ಭೂ ಒತ್ತುವರಿ ಆರೋಪ; ಕಳಂಕಿತರ ರಕ್ಷಿಸುವ ಕೆಲಸ ನಡೆಯುತ್ತಿದೆ

posted in: ರಾಜ್ಯ | 0

ಮೈಸೂರು: ಶಾಸಕ ಸಾ.ರಾ.ಮಹೇಶ್ ವಿರುದ್ಧ ಭೂ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಕಳಂಕಿತರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್.ವಿಶ್ವನಾಥ್ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿ ನಡೆದದ್ದು ಹೈಡ್ರಾಮಾ. ಶಾಸಕರು ಪ್ರತಿಭಟನೆ ಮಾಡಿದಂತೆ, ಆರ್.ಸಿ. ಮನವಿ ಸ್ವೀಕರಿಸಿದಂತೆ, ತನಿಖೆ ಮಾಡುವುದಾಗಿ ಭರವಸೆ ನೀಡಿದ ನಾಟಕ ಮಾಡಲಾಗಿದೆ. ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದಾಗ ಪ್ರಾದೇಶಿಕ ಆಯುಕ್ತರು ತನಿಖೆಗಾಗಿ ಸಮಿತಿಯನ್ನೇ ರಚನೆ ಮಾಡಿಬಿಟ್ಟಿದ್ದಾರೆ. ವರದಿ ಕೊಡುವ ಸಮಯ ಕೂಡ ನಿಗದಿ ಮಾಡಿದ್ದಾರೆ. ಪ್ರಾದೇಶಿಕ ಆಯುಕ್ತರ ವೇಗ ನೋಡಿಯೇ ನಮಗೆಲ್ಲ ಗಾಬರಿಯಾಗಿದೆ ಎಂದು ಟೀಕಿಸಿದರು.
ಈ ವಿಷಯದಲ್ಲಿ ಪ್ರಾದೇಶಿಕ ಆಯುಕ್ತರು ಮತ್ತು ಕಳಂಕಿತರ ನಡುವೆ ಒಪ್ಪಂದ ಆಗಿದೆ. ಈಗಾಗಲೇ ವರದಿ ಸಿದ್ಧವಾಗಿ ಬಿಟ್ಟಿದೆ. ಸೋಮವಾರ ಅದನ್ನು ಬಿಡುಗಡೆ ಮಾಡುತ್ತಾರೆ ಅಷ್ಟೆ. ಆರ್.ಸಿ. ಏನು ವರದಿ ಕೊಡುತ್ತಾರೆ ಎಂಬುದೂ ಗೊತ್ತಿದೆ ಎಂದು ಹೆಚ್‌.ವಿಶ್ವನಾಥ್ ಹೇಳಿದ್ದಾರೆ.
ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಮಾಡಿದ ಆದೇಶ ಬಿಟ್ಟು ಅನುಕೂಲಕವಾದ ಭಾಗದ ತನಿಖೆಗೆ ಮಾತ್ರ ಆಗ್ರಹ ಮಾಡಲಾಗಿದೆ. ಪ್ರಾದೇಶಿಕ ಆಯುಕ್ತರು ಸೋಮವಾರ ಕೊಡುವ ವರದಿಗೆ ಯಾವ ಬೆಲೆಯೂ ಇಲ್ಲ. ರೋಹಿಣಿ ಸಿಂಧೂರಿ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುವ ಯತ್ನ ಈ ವರದಿ ಮೂಲಕ ನಡೆದಿದೆ. ಪ್ರಾದೇಶಿಕ ಆಯುಕ್ತರಿಗೆ ಒಳ್ಳೆಯ ಹೆಸರಿಲ್ಲ. ಪ್ರಾದೇಶಿಕ ಆಯುಕ್ತರು ಕಳಂಕಿತರ ಬಗ್ಗೆ ಸೋಮವಾರ ನೀಡುವ ವರದಿ ಜನ ನಂಬಬಾರದು ಎಂದು ವಿಸ್ವನಾಥ ಹೇಳಿದ್ದಾರೆ..

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ