ಬೆಂಗಳೂರು: ಬೆಂಗಳೂರಿಗೆ ಮತ್ತೆ ಮಹಾ ವಲಸೆ ಆರಂಭವಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಗಂಟುಮೂಟೆಯೊಂದಿಗೆ ತಮ್ಮ ಊರುಗಳಿಗೆ ತೆರಳಿದವರು ಈಗ ಮತ್ತೆ ಗಂಟುಮೂಟೆಯೊಂದಿಗೆ ವಾಪಸ್ ಬರುತ್ತಿದ್ದಾರೆ. ಯಾಕೆಂದರೆ ಬೆಂಗಳೂರು ಸೋಮವಾರದಿಂದ ಭಾಗಶಃ ತೆರವಾಗುತ್ತಿದೆ. ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಲಿದೆ.ಹೀಗಾಗಿ ಉದ್ಯೋಗಕ್ಕಾಗಿ ಮರಳಿ ಬರುತ್ತಿದ್ದಾರೆ.
ಸರ್ಕಾರ ಲಾಕ್ ಡೌನ್ ನಿಯಮಾವಳಿ ಸಡಿಲಗೊಂಡಿದ್ದರಿಂದ ಯಾವ ವಾಹನ ಸಿಕ್ಕಿತೋ ಅದರಲ್ಲಿ ಬೆಂಗಳೂರಿಗೆ ಬರಲಾರಂಭಿಸಿದ್ದಾರೆ. ಆದರೆ ಜನ ಸ್ವಲ್ಪ ಯಾಮಾದರು ಕೊರೊನಾ ಉಲ್ಬಣವಾಗಬಹುದಾಗಿದೆ. ಮೂರನೇ ಅಲೆಯ ಆತಂಕ ಕೂಡ ಎದುರಾಗಿದೆ. ಸರ್ಕಾರ ಈಗಲೇ ಮೂರನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರೂ ಜನರೂ ಅಷ್ಟೇ ಮುನ್ನೆಚ್ಚರಿಕೆ ವಹಿಸಬೇಕಿದೆ.
ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ಸುಗಳಿಲ್ಲದಿದ್ದರೂ, ಸಿಕ್ಕ ಸಿಕ್ಕ ವಾಹನಗಳಲ್ಲಿ ಮೂಲಕ ನಗರಕ್ಕೆ ಬರುತ್ತಿರುವುದರಿಂದ ಭಾನುವಾರ ಹಲವೆಡೆ ಟ್ರಾಫಿಕ್ ಜಾಮ್ ಆದ ವರದಿಯಾಗಿದೆ. ಹೊರ ಜಿಲ್ಲೆ ಗಳಿಂದ ಬರುವ ಜನರನ್ನ ತಪಾಸಣೆ ಮಾಡುತ್ತಿರುವುದು ಕಂಡು ಬರಲಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ