ಭಾರತದಲ್ಲಿ 1.14 ಲಕ್ಷ ಹೊಸ ಪ್ರಕರಣ ದಾಖಲು,ಇದು 2 ತಿಂಗಳಲ್ಲಿ ಅತಿ ಕಡಿಮೆ

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1.14 ಲಕ್ಷ ಹೊಸ ಸೋಂಕುಗಳು ದಾಖಲಾಗಿದ್ದು,ಇದು ಕಳೆದ ಎರಡು ತಿಂಗಳಲ್ಲಿ ಅತಿ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಒಟ್ಟುಸೋಂಕಿನ ಸಂಖ್ಯೆ 2.88 ಕೋಟಿಗೆ ಏರಿದೆ. ಇದೇ ಸಮಯದಲ್ಲಿ 2,677 ಕೋವಿಡ್ ರೋಗಿಗಳು ವೈರಸ್‌ಗೆ ತುತ್ತಾಗಿ ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 3.46 ಲಕ್ಷಕ್ಕೆ ಏರಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 1,89,232 ಓಂಕಿತರು ರೋಗದಿಂದ ಚೇತರಿಸಿಕೊಂಡಿದ್ದಾರೆ. ಇದು ಒಟ್ಟು ಚೇತರಿಸಿಕೊಂವರ ಸಂಖ್ಯೆಯನ್ನು 2,69,84,781 ಕ್ಕೆ ತಳ್ಳಿದೆ. ಭಾರತದಲ್ಲಿ 14,77,799ಕ್ಕೆ ಸಕ್ರಿಯ ಪ್ರಕರಣಗಳು ಕುಸಿದಿವೆ.. ಕಳೆದ 24 ಗಂಟೆಗಳಲ್ಲಿ, ಸಕ್ರಿಯ ಪ್ರಕರಣಗಳು 77,449 ಕಡಿಮೆಯಾಗಿದೆ.
ಶನಿವಾರ ಪರೀಕ್ಷಿಸಿದ 20,36,311 ಮಾದರಿಗಳನ್ನು ಒಳಗೊಂಡಂತೆ ಜೂನ್ 5 ರವರೆಗೆ ದೇಶದಲ್ಲಿ 36,47,46,522 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಗರಿಷ್ಠ ಕೋವಿಡ್ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳಲ್ಲಿ 21,410 ಪ್ರಕರಣಗಳೊಂದಿಗೆ ತಮಿಳುನಾಡು, 17,328 ಪ್ರಕರಣಗಳೊಂದಿಗೆ ಕೇರಳ, 13,800 ಪ್ರಕರಣಗಳೊಂದಿಗೆ ಕರ್ನಾಟಕ, 13,659 ಪ್ರಕರಣಗಳಲ್ಲಿ ಮಹಾರಾಷ್ಟ್ರ ಮತ್ತು 10,373 ಪ್ರಕರಣಗಳೊಂದಿಗೆ ಆಂಧ್ರಪ್ರದೇಶಸೇರಿದೆ. ಭಾರತದ ಸಕ್ರಿಯ ಪ್ರಕರಣಗಳು ಮೊದಲ ಬಾರಿಗೆ 52 ದಿನಗಳ ನಂತರ 15 ಲಕ್ಷಕ್ಕಿಂತ ಕಡಿಮೆಯಾಗಿದೆ
ಈ ಐದು ರಾಜ್ಯಗಳಿಂದ ಸುಮಾರು 66.9 ರಷ್ಟು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಒಂದು ದಿನದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿರುವ ತಮಿಳುನಾಡು, ಹೊಸ ಕೊರೊನಾ ವೈರಸ್ ಪ್ರಕರಣಗಳಿಗೆ ಶೇಕಡಾ 18.71 ರಷ್ಟು ಕೊಡುಗೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ 2,677 ಸಾವುಗಳಲ್ಲಿ, ಮಹಾರಾಷ್ಟ್ರದಲ್ಲಿ (741) ಗರಿಷ್ಠ ಸಾವುನೋವುಗಳು ವರದಿಯಾಗಿವೆ. ತಮಿಳುನಾಡು ಒಂದು ದಿನದಲ್ಲಿ 443 ಸಾವುಗಳನ್ನು ದಾಖಲಿಸಿದೆ. ಭಾರತದ ಚೇತರಿಕೆ ಪ್ರಮಾಣವು ಈಗ ಶೇಕಡಾ 93.67 ರಷ್ಟಿದೆ.
ಕಳೆದ 24 ಗಂಟೆಗಳಲ್ಲಿ ಭಾರತವು ಒಟ್ಟು 33,53,539 ಡೋಸ್‌ಗಳನ್ನು ನೀಡಲಾಗಿದ್ದು, ಇದು ಒಟ್ಟು ಡೋಸ್‌ಗಳ ಪ್ರಮಾಣವನ್ನು 23,13,22,417 ಕ್ಕೆ ಏರಿಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 20,36,311 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಪ್ರಮುಖ ಸುದ್ದಿ :-   ʼಆಪರೇಷನ್ ಸಿಂಧೂರʼದಲ್ಲಿ ಭಾರತಕ್ಕೆ ಭಾರಿ ಯಶಸ್ಸು; ತನ್ನ ಸೋಲು ಮುಚ್ಚಿಕೊಳ್ಳಲು ಸುಳ್ಳು ಕಥೆ ಕಟ್ಟಿದ ಪಾಕ್‌ ಸೇನೆ : ನೂರೀನ್ ನಿಯಾಝಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement