ಕುಮಟಾ : ಮನೆಗೇ ಬಂದು ನಾಯಿ ಹೊತ್ತೊಯ್ದ ಚಿರತೆ..! ಸಿಸಿಟಿವಿಯಲ್ಲಿ ಸೆರೆ
ಕುಮಟಾ :ತಾಲೂಕಿನ ಹಿರೇಗುತ್ತಿ ಅರಣ್ಯ ವ್ಯಾಪ್ತಿಯ ಸಂತೆಗದ್ದೆಯಲ್ಲಿ ವೆಂಕಟ್ರಮಣ ನಾಯ್ಕ ಎಂಬವರ ಮನೆಯಲ್ಲಿ ರಾತ್ರಿ ಸಮಯದಲ್ಲಿ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದಿದೆ. ಮನೆಯವರು ಬೆಳಿಗ್ಗೆ ನಾಯಿ ಕಾಣದೆ ಇರುವಾಗ ತಮ್ಮ ಮನೆಗೆ ಅಳವಡಿಸಿರುವ ಸಿಸಿ ಕ್ಯಾಮರಾ ವೀಕ್ಷಿಸಿದಾಗ ಚಿರತೆ ಹೊತ್ತೊಯ್ದ ದೃಶ್ಯ ಅವರಿಗೆ ಕಂಡುಬಂದಿದೆ. ಬುಧವಾರ ರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. … Continued