100 ಜನರು ಮೃತಪಟ್ಟ ಆಲಿಘಡ ಕಳ್ಳಭಟ್ಟಿ ದುರಂತದ ಪ್ರಮುಖ ಆರೋಪಿ ಬಿಜೆಪಿ ಮುಖಂಡ ರಿಷಿ ಶರ್ಮಾ ಬಂಧನ

ಆಲಿಘಡ; 100 ಜನ ಮೃತಪಟ್ಟ ಕಳ್ಳಭಟ್ಟಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಬಿಜೆಪಿ ಮುಖಂಡ ರಿಷಿ ಶರ್ಮಾನನ್ನು ಪೊಲೀಸರು ಭಾನುವಾರ ಬೆಳಗ್ಗೆ ಬುಲಂದ್‌ ಶಹರ್ ಗಡಿ ಬಳಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರುಖ ಆರೋಪಿ ರಿಷಿ ಶರ್ಮಾ, ಸುಮಾರು 10 ದಿನಗಳಿಂದ ತಲೆ ಮರೆಸಿಕೊಂಡಿದ್ದ. ಈತನನ್ನು ಪತ್ತೆ ಹಚ್ಚಿದವರಿಗೆ ಪೊಲೀಸರು 1 ಲಕ್ಷ ಬಹುಮಾನ ಘೋಷಿಸಿದ್ದರು. ರಿಷಿ ಶರ್ಮಾ ಪತ್ನಿ ಮತ್ತು ಮಗನನ್ನು ಈ ಹಿಂದೆಯೇ ಬಂಧಿಸಲಾಗಿತ್ತು.
ಕಳ್ಳಭಟ್ಟಿ ಕುಡಿದು 100 ಜನ ಮೃತಪಟ್ಟ ದುರಂತ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ೆಂದು ಪ್ರಬಲವಾಗಿ ಒತ್ತಾಯಿಸಲಾಗಿತ್ತು. ಈಗ ದುರಂತದ ಹಿಂದಿರುವ ಬಿಜೆಪಿ ಮುಖಂಡ ರಿಷಿ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ.
ಈತನಿಗಾಗಿ ಉತ್ತರ ಪ್ರದೇಶವಲ್ಲದೆ, ರಾಜಸ್ಥಾನ, ದೆಹಲಿ, ಉತ್ತರಾಖಂಡ, ಹರಿಯಾಣ ಪೊಲೀಸರೂ ಹುಡುಕಾಟ ನಡೆಸುತ್ತಿದ್ದರು. ಈತನ ಸುಮಾರು 500 ದೂರವಾಣಿ ಕರೆ ವಿವರಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿತ್ತು, ರಿಷಿ ಶರ್ಮಾ ಬಂಧನಕ್ಕೆ ಆರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು ಎಂದು ಅಲಿಗಡದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಲಾನಿಧಿ ನೈಥಾನಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಉಳಿದ ಆರೋಪಿಗಳಾದ ವಿಪಿನ್ ಯಾದವ್, ಅನಿಲ್ ಚೌಧರಿ ಮತ್ತು ಅವರ ಸೋದರ ಮಾವ ನೀರಜ್ ಚೌಧರಿ ಅವರನ್ನು ಬಂಧಿಸಲಾಗಿದೆ. ಅಲ್ಲದೆ ರಿಷಿ ಶರ್ಮಾ ಸಹೋದರ ಮುನೀಶ ಶರ್ಮಾ ಮತ್ತು ಶಿವ ಕುಮಾರ್ ಅವರನ್ನು ಪತ್ತೆಹಚ್ಚಲಾಗಿದೆ ಎಂದು ಪಿಲೀಸರು ತಿಳಿಸಿದ್ದಾರೆ.
ಇದು ಕಳ್ಳಭಟ್ಟಿ ಎಂದು ಅಧಿಕಾರಿಗಳು ಘೋಷಿಸಿದ ಬೆನ್ನಲ್ಲೇ ಮದ್ಯವನ್ನು ಮಾರುಕಟ್ಟೆ ಯಿಂದ ತೆಗೆದುಹಾಕಲಾಗಿದೆ. ಅಷ್ಟರಲ್ಲಿ ಅಲಿಗಡದಾದ್ಯಂತ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸರು ದಾಳಿ ಪ್ರಾರಂಭಿಸಿದ ನಂತರ ಮದ್ಯವನ್ನು ಕಾಲುವೆಗಳಲ್ಲಿ ಮತ್ತು ದೂರದ ಸ್ಥಳಗಳಲ್ಲಿ ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement