ಕುಮಟಾದ ದಿಶಾ ಭಾಗ್ವತ ಅಮೆರಿಕದ ಕ್ಯಾಲಿಫೋರ್ನಿಯಾ ಬಾರ್ ಕೌನ್ಸಿಲ್ ಅಟಾರ್ನಿ 

ಕುಮಟಾ :ತಾಲೂಕಿನ ಕಡೆಕೊಡಿ ಗ್ರಾಮದ ಮಂಜುನಾಥ ಮುತ್ತು ಲಲಿತಾ ಭಾಗ್ವತ್ ಅವರ ಪುತ್ರಿ ದಿಶಾ ಅಮೆರಿಕದ ಕ್ಯಾಲಿಪೋರ್ನಿಯಾದ ಬಾರ ಕೌನ್ಸಿಲ್ ಅಟಾರ್ನಿ ಯಾಗಿ ಆಯ್ಕೆ ಯಾಗಿದ್ದಾರೆ.
ಇವರು ಬೆಂಗಳೂರು ಕ್ರೈಸ್ಟ್ ಕಾಲೇಜಿನಲ್ಲಿ ಬಿಬಿಎ ಹಾಗೂ ಎಲ್.ಎಲ್.ಬಿ ಮುಗಿಸಿ ಅಮೇರಿಕಾದ ಕ್ಯಾಲಿಪೋರ್ನಿಯದಲ್ಲಿ ಅಲ್ಟ್ರಾ ನೆಟ್ ಡಿಸ್ಟ್ರೂಟ್ ರಿಸೆಲ್ಯೂಷನ್   ದಲ್ಲಿ ಪ್ರಥಮ ಪ್ರಯತ್ನ ದಲ್ಲಿಯೇ ಉನ್ನತ ಶ್ರೇಣಿಯಲ್ಲಿ ಎಲ್ಎಲ್ಎಂ ತೇರ್ಗಡೆಯಾಗಿದ್ದರು. ನಂತರ ಅಮೆರಿಕದ ಬಾರ್ ಕೌನ್ಸಿಲ್ ಪರೀಕ್ಷೆ ಬರೆದು ಮೇ 7 ರಂದು ಪ್ರಕಟ ವಾದ ಫಲಿತಾಂಶ  ದಲ್ಲಿ ಉನ್ನತ ಶ್ರೇಯಾಂಕ ದಲ್ಲಿ ಉತೀರ್ಣ ರಾದರು.
ಜೂನ್ 10 ರಂದು ಲಾಸ್ ಏಂಜಲೀಸ್  ನ್ಯಾಯಾಲಯದಲ್ಲಿ ಅಟಾರ್ನಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಕ್ಯಾಲಿಪೋರ್ನಿಯಾದ ಕೆಳ ಹಂತದ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ ತನಕ ವಾದ ಮಾಡುವ ಅರ್ಹತೆ ಪಡೆದು ಕೊಂಡಿದ್ದಾರೆ. ದಿಶಾ ಅವರು ಬಹುಮುಖ ಪ್ರತಿಭೆ ಯಾಗಿದ್ದು ಸಂಗೀತ ಮತ್ತು ಕರಾಟೆಯಲ್ಲಿ ಭಾರತದಲ್ಲಿ ದೇಶ ಮಟ್ಟದಲ್ಲಿ ಬಂಗಾರದ ಪದಕ ಗಳಿಸಿದ್ದರು ದಿಶಾ ರವರ ತಂದೆ ಮಂಜುನಾಥ ಭಾಗ್ವತ್ ಬೆಂಗಳೂರಿನಲ್ಲಿ ದಿಶಾ ಎಂಟರಪ್ರೈಸಸ್‌ ಕೇಬಲ್ ಉದ್ಯಮಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ವಿಧಾನಸೌಧ ಸ್ಫೋಟದ ಎಐ ವಿಡಿಯೊ ಸೃಷ್ಟಿಸಿ ಹಂಚಿಕೊಂಡ ಆರೋಪ : ಕಿಡಿಗೇಡಿ ಬಂಧನ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement