ಟ್ವಿಟರಿಗೆ ನೀಡಲಾಗಿದ್ದ ಕಾನೂನು ಕ್ರಮ ವಿನಾಯ್ತಿ ಹಿಂಪಡೆದ ನಂತರ ಕೇಂದ್ರ ಸರ್ಕಾರದ ಮೊದಲ ಪ್ರತಿಕ್ರಿಯೆ

ನವದೆಹಲಿ: ಮೈಕ್ರೋ ಬ್ಲಾಗಿಂಗ್ ಟ್ವಿಟ್ಟರ್ ಗೆ ಭಾರತದಲ್ಲಿ ನೀಡಲಾಗಿದ್ದ ಕಾನೂನು ಕ್ರಮದಿಂದ ವಿನಾಯ್ತಿ ಹಿಂಪಡೆದ ಬಳಿಕ ಕೇಂದ್ರ ಕಾನೂನು ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕಿರಿತು ಟ್ವೀಟ್‌ ಮಾಡಿರುವ ಅವರು, ಭಾರತದಲ್ಲಿನ ಹೊಸ ಐಟಿ ನಿಯಮಗಳನ್ನು ಪರಿಪಾಲನೆ ಮಾಡಲು ಟ್ವಿಟ್ಟರ್ ಗೆ ಹಲವು ಅವಕಾಶಗಳನ್ನು ನೀಡಲಾಗಿದೆ. ಆದರೆ, ಟ್ವಿಟ್ಟರ್ ತಿಳಿದು ತಿಳಿದು ಅವುಗಳ ಪರಿಪಾಲನೆ ಮಾಡದ ದಾರಿ ತುಳಿದಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆಧ ಘಟನೆ ಫೇಕ್ (ಸುಳ್ಳು) ಸುದ್ದಿಗಳ ವಿರುದ್ಧ ಟ್ವಿಟ್ಟರ್ ತಿಳುದ ಪರಿಪಾಲಿಸಿದಿರುವುದಕ್ಕೆ ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಭಾರತೀಯ ಸಂಸ್ಕೃತಿ ತನ್ನ ಭೌಗೋಲಿಕ ಗಾತ್ರಕ್ಕೆ ತಕ್ಕಂತೆ ನಿರಂತರವಾಗಿ ಬದಲಾಗುತ್ತಿದೆ. ಕೆಲ ಪರಿಸ್ಥಿತಿಗಳಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರಚಾರಗಳ ಕಾರಣ ಸಣ್ಣಸಣ್ಣ ಘಟನೆಗಳು ಕಿಡಿ ಹೊತ್ತಿಸುವ ಸಾಧ್ಯತೆ ಇರುತ್ತದೆ ಮತ್ತು ಅದರಲ್ಲೂ ವಿಶೇಷವಾಗಿ ಫೇಕ್ ಸುದ್ದಿ ಪ್ರಕರಣಗಳಲ್ಲಿ ಎಂದು ತಿಳಿಸಿದ್ದಾರೆ.
‘ಟ್ವಿಟ್ಟರ್ ತನ್ನ ಫ್ಯಾಕ್ಟ್ ಚೆಕಿಂಗ್ ಮೆಕ್ಯಾನಿಸಂಗಾಗಿ (Fact Checking Mechanism) ಹೆಸರುವಾಸಿಯಾಗಿದೆ. ಆದರೆ ಉತ್ತರ ಪ್ರದೇಶದಂತಹ ಹಲವು ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವಲ್ಲಿ ವಿಫಲಗೊಂಡಿದ್ದು, ನಕಲಿ ಸುದ್ದಿಗಳ ವಿರುದ್ಧ ಹೋರಾಡುವ ಟ್ವಿಟ್ಟರ್ ನ ಅಯೋಗ್ಯತೆಯನ್ನು ಅದು ಎತ್ತಿತೋರಿಸುತ್ತದೆ” ಎಂದು ಹೇಳಿದ್ದಾರೆ.
ಐಟಿ ಕ್ಷೇತ್ರದ ಕಂಪನಿಗಳೇಆಗಲಿ ಅಥವಾ ಫಾರ್ಮಾ ಕಂಪನಿಗಳೇ ಆಗಲಿ ಭಾರತೀಯ ಕಂಪನಿಗಳು ಒಂದೊಮ್ಮೆ ವ್ಯಾಪಾರಕ್ಕಾಗಿ ಅಮೆರಿಕಕ್ಕೆ ಹೋದರೆ, ಖುದ್ದಾಗಿ ಅಲ್ಲಿನ ಕಾನೂನು, ನಿಯಮಗಳ ಪರಿಪಾಲನೆ ಮಾಡುತ್ತವೆ. ಹೀಗಿರುವಾಗ ಟ್ವಿಟರ್‌ನಂತಹ ಪ್ಲಾಟ್‌ಫಾರ್ಮ್‌ಗಳು ಭಾರತೀಯ ಕಾನೂನುಗಳನ್ನು ಪಾಲಿಸಲು ನಿರಾಕರಿಸುತ್ತಿದೆ ಎಂದು ಪ್ರಸಾದ್ ಹೇಳಿದ್ದಾರೆ.
ಯಾವುದೇ ಒಂದು ವಿದೇಶಿ ಕಂಪನಿ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಬಾವುಟ ಹಾರಿಸುವ ನೆಪ ಹೇಳಿ ಇಲ್ಲಿನ ನೀತಿ ನಿಯಮಗಳ ಪರಿಪಾಲನೆ ಮಾಡದೆ ಹೋದಲ್ಲಿ, ಅಂತಹ ಪ್ರಯತ್ನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಮೇ 25ರಿಂದ ಜಾರಿಯಾಗಿರುವ ನೂತನ ಐಟಿ ನಿಯಮಗಳನ್ನು ಟ್ವಿಟ್ಟರ್ ಇದುವರೆಗೆ ಪರಿಪಾಲನೆ ಮಾಡಿಲ್ಲ. ಹೀಗಾಗಿ ಸರ್ಕಾರ ಐಟಿ ಕಾಯ್ದೆಯ ಸೆಕ್ಷನ್ 79ರ ಅಡಿ ಟ್ವಿಟ್ಟರ್ ನೀಡಿದ್ದ ಕಾನೂನು ಕ್ರಮ ವಿನಾಯ್ತಿ ವಾಪಸ್ ಪಡೆದಿತ್ತು. ಇದಾದ ಬಳಿಕ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಟ್ವಿಟ್ಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸಾಮಾಜಿಕ ಮಾಧ್ಯಮ ವೇದಿಕೆಯ ಮೇಲೆ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರ ದಾಡಿಗೆ ಕತ್ತರಿ ಹಾಕಲಾಗಿದೆ. ಈ ವಿಡಿಯೋ ವೈರಲ್ ಆಗದಂತೆ ತಡೆಯಲು ಟ್ವಿಟ್ಟರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಾಜಿಯಾಬಾದ್ ಪೊಲೀಸರು ಹೇಳಿದ್ದಾರೆ.
ಪೊಲೀಸರು ಹೇಳುವ ಪ್ರಕಾರ, ಈ ಪ್ರಕರಣದ ಅಸಲಿ ಸತ್ಯಾಸತ್ಯತೆ ಬೇರೆಯೇ ಇದೆ. ಈ ಸಂತ್ರಸ್ತ ವೃದ್ಧ ಆರೋಪಿಗೆ ಕೆಲ ತಾಯತಗಳನ್ನು ನೀಡಿದ್ದರು, ಆ ತಾಯತುಗಳಿಂದ ಯಾವುದೇ ಪರಿಣಾಮ ಕಂಡುಬಂದಿಲ್ಲ ಎಂಬ ಕಾರಣಕ್ಕೆ ಆರೋಪಿ ವೃದ್ಧನನ್ನು ಥಳಿಸಿದ್ದಾನೆ. ಆದರೆ, ಟ್ವಿಟ್ಟರ್ ಈ ವಿಡಿಯೋಗೆ ಮ್ಯಾನುಪಲೇಟೆಡ್ ಟ್ಯಾಗ್ ನೀಡಿಲ್ಲ. ಅಷ್ಟೇ ಅಲ್ಲ ವೃದ್ಧ ದಾಖಲಿಸಿರುವ ಎಫ್‌ಐಆರ್‌ ನಲ್ಲಿ ‘ಜೈ ಶ್ರೀರಾಮ್ ಘೋಷಣೆ ಹಾಗೂ ದಾಡಿ ಕಟಿಂಗ್ ಕುರಿತು ಏನನ್ನೂ ಹೇಳಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement