ಇಂದೋರ್: ಕೋವಿಡ್ ಉಲ್ಬಣದ ಮಧ್ಯೆ ಈ ಫಂಗಸ್ಗಳು ಸೋಂಕು ಹೆಚ್ಚಾಗುತ್ತಿದೆ. ಈಗ ಗ್ರೀನ್ ಫಂಗಸ್ ಕಾಣಿಸಿಕೊಂಡಿದೆ..!
ಈ ಮೊದಲು ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಕಾಣಿಸಿಒಂಡಿತ್ತು. ಈಗ ಹಸಿರು ಶಿಲೀಂಧ್ರ (ಗ್ರೀನ್ ಫಂಗಸ್) ಕಾಣಿಸಿಕೊಂಡಿದೆ.
34 ವರ್ಷದ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದ್ದು ಆ ವ್ಯಕ್ತಿಯನ್ನು ಇಂದೋರ್ನಿಂದ ಮುಂಬೈನ ಹಿಂದೂಜಾ ಆಸ್ಪತ್ರೆಗೆ ಏರ್ಲಿಫ್ಟ್ ಮೂಲಕ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈತ ಕೊವಿಡ್ನಿಂದ ಚೇತರಿಸಿಕೊಂಡಿದ್ದ. ಈಗ ಈ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದೆ. ವ್ಯಕ್ತಿಯ ಸೈನಸ್, ಶ್ವಾಸಕೋಶ, ರಕ್ತದಲ್ಲಿ ಇದು ಪತ್ತೆಯಾಗಿದೆ. ಕೋವಿಡ್ನಿಂದ ಚೇತರಿಸಿಕೊಂಡ ಬಳಿಕ ವ್ಯಕ್ತಿಗೆ ಜ್ವರ, ಮೂಗಿನಲ್ಲಿ ರಕ್ತಸ್ರಾವ ಲಕ್ಷಣಗಳು ಕಾಣಿಸಿಕೊಂಡಿತ್ತು.ೀಗ ಅದನ್ನು ಗ್ರೀನ್ ಫಂಗಸ್ ಎಂದು ಗುರುತಿಸಲಾಗಿದೆ.
ಹಸಿರು ಶಿಲೀಂಧ್ರ ಎಂದರೇನು?
ಇದು ಬಹುಶಃ ‘ಹಸಿರು ಶಿಲೀಂಧ್ರ’ದ ಮೊದಲ ಪ್ರಕರಣವಾದ್ದರಿಂದ, ಹೆಚ್ಚು ಚೇತರಿಸಿಕೊಂಡ ಕೋವಿಡ್-19 ರೋಗಿಗಳು ಸಹ ಅಪರೂಪದ ಶಿಲೀಂಧ್ರ ರೋಗಕ್ಕೆ ತುತ್ತಾಗಿದ್ದಾರೆಯೇ ಎಂದು ವೈದ್ಯರು ಸಂಶೋಧನೆ ನಡೆಸುತ್ತಿದ್ದಾರೆ. ಆಸ್ಪರ್ಜಿಲೊಸಿಸ್ ಎಂಬ ವೈಜ್ಞಾನಿಕ ಹೆಸರಿನಿಂದ ಕೂಡಿದ ಹಸಿರು ಶಿಲೀಂಧ್ರ ಲಕ್ಷಣಗಳು ಮೂಗಿನ ರಕ್ತಸ್ರಾವ ಮತ್ತು ಅಧಿಕ ಜ್ವರವನ್ನು ಒಳಗೊಂಡಿವೆ,
ಇದು 34 ವರ್ಷದ ರೋಗಿಯಲ್ಲಿ ಕೋವಿಡ್-19 ನಿಂದ ಚೇತರಿಸಿಕೊಂಡ ನಂತರ ಕಂಡುಬಂದಿದೆ. ಇಂದೋರ್ನ ಶ್ರೀ ಅರಬಿಂದೋ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಸೈಮ್ಸ್) ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡುವ ವೈದ್ಯ ಡಾ.ರವಿ ದೋಸಿ ಅವರು ತೂಕ ಇಳಿಕೆಯಿಂದ ರೋಗಿಯು ತುಂಬಾ ದುರ್ಬಲರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ