ಮೈಸೂರು: ಭೂ ಒತ್ತುವರಿ ಆರೋಪಕ್ಕೆ ಸಾರಾ ಕಲ್ಯಾಣ ಮಂಟಪ ಪರಿಶೀಲನೆಗೆ ತಂಡ ರಚನೆ

posted in: ರಾಜ್ಯ | 0

ಮೈಸೂರು: ಸಾರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆಯೇ ಇಲ್ಲವೇ ಎನ್ನುವ ಕುರಿತು ಪರಿಶೀಲನೆ ನಡೆಸಲು ತಂಡ ರಚಿಸಲಾಗಿದೆ.
ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸಾರಾ ಕಲ್ಯಾಣ ಮಂಟಪವನ್ನು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಅದರ ಮೇಲೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಆರೋಪದ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದ ಶಾಸಕ ಸಾರಾ ಮಹೇಶ್‌ ಅವರು ಪರಿಶೀಲನೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಪರಿಶೀಲನೆಗೆ ತಂಡ ರಚಿಸಿರುವ ಪ್ರಾದೇಶಿಕ ಆಯುಕ್ತರಾದ ಡಾ. ಜಿ.ಸಿ. ಪ್ರಕಾಶ್‌ ಅವರು ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ತಂಡ ರಚಿಸಿದ್ದಾರೆ.
ಪರಿಶೀಲನಾ ತಂಡದಲ್ಲಿ ಭೂ ದಾಖಲೆಗಳ ಉಪ ನಿರ್ದೇಶಕರಾದ ಜಿ. ಸೀಮಂತಿನಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಎಚ್.‌ ಮಂಜುನಾಥ್‌, ಅಧೀಕ್ಷಕರಾದ ಜನೀಶ್‌ ಕುಮಾರ್‌, ನಾಗೇಶ್‌ ಎಂ.ವಿ., ಮಹದೇವ್‌ ಅವರು ತಂಡದಲ್ಲಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ