ಪರಿಹಾರ ಪ್ಯಾಕೇಜಿಗೆ ಸ್ವಾಗತ, ಆದರೆ ಎಂಎಸ್‌ಎಂಇ ನಿರೀಕ್ಷಿಸಿದಷ್ಟು ಇಲ್ಲ: ಕಾಸಿಯಾ

ಬೆಂಗಳೂರು: ಎಂಎಸ್‌ಎಂಇಗಳಿಗೆ ಮೇ ಮತ್ತು ಜೂನ್ ತಿಂಗಳುಗಳಿಗೆ ನಿಗದಿತ ಮಾಸಿಕ ವಿದ್ಯುತ್ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿರುವುದು ಮತ್ತು ವಿದ್ಯುತ್ ಮಗ್ಗದ ಕಾರ್ಮಿಕರಿಗೆ 3000 ರೂ.ಗಳ ಪರಿಹಾರ ನೀಡಿರುವುದನ್ನು ಕಾಸಿಯಾ ಸ್ವಾಗತಿಸುತ್ತದೆ. ಆದರೆ ಕೋವಿಡ್ -19 ರ ಎರಡನೇ ಅಲೆಯೊಂದಿಗೆ ಹೋರಾಡತ್ತಿರುವ ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಸರ್ಕಾರ ಇನ್ನೂ ಹೆಚ್ಚಿನದನ್ನು ಘೋಷಿಸಬಹುದಾಗಿತ್ತ ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ.. ಅರಸಪ್ಪ ಅವರು ಲಾಕ್‌ಡೌನ್ ಪರಿಹಾರ ಪ್ಯಾಕೇಜ್‌ಗೆ ಪ್ರತಿಕ್ರಿಯಿಸಿದ್ದಾರೆ.
ನಾವು ನಮ್ಮ ಮನವಿ ಪತ್ರದಲ್ಲಿ ಸರ್ಕಾರಕ್ಕೆ ಅನೇಕ ಸಲಹೆಗಳನ್ನು ನೀಡಿದ್ದೇವೆ ಆದರೆ ಅವುಗಳಲ್ಲಿ ಹೆಚ್ಚಿನವು ಪರಿಹಾರ ಪ್ಯಾಕೇಜ್‌ನಲ್ಲಿ ಉಲ್ಲೇಖವಾಗಿಲ್ಲ ಎಂದು ಹೇಳಿದ್ದಾರೆ.
ಸೀಮಿತ ಕಾರ್ಮಿಕರನ್ನು ಹೊಂದಿರುವ ರಫ್ತು-ಆಧಾರಿತ ಕಂಪನಿಗಳಿಗೆ ಅನುಮತಿ ನೀಡುವ ಮೂಲಕ ಎಂಎಸ್‌ಎಂಇಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡುವ ನಮ್ಮ ಮನವಿಯನ್ನು ಸರ್ಕಾರ ಭಾಗಶಃ ಒಪ್ಪಿಕೊಂಡಿದೆ, ಆದರೆ ಇದನ್ನು ಎಲ್ಲ ಎಂಎಸ್‌ಎಂಇಗಳಿಗೆ ವಿಸ್ತರಿಸಬೇಕೆಂದು ನಾವು ಪುನರುಚ್ಚರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಎಂಎಸ್‌ಎಂಇಗಳಿಗೆ ಕಾರ್ಯನಿರ್ವಹಿಸಲು ತಕ್ಷಣ ಅನುಮತಿ ನೀಡದಿದ್ದರೆ, ಅವುಗಳಲ್ಲಿ ಬಹುಪಾಲು ಶಾಶ್ವತವಾಗಿ ಸ್ಥಗಿತಗೊಳ್ಳುವುದು ಬಿಟ್ಟರೆ ಅನ್ಯ ಮಾರ್ಗಗಳು ಇಲ್ಲ. ಇದರಿಂದ ರಾಜ್ಯ ಬೊಕ್ಕಸಕ್ಕೆ ಆಗುವ ದೊಡ್ಡ ಪ್ರಮಾಣದ ಉದ್ಯೋಗ ಮತ್ತು ಆದಾಯದ ನಷ್ಟದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸೀಮಿತ ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸಲು ನೀಡಲಾದ ಅನುಮತಿಯ ವ್ಯಾಪ್ತಿಯನ್ನು ವಿಸ್ತರಿಸಿ ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಒಳಗೊಂಡಂತೆ ಎಲ್ಲ ಕೈಗಾರಿಕೆಗಳಿಗೆ ಅನುಮತಿ ನೀಡುವ ಕುರಿತು ಮರುಪರಿಶೀಲಿಸಲು ಮತ್ತೊಮ್ಮೆ ಅವರು ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವಿಧಾನಸೌಧ ಸ್ಫೋಟದ ಎಐ ವಿಡಿಯೊ ಸೃಷ್ಟಿಸಿ ಹಂಚಿಕೊಂಡ ಆರೋಪ : ಕಿಡಿಗೇಡಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement