ಅಲ್ಝೈಮರ್ ಕಾಯಿಲೆ ಹೊಸ ಔಷಧಕ್ಕೆ ಅಮೆರಿಕ ಶರತ್ತಿನ ಅನುಮೋದನೆ

ವಾಷಿಂಗ್ಟನ್: ಮೆದುಳಿನ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುವ ಅಲ್ಝೈಮರ್ಸ್ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಸಲಾಗುವ ನೂತನ ಔಷಧ ‘ಅಡುಹೆಲ್ಮ್’ಗೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಸೋಮವಾರ ಅಂಗೀಕಾರ ನೀಡಿದೆ.
ಇದು 2003ರ ಬಳಿಕ ಈ ರೋಗಕ್ಕೆ ಅಮೆರಿಕದಲ್ಲಿ ಅಂಗೀಕಾರ ಪಡೆದ ಮೊದಲ ಔಷಧವಾಗಿದೆ.
ಈ ಔಷಧದಿಂದ ನಿರೀಕ್ಷಿತ ವೈದ್ಯಕೀಯ ಪ್ರಯೋಜನ ಲಭಿಸಿದೆಯೇ ಎನ್ನುವ ಸಮೀಕ್ಷೆಗೆ ನಂತರ ಅದು ಒಳಪಡಬೇಕು. ನಿರೀಕ್ಷಿತ ಪ್ರಯೋಜನ ಕಂಡುಬರದಿದ್ದರೆ ಔಷಧವನ್ನು ಇಲಾಖೆಯು ವಾಪಸ್ ಪಡೆದುಕೊಳ್ಳಬಹುದಾಗಿದೆ.
ಅಲ್ಝೈಮರ್ ಕಾಯಿಲೆಯು ನಿಧಾನವಾಗಿ ವ್ಯಾಪಿಸುವ ಮೆದುಳಿನ ಕಾಯಿಲೆಯಾಗಿದೆ. ಅದು ನಿಧಾನವಾಗಿ ನೆನಪು ಮತ್ತು ಯೋಚಿಸುವ ಶಕ್ತಿಯನ್ನು ನಾಶಪಡಿಸುತ್ತದೆ ಹಾಗೂ ಬಳಿಕ ಸಣ್ಣ ಕೆಲಸ ಮಾಡುವ ರೋಗಿಯ ಸಾಮರ್ಥ್ಯವನ್ನು ಕಿತ್ತುಕೊಳ್ಳುತ್ತದೆ. ಜಗತ್ತಿನಲ್ಲಿ ಸುಮಾರು 60 ಲಕ್ಷ ಮಂದಿ ಅಲ್ಝೈಮರ್ಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ.‌

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement