ಭಾರತದಲ್ಲಿ 77 ದಿನಗಳಲ್ಲಿ ಅತಿ ಕಡಿಮೆ ದೈನಂದಿನ ಕೊರೊನಾ ಸೋಂಕು ದಾಖಲು, ಚೇತರಿಕೆ ಪ್ರಮಾಣ 95.64%

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ (ಮಂಗಳವಾರ) 60,471 ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ, ಇದು ಸುಮಾರು 77 ದಿನಗಳಲ್ಲಿ ಅತಿ ಕಡಿಮೆ ದೈನಂದಿನ ಪ್ರಕರಣವಾಗಿದೆ.

ಇದು ದೇಶದ ಕೋವಿಡ್ ಪ್ರಕರಣವನ್ನು 2.95 ಕೋಟಿಗೆ ತಳ್ಳಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 2,726 ರೋಗಿಗಳು ಮೃತಪಟ್ಟಿದ್ದು ಕೋವಿಡ್ ಸಾವಿನ ಸಂಖ್ಯೆ 3.77 ಲಕ್ಷಕ್ಕೆ ಏರಿದೆ.

ಒಂದೇ ದಿನದಲ್ಲಿ 1,17,525 ಸೋಂಕಿತರು ಚೇತರಿಸಿಕೊಂಡಿದ್ದು, ಭಾರತದ ಚೇತರಿಕೆ ಪ್ರಮಾಣವು ಈಗ ಶೇಕಡಾ 95.64 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಈಗ 9,13,378 ಕೋವಿಡ್ ಸಕ್ರಿಯ ಪ್ರಕರಣಗಳಿವೆ.

ಕಳೆದ 24 ಗಂಟೆಗಳಲ್ಲಿ ಗರಿಷ್ಠ ಕೋವಿಡ್ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳು ತಮಿಳುನಾಡಿನಲ್ಲಿ 12,772 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 8,129 ಪ್ರಕರಣಗಳು, ಕೇರಳದಲ್ಲಿ  7,719 ಪ್ರಕರಣಗಳು, ಕರ್ನಾಟಕದಲ್ಲಿ 6,835 ಪ್ರಕರಣಗಳು ಮತ್ತು ಆಂಧ್ರಪ್ರದೇಶ 4,549 ಪ್ರಕರಣಗಳು ದಾಖಲಾಗಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement