ತಂದೆ ಕೊರೊನಾದಿಂದ ಸಾವಿಗೀಡಾದ ನಂತರ  ಕುಟುಂಬ ಪೋಷಿಸಲು ಪುರೋಹಿತಳಾದ 10 ವರ್ಷದ ಬಾಲಕಿ..!

ತಂದೆ ಕೋವಿಡ್ -19 ರಿಂದ ನಿಧನರಾದ ನಂತರ, ತನ್ನ ತಂದೆಯ ಪುರೋಹಿತ ವೃತ್ತಿಯನ್ನು ಕೇವಲ 10 ವರ್ಷದ ಮಗಳು ಶ್ರೀವಿದ್ಯಾ ಮುಂದುವರಿಸಿದ್ದಾಳೆ..!
ತೆಲಂಗಾಣದ ನಿಜಾಮಾಬಾದ್ ಜಿಲ್ಲೆಗೆ ಸೇರಿದ ಬೊಗರಾಮ್ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಆಕೆಯ ತಂದೆ ಸಂತೋಷ್ ಪೂಜಾರಿ ಆಗಿದ್ದರು ಮತ್ತು ಕೊರೊನಾ ವೈರಸ್ ಕಾಯಿಲೆಯಿಂದ ಇತ್ತೀಚೆಗೆ ನಿಧನರಾದರು.
ಸಾಂಕ್ರಾಮಿಕ ಪರಿಣಾಮ ತನ್ನ ತಂದೆ ಕಳೆದುಕೊಂಡ ನಂತರ ನಂತರ ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ ತನ್ನ ಕುಟುಂಬ ಪೋಷಣೆಗಾಗಿ ಪುಟ್ಟ ಹುಡುಗಿ ಈಗ ತಂದೆಯ ಪುರೋಹಿತ ವೃತ್ತಿ ಮಾಡುತ್ತಿದ್ದಾಳೆ.
ಅವಳು ಪೂಜೆಗಳು, ವ್ರತಗಳು, ಮದುವೆಗಳಿಗೆ, ಇತರ ಧಾರ್ಮಿಕ ಸಮಾರಂಭಗಳಿಗೆ ಪುರೋಹಿತಳಾಗಿ ಹೋಗುತ್ತಾಳೆ. ತನ್ನ ಮನೆ ನಿರ್ವಹಣೆ ಮಾಡುತ್ತಾಳೆ. ತನ್ನ ಕುಟುಂಬ ಉದ್ಯೋಗವನ್ನು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮಾಡುತ್ತಿದ್ದಾಳೆ.
ತನ್ನ ಇತರ ಇಬ್ಬರು ಒಡಹುಟ್ಟಿದವರಿಗಿಂತ ಹಿರಿಯಳಾದ ಶ್ರೀವಿದ್ಯಾ, ಕೋವಿಡ್‌ಗೆ ಸಂಬಂಧಿಸಿದ ಶ್ವಾಸಕೋಶದ ಸಮಸ್ಯೆಗಳಿಂದಾಗಿ ತಂದೆ ಮೃತಪಟ್ಟಿದ್ದನ್ನು ನೋಡಿದ್ದಾಳೆ.
ಸಹಾಯ ಮಾಡಲು ಯಾರೂ ಇಲ್ಲದಿದ್ದಾಗ, ಅವಳು ತನ್ನ ಕುಟುಂಬ ನಿರ್ವಹಣೆಗೆ ಈ ವೃತ್ತಿ ಕೈಗೆತ್ತಿಕೊಂಡಳು, ತನ್ನ ತಂದೆಯಿಂದ ಮಂತ್ರಗಳು ಮತ್ತು ಸ್ತುತಿಗೀತೆಗಳನ್ನು ಕಲಿತಿದ್ದಳು ಮತ್ತು ಹತ್ತಿರದ ಹಳ್ಳಿಗಳಲ್ಲಿ ಸಮಾರಂಭಗಳಿಗೆ ತಂದೆ ಜೊತೆ ಹೋಗುತ್ತಿದ್ದಳು.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement