ಉಸಿರಾಟ ತೊಂದರೆ: ಹಿರಿಯ ಬಾಲಿವುಡ್‌ ನಟ ದಿಲೀಪಕುಮಾರ್ ಆಸ್ಪತ್ರೆಗೆ ದಾಖಲು

ಮುಂಬೈ: ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್ ಅವರು ಉಸಿರಾಟದ ಕಾರಣ ಮುಂಬೈನ ಖಾರ್ ಮೂಲದ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
98 ವರ್ಷದ ನಟನನ್ನು ಕಳೆದ ತಿಂಗಳು ವಾಡಿಕೆಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.
ಕಳೆದ ವರ್ಷ, ಕೋವಿಡ್‌-19 ಕಾರಣದಿಂದಾಗಿ ಸ್ಕ್ರೀನ್ ಐಕಾನ್ ತನ್ನ ಇಬ್ಬರು ಕಿರಿಯ ಸಹೋದರರಾದ ಅಸ್ಲಾಮ್ ಖಾನ್ (88) ಮತ್ತು ಎಹ್ಸಾನ್ ಖಾನ್ (90) ಅವರನ್ನು ಕಳೆದುಕೊಂಡಿದ್ದರು. 1944 ರಲ್ಲಿ ‘ಜ್ವಾರ್ ಭಾಟಾ’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಕುಮಾರ್, ತಮ್ಮ ವೃತ್ತಿಜೀವನದಲ್ಲಿ ಐದು ದಶಕಗಳಲ್ಲಿ ‘ಕೊಹಿನೂರ್,’ ‘ಮೊಘಲ್-ಎ-ಅಜಮ್,’ ‘ದೇವದಾಸ್,’ ‘ನಯಾ ದೌರ್,’ ‘ರಾಮ್ ಔರ್ ಶ್ಯಾಮ್,’ ಹೀಗೆ ಅನೇಕ ಚಿತ್ರಗಳಲ್ಲಿ ಅದ್ಭುತ ನಟನೆಯ ಮೂಲಕ ಮನೆ ಮಾತಾಗಿದ್ದರು.
ಅವರ ಪತ್ನಿ ಮತ್ತು ಹಿರಿಯ ನಟ ಸೈರಾ ಬಾನು ಅವರು, ಎಲ್ಲ ಪರೀಕ್ಷೆಗಳನ್ನು ವೈದ್ಯರ ತಂಡವು ನಡೆಸಿದೆ ಮತ್ತು ದಿಲೀಪಕುಮಾರ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.  ನಿಮ್ಮ ಪ್ರಾರ್ಥನೆ ನಮಗೆ ಬೇಕು” ಎಂದು ಸೈರಾ ಬಾನು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನಂದಿಗ್ರಾಮ ಉಪಸಮರ : ಮಮತಾಗೆ ಶಾಕ್‌ ಮೇಲೆ ಶಾಕ್‌; ಚಿಹ್ನೆ ಬದಲು, ಕೈಕೊಟ್ಟ ಅಭ್ಯರ್ಥಿ ; ಕಾಂಗ್ರೆಸ್ಸಿಗೆ ಬೆಂಬಲ ಘೋಷಣೆ ಬೆನ್ನಲ್ಲೇ ಕೈ ಅಭ್ಯರ್ಥಿ ಬಂಧನ !

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement