ಸರ್ಕಾರದಿಂದಲೇ ಕಾವೇರಿ ನದಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ 1,200 ಜನರ ಚಿತಾಭಸ್ಮ ವಿಸರ್ಜನೆ..!

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಚಿತಾಭಸ್ಮವನ್ನು ಅವರ ಕುಟುಂಬದವರು ತೆಗೆದುಕೊಂಡು ಹೋಗುತ್ತಿಲ್ಲ. ಕೊರೊನಾ ವೈರಸ್‌ ಭಯಕ್ಕೆ ಅವರಿಗೆ ಮಾಹಿತಿ ನೀಡಿದರೂ ಅವರು ಬಂದಿರಲಿಲ್ಗಲ. ಈಗ ರಾಜ್ಯ ಸರ್ಕಾರದವರೇ  ಕೋವಿಡ್‌ನಿಂದ ಮೃತಪಟ್ಟ  ಸುಮಾರು 1,200  ಜನರ ಚಿತಾಭಸ್ಮವನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಿದೆ.
ಮಂಡ್ಯ ಜಿಲ್ಲೆಯ ಮಾಲವಳ್ಳಿ ತಾಲ್ಲೂಕಿನ ಬೆಲಕವಾಡಿಯಲ್ಲಿರುವ ಕಾವೇರಿ ನದಿಯಲ್ಲಿ ಕೋವಿಡ್ -19 ಗೆ ಮೃತಪಟ್ಟವರ ಚಿತಾ ಭಸ್ಮವನ್ನು ಸಾಮೂಹಿಕವಾಗಿ ಕಾವೇರಿ ನದಿಗೆ ಬಿಡಲು ನಿರ್ಧರಿಸಿ ಕಂದಾಯ ಇಲಾಖೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. ಕಂದಾಯ ಸಚಿವ ಆರ್ ಅಶೋಕ್ ಅಸ್ಥಿಯನ್ನು ಸರ್ಕಾರದ ವತಿಯಿಂದ ಅಸ್ತಿ ವಿಸರ್ಜನೆ ಮಾಡಿದ್ದಾರೆ.
ಬುಧವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳವಾಡಿಯ ಅನ್ನಪೂರ್ಣೇಶ್ವರಿ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಗಿದೆ.
ಸಾಮಾನ್ಯವಾಗಿ ಮೃತರ ಅಂತ್ಯಸಂಸ್ಕಾರದ ನಂತರದಲ್ಲಿ ಅಸ್ತಿಯನ್ನು ಹರಿಯುವ ನದಿಯಲ್ಲಿ ವಿಸರ್ಜಿಸಿದರೆ ಮೃತ ಆತ್ಮಕ್ಕೆ ಮುಕ್ತಿ ಸಿಗುತ್ತದೆ ಎಂಬುದು ಭಾರತೀಯರ ನಂಬಿಕೆ. ಹೀಗಾಗಿ ಸರ್ಕಾರದ ವತಿಯಿಂದಲೇ ಕಂದಾಯ ಸಚಿವ ಆರ್ ಅಶೋಕ್ ಅಸ್ಥಿ ವಿಸರ್ಜಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ಈ ಕಾರ್ಯವನ್ನು ಸರ್ಕಾರದ ವತಿಯಿಂದ ಕಂದಾಯ ಸಚಿವ ಆರ್ ಅಶೋಕ್ ಬುಧವಾರ (ಇಂದು) ನೆರವೇರಿಸಿದರು. ವಾರಸುದಾರರು ಇಲ್ಲದ ಮೃತದೇಹಗಳು, ಶವಸಂಸ್ಕಾರ ನಡೆಸಲು ಕುಟುಂಬ ಸದಸ್ಯರು ನಿರಾಕರಿಸಿದ ಮೃತದೇಹಗಳನ್ನು ಸರ್ಕಾರದಿಂದಲೇ ಶವ ಸಂಸ್ಕಾರ ನೆರವೇರಿಸಲಾಗಿತ್ತು. ಆದರೆ ಮಾಹಿತಿ ನೀಡಿ ಹದಿನೈದು ದಿನಗಳ ಕಾಲಾವಕಾಶ ನೀಡಿದರೂ ಅವರ ಅಸ್ತಿಯನ್ನು ಕುಟುಂಬದ ಸದಸ್ಯರು ಸ್ವೀಕರಿಸಿರಲಿಲ್ಲ.  ಈ ಮೃತ ದೇಹಗಳ ಅಸ್ತಿಯನ್ನು ಕಾವೇರಿ ನದಿ ತೀರದಲ್ಲಿರುವ ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ  ಅಸ್ತಿ ವಿಸರ್ಜನೆ ಮಾಡಲಾಯಿತು.
ಚಿತಾಭಸ್ಮ ತೆಗೆದುಕೊಂಡು ಹೋಗದ ಕುಟಂಬದವರು:
ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಚಿತಾಭಸ್ಮವನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಕುಟುಂಬದವರು ಹಾಗೂ ಸಂಬಂಧಿಕರಿಗೆ 15 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಸಾಮಾನ್ಯವಾಗಿ ಮೃತರ ಅಂತ್ಯಕ್ರಿಯೆ ನಡೆದ ದಿನ ಅಥವಾ ಮರುದಿನವೇ ಚಿತಾಭಸ್ಮವನ್ನು ತೆಗೆದುಕೊಂಡು ಹೋಗುತ್ತಾರೆ. ಅನೇಕರು ಹಾಗೆಯೇ ಮಾಡಿದ್ದಾರೆ. ಆದರೆ ಕೆಲವು ಪ್ರಕರಣಗಳಲ್ಲಿ ಸಂಬಂಧಿಕರು ಅಸ್ಥಿಯನ್ನು ತೆಗೆದುಕೊಂಡು ಹೋಗುವುದಕ್ಕೂ ಹಿಂದೇಟು ಹಾಕಿದ್ದರು. ಹೀಗಾಗಿ 1200 ಮೃತರ ಚಿತಾಭಸ್ಮವನ್ನು ಹಾಗೇ ಶೇಖರಿಸಿ ಇಡಲಾಗಿತ್ತು. ಬುಧವಾರ ಮೃತರ ಆತ್ಮಕ್ಕೆ ಮುಕ್ತಿ ದೊರಕಿಸುವ ಉದ್ದೇಶದಿಂದ ಸರ್ಕಾರವೇ ಅಸ್ತಿ ವಿಸರ್ಜನೆಗೆ ಮಾಡಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement