ಟ್ವಿಟರ್​ ನಂತರ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್​ ಖಾತೆಗೆ ಈಗ ಫೇಸ್‌ಬುಕ್ 2 ವರ್ಷ ನಿಷೇಧ..!

ನ್ಯೂಯಾರ್ಕ್​; ಜನವರಿ 6 ರಂದು ಡೊನಾಲ್ಡ್​ ಟ್ರಂಪ್ ಬೆಂಬಲಿಗರು ಅಮೆರಿಕದ ರಾಜಕೀಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಲ್ಲಿನ ಸಂಸತ್​ ಮೇಲೆ ದಾಳಿ ನಡೆಸಿದ್ದರು. ಪರಿಣಾಮ ನಾಲ್ಕು ಜನ ಮೃತಪಟ್ಟಿದ್ದರು. ಈ ಘಟನೆಯ ನಂತರ ಇದಕ್ಕೆ ಟ್ರಂಪ್ ಅವರೇ ಕಾರಣ ಎಂದು ಆರೋಪಿಸಿದ್ದ ಟ್ವಿಟರ್​ ಸಂಸ್ಥೆ ಅವರನ್ನು ಟ್ವಿಟರ್​ನಿಂದ ನಿಷೇಧಿಸಿತ್ತು. ಇದೀಗ ಟ್ವಿಟರ್​ ಬೆನ್ನಿಗೆ ಫೇಸ್​ಬುಕ್ ಸಹ “ಜನವರಿ 6 ರ ದಂಗೆಗೆ ಡೊನಾಲ್ಡ್​ ಟ್ರಂಪ್ ಪ್ರಚೋದನೆ ನೀಡಿರುವುದು ದೃಢವಾಗಿದೆ. ಆದ ಕಾರಣ ಅವರನ್ನು ಖಾತೆಯನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗಿದೆ” ಎಂದು ತಿಳಿಸಿದೆ.
ಈ ಬಗ್ಗೆ ಶುಕ್ರವಾರ ಸ್ಪಷ್ಟನೆ ನೀಡಿರುವ ಫೇಸ್​ಬುಕ್ ಉಪಾಧ್ಯಕ್ಷ ನಿಕ್ ಕ್ಲೆಗ್, “ಡೊನಾಲ್ಡ್​ ಟ್ರಂಪ್ ಅವರ ಖಾತೆಯನ್ನು ಫೇಸ್​ಬುಕ್​ನಲ್ಲಿ ಎರಡು ವರ್ಷಗಳ ಕಾಲ ನಿಷೇಧಿಸಲಾಗಿದೆ. ಆದರೆ, ಈ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಸುರಕ್ಷತೆಗೆ ಎಷ್ಟರ ಮಟ್ಟಿಗೆ ಅಪಾಯ ಕಡಿಮೆಯಾಗಿದೆ ಎಂದು ನಿರ್ಣಯಿಸಲು ನಾವು ತಜ್ಞರ ಸಲಹೆ ಪಡೆಯುತ್ತೇವೆ. ಹಿಂಸಾಚಾರದ ನಿದರ್ಶನಗಳು, ಶಾಂತಿಯುತ ಸಭೆ ಮತ್ತು ನಾಗರಿಕ ಅಶಾಂತಿಯ ಇತರ ಗುರುತುಗಳು ಸೇರಿದಂತೆ ಬಾಹ್ಯ ಅಂಶಗಳನ್ನು ನಾವು ಮೌಲ್ಯಮಾಪನ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಈ ಹಿಂದೆ ಫೇಸ್​ಬುಕ್ ಸಂಸ್ಥಾಪದ ಅಧ್ಯಕ್ಷ ಸಿಇಓ ಮಾರ್ಕ್ ಜುಕರ್‌ಬರ್ಗ್ ಫೇಸ್​ಬುಕ್​ನಲ್ಲಿ ವಿವಾದಾತ್ಮಕ ನೀತಿ ಒಂದನ್ನು ಜಾರಿಗೆ ತಂದಿದ್ದರು. ಈ ನೀತಿಯು ರಾಜಕಾರಣಿಗಳಿಗೆ ಕೆಲವು ಸ್ವಯಂ ಚಾಲಿತ ವಿನಾಯಿತಿಗಳನ್ನು ನೀಡುವಂತಿದ್ದವು. ಈ ನೀತಿ ಇದೀಗ ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದು, ಈ ನೀತಿಯನ್ನೇ ಕೊನೆಗೊಳಿಸಲು ಇದೀಗ ಫೇಸ್‌ಬುಕ್ ಯೋಜಿಸಿದೆ ಎನ್ನಲಾಗುತ್ತಿದೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement