ತನ್ನ ಸಂದೇಶದ ಜೊತೆಗೆ, ಗಡ್ಡ ಕತ್ತರಿಸಿಕೊಳ್ಳಲು ಪಿಎಂ ಮೋದಿಗೆ 100 ರೂ. ಕಳುಹಿಸಿದ ಚಹಾ ಮಾರಾಟಗಾರ..!

ಮಹಾರಾಷ್ಟ್ರದ ಬಾರಾಮತಿಯ ಚಹಾ ಮಾರಾಟಗಾರರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ 100 ರೂ.ಗಳ ಹಣದ ಮನಿ ಆರ್ಡರ್‌ ಕಳುಹಿಸಿದ್ದು, ತಮ್ಮ ಗಡ್ಡ ಕತ್ತರಿಸಿಕೊಳ್ಳಿ ಎಂದು ಮೋದಿಯವರಿಗೆ ಹೇಳಿದ್ದಾರೆ ಎಂಬುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ನನಗೆ ಪ್ರಧಾನಿ ಮೋದಿ ಅವರ ಮೇಲೆ ಅತ್ಯಂತ ಗೌರವವಿದೆ. ಆದರೆ ಕಳೆದ ಒಂದೂವರೆ ವರ್ಷಗಳಲ್ಲಿ, ಕೋವಿಡ್-ಪ್ರೇರಿತ ಲಾಕ್‌ಡೌನ್‌ನಿಂದಾಗಿ ಅಸಂಘಟಿತ ವಲಯಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ಗಮನ ಸೆಳೆಯಲು ಹೀಗೆ ಮಾಡಿರುವುದಾಗಿ ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.
ದೀರ್ಘ ಕಾಲದ ಲಾಕ್‌ ಡೌನ್‌ನಿಂದ ಅಸಮಾಧಾನಗೊಂಡ ಬಾರಾಮತಿ ಇಂದಾಪುರ ರಸ್ತೆಯ ಖಾಸಗಿ ಆಸ್ಪತ್ರೆಯ ಎದುರಿನ ಸಣ್ಣ ಚಹಾ ಅಂಗಡಿಯೊಂದರ ಮಾಲೀಕ ಅನಿಲ್ ಮೋರೆ, “ಪ್ರಧಾನಿ ಮೋದಿ ತಮ್ಮ ಗಡ್ಡವನ್ನು ಬೆಳೆಸಿದ್ದಾರೆ. ಅವರು ಏನನ್ನಾದರೂ ಹೆಚ್ಚಿಸಬೇಕಾದರೆ, ಅದು ಈ ದೇಶದ ಜನರಿಗೆ ಉದ್ಯೋಗಾವಕಾಶಗಳಾಗಿರಬೇಕು. ದೇಶದ ಜನಸಂಖ್ಯೆಗೆ ವ್ಯಾಕ್ಸಿನೇಷನ್ ವೇಗಗೊಳಿಸಲು ಪ್ರಯತ್ನಿಸಬೇಕು ಮತ್ತು ಅಸ್ತಿತ್ವದಲ್ಲಿರುವ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕು. ಕೊನೆಯ ಎರಡು ಲಾಕ್‌ಡೌನ್‌ಗಳಿಂದ ಉಂಟಾಗಿರುವ ದುಃಖಗಳನ್ನು ಜನರು ತೊಡೆದುಹಾಕಿದ್ದಾರೆ ಎಂದು ಪ್ರಧಾನಿ ಮೋದಯವರು ಖಚಿತಪಡಿಸಿಕೊಳ್ಳಬೇಕುಎಂದು ಹೇಳಿದ್ದಾರೆ.
ಅಲ್ಲದೆ, ಪ್ರಧಾನಮಂತ್ರಿಯ ಸ್ಥಾನವು ದೇಶದಲ್ಲಿ ಅತ್ಯುನ್ನತ ಸ್ಥಾನವಾಗಿದೆ ಎಂದು ಹೇಳಿರುವ ಅವರು, ನಮ್ಮ ಪ್ರಧಾನ ಮಂತ್ರಿಯ ಬಗ್ಗೆ ನನಗೆ ಅತ್ಯಂತ ಗೌರವ ಮತ್ತು ಹೆಮ್ಮೆ ಇದೆ. ನನ್ನ ಉಳಿತಾಯದಲ್ಲಿ ನಾನು 100 ರೂ.ಗಳನ್ನು ಅವರಿಗೆ ಕಳುಹಿಸುತ್ತಿದ್ದೇನೆ. ಅವರು ತಮ್ಮ ಗಡ್ಡವನ್ನು ಕ್ಷೌರ ಮಾಡಿಸಿಕೊಳ್ಳಬೇಕು. ಅವರು ನಮ್ಮ ಸರ್ವೋಚ್ಚ ನಾಯಕ ಮತ್ತು ನಾನು ಅವರನ್ನು ನೋಯಿಸುವ ಉದ್ದೇಶದಿಂದ ಹಣ ಕಳುಹಿಸಿಲ್ಲ. ಆದರೆ ಸಾಂಕ್ರಾಮಿಕ ರೋಗದಿಂದಾಗಿ ದಿನದಿಂದ ದಿನಕ್ಕೆ ಬಡವರ ಸಮಸ್ಯೆಗಳು ಬೆಳೆಯುತ್ತಿರುವ ರೀತಿಗೆ ಅವರ ಗಮನ ಸೆಳೆಯುವ ಮಾರ್ಗ ಇದು ಎಂದು ಭಾವಿಸಿ ಕಳುಹಿಸುತ್ತಿದ್ದೇನೆ”ಎಂದು ಅವರು ಹೇಳಿದ್ದಾರೆ.
ಕೋವಿಡ್‌-19 ಮೃತಪಟ್ಟ ಕುಟುಂಬಗಳಿಗೆ 5 ಲಕ್ಷ ರೂ. ಮತ್ತು ಲಾಕ್‌ಡೌನ್‌ನಿಂದ ಹಾನಿಗೊಳಗಾದ ಕುಟುಂಬಗಳಿಗೆ 30,000 ರೂ.ಗಳ ಆರ್ಥಿಕ ನೆರವು ನೀಡುವಂತೆ ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ಮೋರೆ ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement