ಮಹತ್ವದ ನಿರ್ಧಾರ.. ಆಗಸ್ಟ್‌ 28, 29ರಂದು ಸಿಇಟಿ ಪರೀಕ್ಷೆ, ವೃತ್ತಿ ಕೋರ್ಸುಗಳಿಗೆ ಸಿಇಟಿ ಅಂಕ ಮಾತ್ರ ಪರಿಗಣನೆ

ಬೆಂಗಳೂರು : ವೃತ್ತಿಪರ ಕೋರ್ಸುಗಳ ಆಯ್ಕೆಗಾಗಿ ನಡೆಯುವಂತ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಆಗಸ್ಟ್ 28, 29 ರಂದು ನಡೆಯಲಿದೆ ಹಾಗೂ ವೃತ್ತಿ ಕೋರ್ಸುಗಳಿಗೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎಸ್. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಸಿಇಟಿ ಪರೀಕ್ಷೆ ಈ ಮೊದಲಿನಂತೆಯೇ ಇರುತ್ತದೆ.ಪ್ರತಿ ವಿಷಯಗಳಿಗೆ 60 ಮಾರ್ಕ್ಸ್‌ ಇರುತ್ತದೆ. ಎರಡು ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದ್ದಾರೆ,ಆಗಸ್ಟ್ 28, 29 ರಂದು ಸಿಇಟಿ ನಡೆಯಲಿದ್ದು, ಜೂನ್ 15 ರಿಂದ ಸಿಇಟಿ ಪರೀಕ್ಷೆಗೆ ನೋಂದಣಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಪಿಯುಸಿ ಮಾರ್ಕ್ ಅನ್ನು ಈ ವರ್ಷ ಪರಿಗಣೆಗೆ ತೆಗೆದುಕೊಳ್ಳುವುದಿಲ್ಲ. ಈ ವರ್ಷ ಸಿಇಟಿ ಪರೀಕ್ಷೆಯ ಅಂಕವನ್ನು ಪರಿಗಣಿಸಿಯೇ ರ್ಯಾಂಕ್‌ ನೀಡಲಾಗುತ್ತದೆ. ಮೊದಲ ದಿನ ಗಣಿತ ಹಾಗೂ ಬಯೋಲಜಿ ಪರೀಕ್ಷ ನಡೆಯಲಿದೆ. ಎರಡನೇ ದಿನ ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿದೆ. ಮೂರನೇ ದಿನ ಗಡಿನಾಡಿನ ಕನ್ನಡಿಗರಿಗೆ ಪ್ರತ್ಯೇಕವಾಗಿ ಕನ್ನಡ ಪರೀಕ್ಷೆ ನಡೆಯಲಿದೆ. ಜೂನ್.15ರಿಂದ ಸಿಇಟಿ ಪರೀಕ್ಷೆ ಪರೀಕ್ಷೆಗೆ ನೊಂದಣಿ ಆರಂಭವಾಗಲಿದೆ ಎಂದರು.

ಪ್ರಮುಖ ಸುದ್ದಿ :-   ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್ : ಸಂತ್ರಸ್ತ ಮಹಿಳೆ ವೀಡಿಯೊ ವೈರಲ್‌

ಸಿಇಟಿಯಲ್ಲಿ ನೀಟ್ ತರಹ ಮಿನಿಮಮ್ ಮಾರ್ಕ್ ಪರಿಗಣಿಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು. ಅಂಕಿ ಅಂಶಗಳನ್ನು ನೋಡಿ, ಯಾವುದು ಸೂಕ್ತ ಎನ್ನುವ ದಿಕ್ಕಿನಲ್ಲಿ ಕೂಡ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ವರ್ಷ ದ್ವಿತೀಯ ಪಿಯುಸಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೀಗಾಗಿ ಶೇ.30ರಷ್ಟು ಹೆಚ್ಚುವರಿ ವಿದ್ಯಾರ್ಥಿಗಳು ಪದವಿಗೆ ಬರಲಿದ್ದಾರೆ. ಅದಕ್ಕೆ ಎಲ್ಲ ವ್ಯವಸ್ಥೆಮಾಡಲಾಗುತ್ತದೆ. ಜೊತೆಗೆ ವಿಜ್ಷಾನ ವಿಭಾಗಕ್ಕೆ ಹೋಗುವವರಿಗೆ ಪ್ರವೇಶ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

4.2 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement