ಬ್ಯಾಂಕಿನಲ್ಲಿ ಹೈ ಡ್ರಾಮಾ: ನಕಲಿ ಬಾಂಬ್‌ ತೋರಿಸಿ ಹೆದರಿಸಿ 55 ಲಕ್ಷ ರೂ.ಕೇಳಿದ ವ್ಯಕ್ತಿ, ವೈದ್ಯಕೀಯ ಬಿಲ್‌ಗಳನ್ನು ಪಾವತಿಗೆ ಈ ಕೃತ್ಯ

ವಾರ್ಧಾ: ಸಿನೆಮಾ ಸೆಟ್‌ನಲ್ಲಿ ನಡೆದಂತೆ ಮಹಾರಾಷ್ಟ್ರದ ವಾರ್ಧಾದಲ್ಲಿನ ಬ್ಯಾಂಕ್ ಶಾಖೆಯಲ್ಲಿ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ನಡೆದು ಕಾಗದದ ತುಂಡನ್ನು ಸಿಬ್ಬಂದಿಯೊಬ್ಬರಿಗೆ ಹಸ್ತಾಂತರಿಸಿದ ನಂತರ ತೀವ್ರವಾದ ನಾಟಕಕ್ಕೆ ಸಾಕ್ಷಿಯಾದ ಘಟನೆ ನಡೆಯಿತು.
15 ನಿಮಿಷಗಳಲ್ಲಿ 55 ಲಕ್ಷ ರೂ. ಪಾವತಿಸದಿದ್ದರೆ ತಾನು ತಂದಿರುವ ಬಾಂಬ್‌ ಸ್ಫೋಟಿಸುವೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಸೆವಾಗ್ರಾಮ್‌ನ ಬ್ಯಾಂಕ್‌ವೊಂದರಲ್ಲಿ ಈ ಘಟನೆ ನಡೆದಿದ್ದು ಅಧಿಕಾರಿಯೊಬ್ಬರು ತಿಳಿಸಿದ್ದು, ಈ “ಆತ್ಮಹತ್ಯಾ ಬಾಂಬರ್” ಟರ್ಮಿನಲ್ ಕಾಯಿಲೆಯಿಂದ ಬಳಲುತ್ತಿದ್ದಾನೆ ಮತ್ತು ಅತಿಯಾದ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಹಣದ ಅಗತ್ಯವಿದೆ ಎಂದು ಆತ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಆತನ ಬ್ಯಾಂಕ್ ಸಿಬ್ಬಂದಿಗೆ ಬಾಂಬ್ ಸ್ಪೋಟ ಮಾಡಿದರೆ ತಾನು ಕಳೆದುಕೊಳ್ಳುವುದು ಏನೂ ಇಲ್ಲ ಎಂದು ಹೇಳಿದ್ದಾನೆ ಎಂದು ಅವರು ತಿಳಿಸಿದರು. ಬ್ಯಾಂಕ್ ನಮ್ಮ ಪೊಲೀಸ್ ಠಾಣೆ ಎದುರು ಇದೆ ಮತ್ತು ಆರೋಪಿ ಬೆದರಿಕೆ ಹಾಕುತ್ತಿದ್ದಂತೆಯೇ ಸಿಬ್ಬಂದಿ ನಮ್ಮನ್ನು ಎಚ್ಚರಿಸಲು ಯಶಸ್ವಿಯಾಗಿದ್ದಾರೆ ”ಎಂದು ಪೊಲೀಸ್‌ ಅಧಿಕಾರಿ ಹೇಳಿದರು. ವ್ಯಕ್ತಿಯನ್ನು ಬಂಧಿಸಲಾಗಿದೆ. ಮತ್ತು ಡಿಜಿಟಲ್ ವಾಚ್ ಮತ್ತು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ತುಂಬಿದ ಆರು ಕೊಳವೆಗಳನ್ನು ಒಳಗೊಂಡ ನಕಲಿ ಬಾಂಬ್, ಒಂದು ಚಾಕು ಮತ್ತು ಏರ್ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಆತನನ್ನು ಸೈಬರ್ ಕೆಫೆ ನಡೆಸುತ್ತಿರುವ ಯೋಗೇಶ್ ಕುಬಾಡೆ ಎಂದು ಗುರುತಿಸಲಾಗಿದೆ. ಸಾಲವನ್ನು ಮರುಪಾವತಿಸಲು ಆತ ಈ ಸಾಹಸಕ್ಕೆ ಕೈಹಾಕಿದ್ದ. ತನ್ನ ನಕಲಿ ಬಾಂಬ್ ಅನ್ನು ಆನ್‌ಲೈನ್‌ನಲ್ಲಿ ರಚಿಸಲು ವಸ್ತುಗಳಿಗೆ ಆರ್ಡರ್‌ ಮಾಡಿದ್ದ ಎಂದು ಸಬ್ ಇನ್ಸ್‌ಪೆಕ್ಟರ್ ಗಣೇಶ್ ಸಾಯಕರ್ ಹೇಳಿದರು. ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸೆವಗ್ರಾಮ್ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ‘ಹಿಂದೂ ಧರ್ಮ ನೋಂದಣಿಯಾಗಿಲ್ಲ’...: ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement