಗೆ $5 ಕ್ರೆಡಿಟ್ ನೀಡುವುದಾಗಿಯೂ ಘೋಷಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ