ಕರ್ನಾಟಕದಲ್ಲಿ 5 ಸಾವಿರಕ್ಕೆ ಕುಸಿದ ದೈನಂದಿನ ಕೊರೊನಾ ಸೋಂಕು.. ಬೆಂಗಳೂರಲ್ಲಿ ಸಾವಿರಕ್ಕಿಂತಲೂ ಕಡಿಮೆ..!

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.ಕಳೆದ 24 ಗಂಟೆಗಳಲ್ಲಿ (ಮಂಗಳವಾರ) 5041 ಜನರಿಗೆ ಸೋಂಕು ತಗುಲಿರುವುದು ವರದಿಯಾಗಿದೆ.
ಕರ್ನಾಟಕ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 5 115 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿಂ ಕಳೆದ 24 ಗಂಟೆಗಳಲ್ಲಿ 14785 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2581559ಕ್ಕೆ ತಲುಪಿದೆ.
ಮಂಗಳವಾರ ಕೋವಿಡ್‌ ಸಕಾರಾತ್ಮಕತೆ ದರ ಶೇಕಡ 3.8 ಕ್ಕೆ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ ಎರಡು ತಿಂಗಳುಗಳಲ್ಲಿ ಮೊದಲ ಬಾರಿಗೆ ಕೋವಿಡ್ ಪ್ರಕರಣಗಳು 1000ಕ್ಕಿಂತ ಕಡಿಮೆಯಾಗಿದೆ. ಬಹಳ ದಿನಗಳ ನಂತರ ಬೆಂಗಳೂರು ನಗರದಲ್ಲಿ 985 ಸೋಂಕು ವರದಿಯಾಗಿದೆ.
ಜಿಲ್ಲಾವಾರು ಸಂಪೂರ್ಣ ಮಾಹಿತಿಯನ್ನು ಪಿಡಿಎಫ್‌ನಲ್ಲಿ ಈ ಕೆಳಗೆ ಕೊಡಲಾಗಿದೆ.

15-06-2021 HMB Kannada

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement