ಭಾರತವು 72 ದಿನಗಳಲ್ಲಿ ಕಡಿಮೆ ಏಕದಿನ ಕೋವಿಡ್‌ ಪ್ರಕರಣ ದಾಖಲು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 70,421 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ. ಇದು ಮಾರ್ಚ್ 31 ರಿಂದ ಕಡಿಮೆ ದೈನಂದಿನ ಪ್ರಕರಣವಾಗಿದೆ.

ಸೋಂಕಿನಿಂದ 3,921 ಸಾವುಗಳು ಸಂಭವಿಸಿವೆ. ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ
ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 1,19,501 ಜನರು ಸೋಂಕಿನಿಂದ ಚೇತರಿಕೆ ಕಂಡಿದ್ದುಒಟ್ಟು ಚೇತರಿಕೆ 2,81,62,947 ಕ್ಕೆ ತಲುಪಿದೆ. ಭಾರತದಲ್ಲಿ ಒಟ್ಟು ಕೋವಿಡ್‌-19 ಪ್ರಕರಣಗಳು ಈಗ 2,95,10,410 ಕ್ಕೆ ಏರಿದ್ದು, 9,73,158 ಸಕ್ರಿಯ ಪ್ರಕರಣಗಳಿವೆ ಎಂದು ಡೇಟಾ ತೋರಿಸಿದೆ. ದೇಶದ ಒಟ್ಟು ಸಾವಿನ ಸಂಖ್ಯೆ ಈಗ 3,74,305 ಆಗಿದೆ. ಭಾರತದಲ್ಲಿ ಈವರೆಗೆ ಒಟ್ಟು 25,48,49,301 ಜನರಿಗೆ ಕೋವಿಡ್‌-19 ವಿರುದ್ಧ ಲಸಿಕೆ ನೀಡಲಾಗಿದೆ.
ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ತಮಿಳುನಾಡು 14,016 ಪ್ರಕರಣಗಳು, ಕೇರಳದಲ್ಲಿ 11,584 ಪ್ರಕರಣಗಳು, ಮಹಾರಾಷ್ಟ್ರ 10,442 ಪ್ರಕರಣಗಳು, ಕರ್ನಾಟಕ 7,810 ಪ್ರಕರಣಗಳು ಮತ್ತು ಆಂಧ್ರಪ್ರದೇಶದಲ್ಲಿ 6,770 ಪ್ರಕರಣಗಳು ದಾಖಲಾಗಿವೆ. 71.88 ರಷ್ಟು ಹೊಸ ಪ್ರಕರಣಗಳು ಈ ಐದು ರಾಜ್ಯಗಳಿಂದ ವರದಿಯಾಗಿದ್ದು, ತಮಿಳುನಾಡು ಮಾತ್ರ 19.9 ರಷ್ಟು ಹೊಸ ಪ್ರಕರಣಗಳಿಗೆ ಕಾರಣವಾಗಿದೆ.
ಕರ್ನಾಟಕ ದೆಹಲಿ, ಹರಿಯಾಣ ಮತ್ತು ತಮಿಳುನಾಡು ಸೋಮವಾರದಿಂದ ಹೆಚ್ಚಿನ ಚಟುವಟಿಕೆಗಳಿಗೆ ಅನುಮತಿ ನೀಡಿದೆ. ದೇಶದಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳು ಕಡಿಮೆಯಾದ ನಂತರ ರಾಜ್ಯಗಳ ನಿರ್ಬಂಧಗಳನ್ನು ಸಡಿಲಿಸುವುದು ವೇಗವನ್ನು ಪಡೆಯಿತು. ಸೋಮವಾರದಿಂದ 11 ಜಿಲ್ಲೆಗಳಲ್ಲಿ ಹೊರತುಪಡಿಸಿ, ಕರ್ನಾಟಕವು ಅನ್ಲಾಕ್ ಪ್ರಕ್ರಿಯೆಯನ್ನು ಪ್ರಾರಂಭಿಸಲಿದ್ದು, ಉದ್ಯಾನವನಗಳು ಮತ್ತು ಕೈಗಾರಿಕಾ ಘಟಕಗಳನ್ನು ಶೇ.50ರಷ್ಟು ತೆರೆಯುವುದರ ಜೊತೆಗೆ ಇತರಕೆಲವಕ್ಕೂ ರಿಯಾಯಿತಿ ನೀಡಲಾಗಿದೆ.

ಪ್ರಮುಖ ಸುದ್ದಿ :-   ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ, ಹಣದ ರಾಶಿ ನೋಡಿ ಇ.ಡಿ.ಯೇ ದಂಗು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement