ದೇಶದಲ್ಲಿ 31,219 ಬ್ಲ್ಯಾಕ್​ ಫಂಗಸ್ ಪ್ರಕರಣಗಳು, 2,109 ಸಾವು; ಕರ್ನಾಟಕದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು

ನವದೆಹಲಿ; ಕೋವಿಡ್​-19ನಿಂದ ಚೇತರಿಸಿಕೊಂಡವರಲ್ಲಿ ಮ್ಯುಕರ್​ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಈಗ ಹೆಮ್ಮಾರಿಯಾಗಿ ಕಾಡುತ್ತಿದೆ. ಈ ಭಯಾನಕ ರೋಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕಳೆದ ಮೂರು ವಾರಗಳಲ್ಲಿ ಸೋಂಕಿನ ಪ್ರಮಾಣ ಶೇಕಡಾ 150ರಷ್ಟು ಬೆಳೆದಿದೆ. ಮರಣ ಪ್ರಮಾಣ ಶೇಕಡಾ 50ರಷ್ಟಿದೆ. ಸುಮಾರು 20 ದಿನಗಳಲ್ಲಿ ದೇಶದ ವಿವಿಧೆಡೆ 31,216 ಪ್ರಕರಣಗಳು ಮತ್ತು 2,109 ಸಾವುಗಳು ವರದಿಯಾಗಿವೆ.
ಕೋವಿಡ್​-19ನಂತೆ 7,057 ಪ್ರಕರಣಗಳು ಮತ್ತು 609 ಸಾವುಗಳೊಂದಿಗೆ ಮಹಾರಾಷ್ಟ್ರ ರಾಜ್ಯವು ಬ್ಲ್ಯಾಕ್​ ಫಂಗಸ್​​ನ ಸೋಂಕಿನ ಪ್ರಮಾಣದಲ್ಲೂ ಅಗ್ರಸ್ಥಾನದಲ್ಲಿದೆ. ಗುಜರಾತ್​ನಲ್ಲಿ 5,418 ಪ್ರಕರಣಗಳು ಮತ್ತು 323 ಸಾವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನದಲ್ಲಿ 2,976 ಪ್ರಕರಣಗಳಿದ್ದು ರಾಜಸ್ತಾನವು ಮೂರನೇ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ ಜೂನ್​ 9 ರ ವರಗೆ 2,282 ಬ್ಲ್ಯಾಕ್​ ಫಂಗಸ್ ಪ್ರಕರಣಗಳಿವೆ. 102 ಜನ ಗುಣಮುಖರಾಗಿದ್ದಾರೆ. ಸೋಂಕಿಗೆ 157 ಜನ ಮೃತಪಟ್ಟಿದ್ದಾರೆ.
ಛತ್ತೀಸ್​ಗಡ್​ನಲ್ಲಿ ಇದುವೆರೆಗೆ ಬ್ಲ್ಯಾಕ್​ ಫಂಗಸ್​​ನಿಂದ ಸೋಂಕಿತರಾಗಿದ್ದ 28 ಜನ ಮೃತಪಟ್ಟಿದ್ದಾರೆ. ಆದರೆ ಅವರಲ್ಲಿ 17 ಜನರ ಸಾವಿಗೆ ಬ್ಲ್ಯಾಕ್​ ಫಂಗಸ್ ಕಾರಣವಾಗಿದ್ದರೆ ಉಳಿದ 11 ಜನರು ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದರಿಂದ ಮೃತಪಟ್ಟಿದ್ದಾರೆ ಎಂದು ಛತ್ತೀಸ್​ಗಡ್​ ರಾಜ್ಯ ಅರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 1,744 ಬ್ಲ್ಯಾಕ್​ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ ಮತ್ತು 142 ಜನ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ 1,200 ಪ್ರಕರಣಗಳು ಮತ್ತ 125 ಸಾವುಗಳು ವರದಿಯಾಗಿವೆ.
ಒಂದು ಗಂಭೀರ ಸ್ವರೂಪದ ಫಂಗಲ್​ ಸೋಂಕು ಆಗಿರುವ ಬ್ಲ್ಯಾಕ್​ ಫಂಗಸ್ ಡಯಾಬಿಟಿಸ್​ನಿಂದ ಬಾಧಿತರಾಗಿರುವ ಕೋವಿಡ್​ ಸೋಂಕಿತರಲ್ಲಿ ಮತ್ತು ಅತಿಯಾದ ಸ್ಟಿರಾಯ್ಡುಗಳನ್ನು ತೆಗೆದುಕೊಂಡ ಕೋವಿಡ್‌ ಸೋಂಕಿನಿಂದ ಚೇತರಿಸಿಕೊಂಡ ನಂತರ ರೋಗ ನಿರೋಧಕ ಶಕ್ತಿ ಕ್ಷೀಣಿಸಿರುವ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಬ್ಲ್ಯಾಕ್​ ಫಂಗಸ್ ಸೋಂಕು ಎರಡನೇ ಅಲೆ ಶುರುವಾದ ನಂತರ ಹೆಚ್ಚು ವರದಿಯಾಗುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 4

ನಿಮ್ಮ ಕಾಮೆಂಟ್ ಬರೆಯಿರಿ