ಸುಶಾಂತ್ ಸಿಂಗ್ ಜೀವನ ಕುರಿತಾದ ಚಿತ್ರದ ಬಿಡುಗಡೆಗೆ ತಡೆ ಕೋರಿ ತಂದೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ದೆಹಲಿ ಹೈಕೋರ್ಟ್

ನವದೆಹಲಿ; ದಿವಂಗತ ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್​ ಅವರ ಜೀವನವನ್ನು ಆಧರಿಸಿ “ನ್ಯಾಯ್: ದಿ ಜಸ್ಟೀಸ್” ಚಿತ್ರವೂ ತಯಾರಾಗಿದೆ. ಈ ಚಿತ್ರ ನಾಳೆ (ಶುಕ್ರವಾರ)ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ತಡೆ ನೀಡಬೇಕೆಂದು ನಟ ಸುಶಾಂತ್ ಸಿಂಗ್ ರಜಪೂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಈ ಚಿತ್ರವನ್ನು “ಕುಟುಂಬದ ಒಪ್ಪಿಗೆಯಿಲ್ಲದೆ ಚಿತ್ರೀಕರಿಸಲಾಗಿದೆ ಮತ್ತು ಮಗನ ಆತ್ಮಹತ್ಯೆಯಲ್ಲಿ ಪಾತ್ರವಿದೆ ಎಂದು ಆರೋಪಿಸಲ್ಪಟ್ಟ ವ್ಯಕ್ತಿಗಳನ್ನು ಚಿತ್ರದಲ್ಲಿ ವಿಶ್ವಾಸಾರ್ಹರು ಎಂದು ತೋರಿಸಲಾಗಿದೆ. ಇದು ಪ್ರಕರಣ ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ” ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ನ್ಯಾಯಮೂರ್ತಿ ಸಂಜೀವ್ ನರುಲಾ ನೇತೃತ್ವದ ನ್ಯಾಯಪೀಠವು ಕೃಷ್ಣ ಕಿಶೋರ್ ಸಿಂಗ್ ಅರ್ಜಿಯನ್ನು ವಜಾಗೊಳಿಸಿದೆ. ಏಪ್ರಿಲ್‌ನಲ್ಲಿ ದೆಹಲಿ ಹೈಕೋರ್ಟ್ ವಿವಿಧ ಚಲನಚಿತ್ರಗಳ ನಿರ್ಮಾಪಕರಿಗೆ, ನಟ ಸುಶಾಂತ್ ರಜಪೂತ್ ಅವರ ತಂದೆಯ ಮನವಿಗೆ ಸ್ಪಂದಿಸಲು ತಿಳಿಸಿತ್ತು. ತಮ್ಮ ಮಗನ ಹೆಸರು ಅಥವಾ ಹೋಲಿಕೆಯನ್ನು ಬೆಳ್ಳಿ ಪರದೆಯಲ್ಲಿ ಬಳಸದಂತೆ ತಡೆಯಲು ಕೃಷ್ಣ ಕಿಶೋರ್ ಸಿಂಗ್ ಪ್ರಯತ್ನಿಸಿದ್ದರು.
ನ್ಯಾಯ್‌: ದಿ ಜಸ್ಟೀಸ್” ಚಿತ್ರದ ಜೊತೆಗೆ, ಸುಶಾಂತ್ ರಜಪೂತ್ ಅವರ ಜೀವನದ ಸುತ್ತ ಸುತ್ತುವ, ಸೂಸೈಡ್ ಆರ್ ಮರ್ಡರ್: ಎ ಸ್ಟಾರ್ ವಾಸ್ ಲಾಸ್ಟ್’, ‘ಶಶಾಂಕ್’ ಮತ್ತು ಇನ್ನೂ ಹೆಸರಿಡದ ಹಲವು ಚಿತ್ರಗಳು ತೆರೆಗೆ ಬರಲು ಸಿದ್ಧವಾಗುತ್ತಿವೆ.
ಚಲನಚಿತ್ರ ನಿರ್ಮಾಪಕರು ಪರಿಸ್ಥಿತಿಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಾಟಕಗಳು, ಚಲನಚಿತ್ರಗಳು, ವೆಬ್-ಸರಣಿಗಳು, ಪುಸ್ತಕಗಳು, ಸಂದರ್ಶನಗಳು ಅಥವಾ ಇತರ ವಸ್ತುಗಳನ್ನು ಪ್ರಕಟಿಸಲಾಗುತ್ತಿದೆ. ಇವುಗಳಿಂದ ತಮ್ಮ ಮಗನ ಪ್ರತಿಷ್ಠೆ ಮತ್ತು ಕುಟುಂಬಕ್ಕೆ ಧಕ್ಕೆ ತರುತ್ತದೆ” ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ