ಭೋಪಾಲ: ಗಂಡುಮಗುವನ್ನು ಹೆರದ ಕಾರಣಕ್ಕೆ ಮಧ್ಯಪ್ರದೇಶದ ಛತ್ರಪುರದಲ್ಲಿ ಭಾನುವಾರ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಬಾವಿಗೆ ನೂಕಿದ ಘಟನೆ ನಡೆದಿದೆ. ಹೆಣ್ಣುಮಕ್ಕಳಲ್ಲಿ ಒಬ್ಬರು ಮುಳುಗಿದರೆ, ಮಹಿಳೆ ಮತ್ತು ಅವಳ ಆರು ತಿಂಗಳ ಶಿಶು ಪಾರಾಗಿದ್ದು, ಅವರಿಗೆ ಗಾಯಗಳಾಗಿವೆ.
ಮಧ್ಯಪ್ರದೇಶದ ಛತ್ರಪುರದಲ್ಲಿ ಭಾನುವಾರ ಸಂಜೆ ಈ ವ್ಯಕ್ತಿ ತನ್ನ ಹೆಂಡತಿಯನ್ನು ಅವಳ ತವರು ಮನೆಯಿಂದ ಕರೆತರುತ್ತಿದ್ದಾಗ ಈ ಘಟನೆ ನಡೆದಿದೆ.
ಮನೆಗೆ ಹಿಂದಿರುಗುವ ಬದಲು, ಆ ವ್ಯಕ್ತಿ ಯಾವುದೇ ಕಟ್ಟೆ ಇಲ್ಲದ ಬಾವಿಯ ಬಳಿ ನಿಲ್ಲಿಸಿದ. ತನ್ನ ಬೈಕನ್ನು ಬಾವಿಯ ಬಳಿ ನಿಲ್ಲಿಸಿ ತನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳನ್ನು ಅದರೊಳಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.
ಮಹಿಳೆ ತನ್ನ ಆರು ತಿಂಗಳ ಮಗಳೊಂದಿಗೆ ಬಾವಿಯಿಂದ ಹೊರಬರಲು ಯಶಸ್ವಿಯಾಗಿದ್ದರೆ, ದಂಪತಿಯ ಹಿರಿಯ ಮಗಳು ಮುಳುಗಿ ಮೃತಪಟ್ಟಿದ್ದಾಳೆ. ಸ್ಥಳೀಯರ ಸಹಾಯದಿಂದ ಮಹಿಳೆ ಪೊಲೀಸ್ ಠಾಣೆಗೆ ತಲುಪಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ.ಪೊಲೀಸರು ವ್ಯಕ್ತಿಗಾಗಿ ಶೋಧ ನಡೆಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ