ಪಶ್ಚಿಮ ಬಂಗಾಳ: ಪರಿಹಾರ ಸಾಮಗ್ರಿ ಕದ್ದ ಆರೋಪದಡಿ ಸುವೇಂದು ಅಧಿಕಾರಿ, ಸಹೋದರ ಸೌಮೇಂದು ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ಕೇಂದ್ರ ಸರ್ಕಾರದ ಜೊತೆ ಜಿದ್ದಾಜಿದ್ದಿನ ರಾಜಕೀಯಕ್ಕಿಳಿದಿರುವ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಈಗ ಮತ್ತೊಂದು ಹೆಜ್ಜೆ ಇಟ್ಟಿದೆ. ಇತ್ತೀಚೆಗಷ್ಟೆ ಬಿಜೆಪಿ ಸೇರಿ ಚುನಾಯಿತರಾಗಿರುವ ಶಾಸಕ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೇಂದು ಅಧಿಕಾರಿ ವಿರುದ್ಧ ಕಳ್ಳತನದ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಕಂಟೈ ನಗರಸಭೆಯ ಸದಸ್ಯ ರತ್ನದೀಪ್ ಮನ್ನಾ ಅವರು ಮೇ 29ರಂದು ಈಸ್ಟ್ ಮಿಡ್ನಪೂರೆ ಪೊಲೀಸ್ ಠಾಣೆಗೆ ನೀಡಿರುವ ದೂರು ಆಧರಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹಿಮಾಂಶು, ಪ್ರತಾಪ್ ಸೇರಿ ಮೂವರು ಅವರು ಕೇಂದ್ರ ಸಶಸ್ತ್ರ ಮೀಸಲು ಪಡೆಯ ರಕ್ಷಣೆಯೊಂದಿಗೆ ಬಂದು ಟಾರ್ಪಲ್ ತುಂಬಿದ ಟ್ರಕ್ ಅನ್ನು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು,
ಶಾಸಕ ಸುವೇಂದು ಅಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್ ಆರೋಪಿಗಳ ಕೃತ್ಯಕ್ಕೆ ಶಾಸಕ ಸುವೇಂದು ಅಧಿಕಾರಿ ಮತ್ತು ಸೌಮೇಂದು ಅಧಿಕಾರಿ ಕುಮ್ಮಕ್ಕು ನೀಡಿದ್ದಾರೆ ಎಂಬ ದೂರು ಆಧರಿಸಿ ಐಪಿಸಿ ಸೆಕ್ಷನ್ 448, 379, 409, 120ಬಿ ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರತಾಪ್ ಡೆ ಎಂಬಾತನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದು, ಈತನಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ನೆರೆ ಸಂತ್ರಸ್ಥರಿಗೆ ನೀಡಲು ಶೇಖರಿಸಲಾಗಿದ್ದ ಟಾರ್ಪಲ್ ಗಳನ್ನು ಪ್ರತಾಪ್ ಮತ್ತು ಸಂಗಡಿಗರು ಶಾಸಕರ ಕುಮ್ಮಕ್ಕಿನ ಮೇರೆಗೆ ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಮುಖ ಸುದ್ದಿ :-   ದೇಶಾದ್ಯಂತ ಬಹುಚರ್ಚಿತ ನಿಠಾರಿ ಹತ್ಯಾಕಾಂಡ ಪ್ರಕರಣದಲ್ಲಿ ಖುಲಾಸೆಯಾಗಿದ್ದ ಸುರಿಂದರ ಕೋಲಿ ಆತ್ಮಹತ್ಯೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement