ಎಲ್ಲ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಜಮ್ಮು-ಕಾಶ್ಮೀರದ ಈ ಕುಗ್ರಾಮ

ಶ್ರೀನಗರ: ಇದು ಕುಗ್ರಾಮ. ಈ ಹಳ್ಳಿಗೆ ಬರಬೇಕೆಂದರೆ 18 ಕಿ.ಮೀ ನಡೆಯಬೇಕು. ಬಹುಪಾಲು ಮಂದಿ ಅಲೆಮಾರಿಗಳು. ಜಮ್ಮು ಕಾಶ್ಮೀರದ ಈ ಕುಗ್ರಾಮ ಇದೀಗ ಕೊರೊನಾ ವಿರುದ್ಧ ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಹಳ್ಳಿಯ ಹೆಸರು ವೆಯಾನ್. ಇಲ್ಲಿ 18 ವರ್ಷ ಮೇಲ್ಪಟ್ಟ 362 ವಯಸ್ಕರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ಮೂಲಕ ಎಲ್ಲಾ ವಯಸ್ಕರಿಗೂ ಲಸಿಕೆ ದೇಶದ ಮೊದಲ ಹಳ್ಳಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಂಡಿಪೋರಾ ಜಿಲ್ಲಾ ಕೇಂದ್ರದಿಂದ ಈ ಗ್ರಾಮ ಕೇವಲ 28 ಕಿ.ಮೀ ದೂರದಲ್ಲಿದೆ. ಆದರೆ ಇಲ್ಲಿಗೆ ಬರಲು ರಸ್ತೆ ಇಲ್ಲ. ಹೀಗಾಗಿ 18 ಕಿಮೀ ದೂರ ಕಾಲ್ನಡಿಯಲ್ಲಿಯೇ ಸಾಗಬೇಕು. . ಇದಾಗ್ಯೂ ಆರೋಗ್ಯ ಕಾರ್ಯಕರ್ತರು ಇಲ್ಲಿನ ಎಲ್ಲರಿಗೂ ಲಸಿಕೆ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಈ ಗ್ರಾಮದಲ್ಲಿ ಕೊರೊನಾ ಲಸಿಕೆ ನೀಡುವುದು ಅಷ್ಟು ಸುಲಭವಿರಲಿಲ್ಲ. ಇಲ್ಲಿ ಅಲೆಮಾರಿ ಕುಟುಂಬಗಳೇ ಹೆಚ್ಚಿರುವ ಕಾರಣ ಜಾನುವಾರುಗಳನ್ನು ಮೇಯಿಸಲು ಹೋಗುತ್ತಿರುತ್ತಾರೆ. ಎಲ್ಲಾ ನಿವಾಸಿಗಳಿಗೆ ಲಸಿಕೆ ಹಾಕುವ ಕಾರ್ಯ ನಿಜಕ್ಕೂ ಸವಾಲೆನಿಸಿತ್ತು” ಎಂದು ಇಲ್ಲಿನ ಮುಖ್ಯ ವೈದ್ಯಾಧಿಕಾರಿ ಬಶೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಆರಂಭದಲ್ಲಿ ಇಲ್ಲಿನ ಜನರಿಗೆ ಲಸಿಕೆ ಕುರಿತು ಹಿಂಜರಿಕೆ ಇತ್ತು. ಆದರೆ ಆರೋಗ್ಯ ಕಾರ್ಯಕರ್ತರು ಲಸಿಕೆ ಕುರಿತು ಜಾಗೃತಿ ಮೂಡಿಸಿ ಅವರ ಮನವೊಲಿಸಿದ್ದಾರೆ. ಜಮ್ಮು ಕಾಶ್ಮೀರ ಲಸಿಕಾ ಅಭಿಯಾನದಲ್ಲಿ ಮುಂದಿದ್ದು, ಈಗಾಗಲೇ 45 ಮೇಲ್ಪಟ್ಟ ಶೇ.70 ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ದ್ವಿಗುಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement