ಕೋವಿಡ್‌ನಿಂದ ಸಂಕಷ್ಟ: ಹವ್ಯಕ ಮಂಡಳದಿಂದ 1.51 ಲಕ್ಷ ರೂ. ದೇಣಿಗೆ

ಬೆಳಗಾವಿ; ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ನೆರವಾಗುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್, ಸೇವಾಭಾರತಿ ಹಾಗೂ ಬಜರಂಗ ದಳ ಸಂಯುಕ್ತವಾಗಿ ನಡೆಸುತ್ತಿರುವ ಸೇವಾ ಕೇಂದ್ರಕ್ಕೆ ಇಲ್ಲಿನ ಹವ್ಯಕ ಮಂಡಳದ ಪ್ರಮುಖರು 1.51 ಲಕ್ಷ ದೇಣಿಗೆ ನೀಡಿದರು.
ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಸಮಾಜದವರು 3 ಲಕ್ಷ ರೂ.ಗಳ ವಂತಿಗೆಯನ್ನು ಸೇವಾಭಾರತಿ ಸಂಸ್ಥೆ ಮೂಲಕ ನೀಡಿದ್ದರು. ಈ ಬಾರಿ ಜನರಿಗೆ ನೆರವಾಗುತ್ತಿರುವ ಸೇವಾ ಕೇಂದ್ರಕ್ಕೆ ಸಹಾಯ ಮಾಡಿದ್ದಾರೆ.
​ಕೊ​ರೋನಾ ಮೊದಲ ಅಲೆಯ ಸಂದರ್ಭದಲ್ಲಿ ಹವ್ಯಕ ಸಮಾಜದವರು ​3 ಲಕ್ಷ ರೂ.ಗಳಿಗಿಂತ ಹೆಚ್ಚು ವಂತಿಗೆ​ಯನ್ನು​ ಸೇವಾಭಾರತಿ ಸಂಸ್ಥೆ​ ಮೂಲಕ ನೀಡಿದ್ದರು. ಈ ಬಾರಿ ​​ವಿಶ್ವಹಿಂದುಪರಿಷತ್, ಸೇವಾಭಾರತಿ ಹಾಗೂ ಭಜರಂಗದಳ ಸಂಯುಕ್ತವಾಗಿ ಬೆಳಗಾವಿ ಜನತೆಗೆ ​ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ನೀಡುತ್ತಿರುವ ಸೇವೆಯನ್ನು ತಿಳಿದು ಅವರ ನೆರವಿಗೆ ಹವ್ಯಕ ಮಂಡಳಿ ಪ್ರಮುಖರು ಮುಂದಾಗಿದ್ದಾರೆ.
ಹವ್ಯಕ ಮಂಡಳದ ಪ್ರಮುಖರಾದ ಭಾಸ್ಕರ್ ಕಡೇಕೋಡಿ, ಶಾಂತಾ ಹೆಗಡೆ, ಅನಂತ ಹೆಗಡೆ, ಸೇವಾಭಾರತಿ ನಗರ ಸಂಯೋಜಕ ರೋಹಿತ್ ದೇಶಪಾಂಡೆ, ಆರ್‌ಎಸ್‌ಎಸ್ ನಗರ ಸಂಪರ್ಕ ಪ್ರಮುಖ ಗುರುದತ್ತ ಕುಲಕರ್ಣಿ, ವಿಎಚ್‌ಪಿ ಸಹ ಕೋಶಾಧ್ಯಕ್ಷ ಕೃಷ್ಣ ಭಟ್, ವಿದ್ಯಾಭಾರತಿ ಪ್ರಾಂತ ಅಧ್ಯಕ್ಷ ಪರಮೇಶ್ವರ ಹೆಗಡೆ, ವಿಎಚ್‌ಪಿ ವಿಭಾಗ ಸಹ ಕಾರ್ಯದರ್ಶಿ ಅಚ್ಯುತ ಕುಲಕರ್ಣಿ, ನಗರ ಘಟಕದ ಅಧ್ಯಕ್ಷ ಡಾ.ಭಾಗೋಜಿ, ಜಿಲ್ಲಾ ಘಟಕದ ಕಾರ್ಯದರ್ಶಿ ವಿಜಯ ಜಾಧವ, ಬಜರಂಗ ದಳದ ನಗರ ಸಂಯೋಜಕ ಆದಿನಾಥ ಗಾವಡೆ ಹಾಗೂ ಕಾರ್ಯಕರ್ತರು ಇದ್ದರು.

ಪ್ರಮುಖ ಸುದ್ದಿ :-   ವಿಧಾನಸೌಧ ಸ್ಫೋಟದ ಎಐ ವಿಡಿಯೊ ಸೃಷ್ಟಿಸಿ ಹಂಚಿಕೊಂಡ ಆರೋಪ : ಕಿಡಿಗೇಡಿ ಬಂಧನ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement