ಸೆಲ್ಫಿ ಹುಚ್ಚಿಗೆ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಯುವಕ 

posted in: ರಾಜ್ಯ | 0

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಹೆಡ್‌  ಬಂದರಿನ ಸಮುದ್ರ ತೀರದಲ್ಲಿ ಯುವಕನೊಬ್ಬ ಬಂಡೆಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಕಾಲುಜಾರಿ ಅರಬ್ಬಿ ಸಮುದ್ರದಲ್ಲಿ ಬಿದ್ದಿದ್ದಾನೆಎಂದು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಹುಡುಕಾಟ ನಡೆಸಿದರೂಅವರಿಗೆ ಯುವಕನ ಬಗ್ಗೆ ಸುಳಿವು ದೊರೆತಿಲ್ಲ. ಆದರೆ ದಡದಲ್ಲಿ ಇರುವ ಸ್ಕೂಟರ್‌ ಸಮುದ್ರ ಪಾಲಾಗಿದ್ದಾನೆ ಎಂದು ಹೇಳಲಾದ ಯುವಕನದ್ದು ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಸ್ಕೂಟರ್ ಬೆಂಗಳೂರಿನಲ್ಲಿರುವ ಯುವತಿಯ ಹೆಸರಿನಲ್ಲಿದೆ ಎಂದು ಕಂಡುಹಿಡಿದಿದ್ದಾರೆ. ಆದರೆ ಸಮುದ್ರದಲ್ಲಿ ಬಿದ್ದಿದ್ದಾನೆ ಎಂದು ಹೇಳಲಾಗುತ್ತಿರುವ ಯುವಕ ಯಾರೆಂದು ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕುಮಟಾ ಪೊಲೀಸರು ಮತ್ತು ಅಗ್ನಿ ಶಾಮಕದಳ ಯುವಕನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4.3 / 5. ಒಟ್ಟು ವೋಟುಗಳು 6

ನಿಮ್ಮ ಕಾಮೆಂಟ್ ಬರೆಯಿರಿ