ಕುಮಟಾ :ತಾಲೂಕಿನ ಹಿರೇಗುತ್ತಿ ಅರಣ್ಯ ವ್ಯಾಪ್ತಿಯ ಸಂತೆಗದ್ದೆಯಲ್ಲಿ ವೆಂಕಟ್ರಮಣ ನಾಯ್ಕ ಎಂಬವರ ಮನೆಯಲ್ಲಿ ರಾತ್ರಿ ಸಮಯದಲ್ಲಿ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದಿದೆ.
ಮನೆಯವರು ಬೆಳಿಗ್ಗೆ ನಾಯಿ ಕಾಣದೆ ಇರುವಾಗ ತಮ್ಮ ಮನೆಗೆ ಅಳವಡಿಸಿರುವ ಸಿಸಿ ಕ್ಯಾಮರಾ ವೀಕ್ಷಿಸಿದಾಗ ಚಿರತೆ ಹೊತ್ತೊಯ್ದ ದೃಶ್ಯ ಅವರಿಗೆ ಕಂಡುಬಂದಿದೆ. ಬುಧವಾರ ರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಾತಿರ 2ರ ಸುಮಾರಿಗೆ ಮನೆಹೊರಗೆ ಓಡಾಡಿದ ಚಿರತೆ ಮೊದಲು ನಾಯಿ ಮರಿಯನ್ನು ಹೊತ್ತೊಯ್ದಿತು. ನಂತರ ತಾಯಿಯನ್ನೂ ಹೊತ್ತೊಯ್ದಿದ್ದು ಸಿಸಿ ಟಿವಿಯಿಂದ ತಿಳಿದು ಬಂದಿದೆ.
ಹಿರೇಗುತ್ತಿ ಅರಣ್ಯ ವಲಯ ಅರಣ್ಯಾಧಿಕಾರಿ ನರೇಶ್ ಜಿ. ವಿ. ಅವರು ಸಂಬಂಧಿಸಿದವರಿಂದ ಮಾಹಿತಿ ಪಡೆದು ಈ ಘಟನೆಯನ್ನು ಖಚಿತ ಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ