ಗೋಕರ್ಣ ಕೋಟಿತೀರ್ಥ ಸ್ವಚ್ಛತೆ, ಅಭಿವೃದ್ಧಿ ಕಾರ್ಯಕ್ಕೆ ಸಚಿವ ಈಶ್ವರಪ್ಪ ಚಾಲನೆ

ಗೋಕರ್ಣ: ಗೋಕರ್ಣದ ಕೋಟಿತೀರ್ಥವು ಉತ್ತರದ ವಾರಣಾಸಿಯ ಪವಿತ್ರ ಗಂಗೆಯ ಸ್ಥಾನವನ್ನು ಪಡೆದಿದ್ದು, ಇದರ ಪುನರುಜ್ಜೀವನಗೊಳಿಸಲು ರಾಜ್ಯದ ಬಿಜೆಪಿ ಸರ್ಕಾರ ಹಣ ಮಂಜೂರಿ ಮಾಡಿದ್ದು, ಅದರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗೋಕರ್ಣದ ಕೋಟಿತೀರ್ಥದ  ಸ್ವಚ್ಛತೆ ಹಾಗೂ ಅಭಿವೃದ್ಧಿಯಿಂದ ದೇಶಕ್ಕೆ ಒಳಿತಾಗಲಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.
ಅವರು ಮಂಗಳವಾರ ಸಂಜೆ ಗೋಕರ್ಣ ದಲ್ಲಿ ಕೋಟಿತೀರ್ಥ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆ ಗೋಕರ್ಣ ಬಂದಾಗ ಶ್ರೀ ರಾಘವೇಶ್ವರ ಸ್ವಾಮೀಜಿಗಳು ಕೋಟಿತೀರ್ಥದ  ಮಹತ್ವ ತಿಳಿಸಿ ಅಭಿವೃದ್ಧಿ ಬಗ್ಗೆ ನನಗೆ ಸೂಚಿಸಿದ್ದರು.ಶ್ರೀ
ಮಹಾಬಲೇಶ್ವರ ದೇವರ ಅಭೀಷ್ಟೆ ಹಾಗೂ ಶ್ರೀ ರಾಘವೇಶ್ವರ ಶ್ರೀಗಳ ಇಚ್ಛೆಯಂತೆ ಕೋಟಿತೀರ್ಥದ ಅಭಿವೃದ್ಧಿಗೆ ಕಾಲಕೂಡಿಬಂದಿದೆ. ಕೋಟಿತೀರ್ಥ ಅಭಿವೃದ್ಧಿ ಕಾಮಗಾರಿಗೆ 1.50 ಕೋಟಿ ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಕ್ಷೇತ್ರಕ್ಕೆ ಆಗಮಿಸುವ ಯಾತ್ರಿಕರನ್ನು, ಪಿತೃ ಕಾರ್ಯಾದಿಗಳನ್ನು ನಡೆಸುವ ಭಕ್ತರಿಗೆ ಅನುಕೂಲ ಒದಗಿಸುವ ಹಿನ್ನೆಲೆಯಲ್ಲಿ ಇಲ್ಲಿ ಕೊಳದ ಹೂಳೆತ್ತುವಿಕೆ ಸುಸಜ್ಜಿತ ಸ್ನಾನಗೃಹ, ಶೌಚಾಗೃಹ, ಮಹಿಳೆಯರಿಗೆ ಪ್ರತ್ಯೇಕ ಕೊಠಡಿ, ಸೋಲಾರ್ ವಿದ್ಯುತ್ ಅಳವಡಿಸುವಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೋಟಿತೀರ್ಥದ ನೀರಿನ ಶುದ್ಧೀಕರಣ ತಾಂತ್ರಿಕತೆ ಒಳಗೊಂಡಿದ್ದು ಕ್ಷೇತ್ರದ ಪಾವಿತ್ರತ್ರ್ಯ ಮೆರಗು ನೀಡುವಂತಾಗಲಿ ಎಂದು ಹೇಳಿದರು.
ಈ ಹಿಂದೆಕಾಶಿಯೂ ಗಲೀಜಿನಿಂದ ಕೂಡಿತ್ತು ಈಗ ಕಾಶಿಯೂ ಸ್ವಚ್ಛವಾಗುತ್ತಿದೆ. ಗಂಗಾನದಿಯನ್ನು ಸ್ವಚ್ಚಗೊಳಿಸುವ ಕಾರ್ಯ ನಡೆದಿದೆ. ಆದಷ್ಟು ಬೇಗ ಸ್ಥಳೀಯರ ಸಹಕಾರದಿಂದ ಭಕ್ತರ ಕೋಟಿತೀರ್ಥ ಕಾಮಗಾರಿ ಬೇಗನೆ ಪೂರ್ಣವಾಗಲಿದೆ. ಕೋಟಿ ತೀರ್ಥವು ಕೇವಲ ಸ್ಥಳೀಯರಿಗಷ್ಟೇ ಅಲ್ಲದೆ, ಇಡೀ ದೇಶದ ಜನರಿಗೆ ಇದು ಪವಿತ್ರ ತೀರ್ಥವಾಗಿದೆ ಎಂದರು.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

ಕೋಟ್‌
ಈಗಾಗಲೇ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ನಾನು ಬರೆದ ಮನವಿಯ ಮೇರೆಗೆ , ಮುಖ್ಯಮಂತ್ರಿಗಳ ಆದೇಶದಂತೆ ಕೋಟಿ ತೀರ್ಥವನ್ನು ಸ್ವಚ್ಛಗೊಳಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರ 17 -1-2020ರ ಪತ್ರದಲ್ಲಿ ಆದೇಶಿಸಿದೆ.
ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು  ಕೆರೆ ಅಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆ ಇತರ ಇಲಾಖೆಗಳ ಸಹಕಾರದಿಂದ ಶ್ರೀ ಮಹಾಬಲೇಶ್ವರ ದೇವರ ಆಶೀರ್ವಾದದಿಂದ ಕೋಟಿತೀರ್ಥ ಹೆಸರಿನಂತೆ ಆದಷ್ಟು ಬೇಗ ಕೋಟಿತೀರ್ಥವಾಗಲಿ ಎಂಬ ಆಶಯ ಹಲವು ಆಸ್ತಿಕರದ್ದು.

-ಡಾ ರವಿಕಿರಣ ಪಟವರ್ಧನ ಶಿರಸಿ

ಈ ಹಿಂದೆ ಅನೇಕರು ಕೋಟಿತೀರ್ಥದ ಜೀರ್ಣೋದ್ಧಾರಕ್ಕೆ ಮನವಿ ಮಾಡಿದ್ದನ್ನು, ಪ್ರಯತ್ನಪಟ್ಟಿದ್ದನ್ನು ಅವರು ಸಭೆಯಲ್ಲಿ ನೆನಪಿಸಿ ಕೊಂಡರು. ಶಾಸಕ ದಿನಕರ ಶೆಟ್ಟಿ ಮಾತನಾಡಿ ಕಾಮಗಾರಿಗೆ ಮುತುವರ್ಜಿ ವಹಿಸಿ ಹಣ ಮಂಜೂರಿ ಮಾಡಿದ್ದಕ್ಕೆ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ. ಪ್ರಮೋದ ಹೆಗಡೆ ಮತ್ತಿತರರು ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಮಂಜುನಾಥ ಜನ್ಹು, ಉಪಾಧ್ಯಕ್ಷೆ ಶಾರದಾ ಮೂಡಂಗಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ, ತಹಶೀಲ್ದಾರ್ ಉಮೇಶ್, ತಾಪಂ ಇಒ ಸಿ.ಟಿ.ನಾಯ್ಕ, ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಅಡಿ ಮೂಳೆ, ಗಜಾನನ ಹಿರೇ, ಪಟ್ಟವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಸದಾನಂದ ಉಪಾಧ್ಯ, ಎಪಿಎಂಸಿ.ಅಧ್ಯಕ್ಷ ರಮೇಶ್ ಪ್ರಸಾದ್, ಬಿಜೆಪಿ ಪ್ರಮುಖ ಗೋವಿಂದ ನಾಯ್ಕ ಭಟ್ಕಳ, ಬಿಜೆಪಿ ಜಿಲ್ಲಾ ಪ್ರಭಾರಿ ನಾಗರಾಜ ನಾಯಕ ತೊರ್ಕೆ, ಕುಮಾರ್ ಕವರಿ, ತದಡಿ ಮೀನುಗಾರರ ಸಂಘದ ಉಪಾಧ್ಯಕ್ಷ ಹಾ ಮೋಹನ್ ಮೂಡಂಗಿ, ಗ್ರಾಪಂ ಸದಸ್ಯರು ಇದ್ದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

ಎಸ್‌.ವಿ.ಜಠಾರ್‌ ಮನೆಗೆ ಈಶ್ವರಪ್ಪ ಭೇಟಿ:
ಕೋಟಿತೀರ್ಥ ಶುದ್ದೀಕರಣಗೊಳಿಸಲು ಎರಡು ದಶಕಗಳಿಂದ ಸರ್ಕಾರದ ಅನುದಾನಕ್ಕಾಗಿ ಪರಿಶ್ರಮಿಸಿದವರಲ್ಲಿ ಓರ್ವರಾದ ಆರೆಸ್ಸೆಸ್‌ ಹಿರಿಯ ಕಾರ್ಯಕರ್ತ, ವೈದ್ಯ ಎಸ್.ವಿ.ಜಠಾರ್ ಅವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಈಶ್ವರಪ್ಪ ಭೇಟಿ ಮಾಡಿದರು.
ಜಲಶುದ್ಧೀಕರಣಗೊಳಿಸುವ ಯಂತ್ರವನ್ನು ಅಳವಡಿಸಿ, ಕೋಟಿತೀರ್ಥದ ಸ್ವಚ್ಛತೆ ಆಗಬೇಕು ಎಂದು ಈ ಸಂದರ್ಭದಲ್ಲಿ ಎಸ್. ವಿ.ಜಠಾರ್ ಅವರು ಸಲಹೆ ನೀಡಿದರು.ಮನಗಾಣಿಸಿಕೊಟ್ಟರು.

ಕೋಟಿತೀರ್ಥಕ್ಕೆ ಅಭಿವೃದ್ಧಿ ಕಾಲ ಕೂಡಿ ಬಂದಿದೆ..;
ಶ್ರೀ ರಾಘವೇಶ್ವರ ಸ್ವಾಮಿಜಿಗಳು ಕೂಡ ಕೋಟಿತೀರ್ಥದ ಅಭಿವೃದ್ಧಿ ಬಗ್ಗೆ ಅನೇಕ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದರು. ಮಾಧ್ಯಮಗಳ ಮುಂದೆಯೂ ಪ್ರಸ್ತಾಪಿಸಿದ್ದರು.
ಕಳೆದ 2-3 ವರ್ಷದ ಹಿಂದೆ ಶಿರಸಿಯ ಡಾ. ರವಿಕಿರಣ ಪಟವರ್ಧನ್ -ಶಿರಸಿ ಗೋಕರ್ಣಕ್ಕೆ ಬಂದಾಗ ಕೋಟಿತೀರ್ಥದ ದುರವಸ್ಥೆ ಕಂಡು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕರ ಸ್ಪಂದಿಸಿದ ಪ್ರಧಾನಿ ಸ್ಪಂದಿಸಿ ದ್ದು, ಅವರ ಕಾರ್ಯಾಲಯದಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ,ಜಿಲ್ಲಾ ಪಂಚಾಯತ ,ತಾಲೂಕು ಪಂಚಾಯತ ಮತ್ತು ಗೋಕರ್ಣ ಗ್ರಾಮ ಪಂಚಾಯತಕ್ಕೆ ಮಾಹಿತಿ ಕಳುಹಿಸಿ ವರದಿ ಕೇಳಿದ್ದರು. ನಂತರ ಇದನ್ನು ಸ್ವಚ್ಛಗೊಳಿಸಲು ಆದೇಶವಾಗಿತ್ತು. ಈಗ ಕಾಲ ಕೂಡಿಬಂದಿದೆ. ವೆಲ್ಲದರ ಪರಿಣಾಮ ಈಗ ಆಗಿದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಶಿಲಾನ್ಯಾಸ ಮಾಡಿದ್ದಾರೆ.

 

4 / 5. 8

ಶೇರ್ ಮಾಡಿ :

  1. Dattatraya Bhat

    ಒಳ್ಳೆಯ ಕಾರ್ಯಗಳನ್ನು ಮಾಡಿದ್ದೀರಿ . ಒಳ್ಳೆಯ ಮಾಹಿತಿ…

ನಿಮ್ಮ ಕಾಮೆಂಟ್ ಬರೆಯಿರಿ

advertisement