ಕರ್ನಾಟಕದಲ್ಲಿ ಮಳೆ: ಚಿಕ್ಕೋಡಿಯಲ್ಲಿ ಸೇತುವೆಗಳು ಜಲಾವೃತ, ಕರಾವಳಿ, ಮಲೆನಾಡಿನಲ್ಲಿ 3 ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.
ಕೆಲವೆಡೆ ಗುಡುಗು ಸಹಿತ ಧಾರಾಕಾರ ಮಳೆಗೆ ಮರಗಳು ಧರೆಗುರುಳಿದ್ದರೆ, ಇನ್ನೂ ಹಲವೆಡೆ ರಸ್ತೆಗಳು, ಸೇತುವೆಗಳು ಬಿರುಕು ಬಿಟ್ಟಿವೆ. ಬೆಳಗಾವಿ ಜಿಲ್ಲೆಯಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಚಿಕ್ಕೋಡಿಯಲ್ಲಿ ನಾಲ್ಕು ಸೇತುವೆಗಳು ಜಲಾವೃತವಾಗಿವೆ.
ವಿಶೇಷವಾಗಿ ಕರ್ನಾಟಕದ ಮಲೆನಾಡು ಭಾಗಗಳಲ್ಲಿ ವ್ಯಾಪಕವಾಗಿ ಮಲೆಯಾಗುತ್ತಿರುವುದರಿಂದ ತುಂಗಭದ್ರಾ ನದಿ, ಶರವಾತಿ, ಕಾವೇರಿ ಮೊದಲಾದ ನದಿಗಳಲ್ಲಿ ನೀರಿನ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದರೆ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೆಳಗಾವಿ, ಖಾನಾಪುರದಲ್ಲಿ ವಿಪರೀತ ಮಳೆಯಾಗುತ್ತಿರುವದರಿಂದ ಕೃಷ್ಣಾ ಹಾಗೂ ಮಲಪ್ರಭಾ ಮತ್ತು ಘಟಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಮಹಾರಾಷ್ಟ್ರ ಮತ್ತು ಬೆಳಗಾವಿಯಲ್ಲಿ ಅಪಾರ ಪ್ರಮಾಣದ ಮಳೆಯಾಗುತ್ತಿರುವ ಕಾರಣ ಚಿಕ್ಕೋಡಿ ಉಪವಿಭಾಗದ ನಾಲ್ಕು ಸೇತುವೆಗಳು ಜಲಾವೃತವಾಗಿವೆ.
ಕೃಷ್ಣಾ ನದಿ, ವೇದಗಂಗಾ, ದೂಧ ಗಂಗಾ ಮತ್ತು ಹಿರಣ್ಯಾಕ್ಷಿ ನದಿಗಳ ನೀರಿನ ಮಟ್ಟದಲ್ಲಿ ಇದ್ದಕ್ಕಿದ್ದಂತೆ ಏರಿಕೆಯಾಗಿದೆ, ಅವರು ಜತ್ರತ್-ಭಿವಾಶಿ ಸೇತುವೆ, ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಯ ಅಕೋಲ್-ಸಿಡ್ನಾಲ್ ಸೇತುವೆ, ಕರಡಾಗ-ಭೋಜ್ ಗ್ರಾಮಗಳ ಸಂಪರ್ಕಿಸುವ ಸೇತುವೆ, ಮತ್ತು ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ನದಿಯಲ್ಲಿ ಸಂಪರ್ಕಿಸುವ ಸೇತುವೆಯಾದ ಸಂಕೇಶ್ವರ-ನಾಗ್ನೂರ್ ಸೇತುವೆಗಳು ಸಂಪೂರ್ಣ ಜಲಾವೃತವಾಗಿವೆ.
ಶಿವಮೊಗ್ಗ ಜಿಲ್ಲೆಯ ಹೊಸ ನಗರ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಬಿಡುವಿಲ್ಲದೇ ಸುರಿಯುತ್ತಿರುವ ಮಳೆಯಿಂದಾಗಿ ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ತುಂಗಾ ಜಲಾಶಯದ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಗುರುವಾರ ತುಂಗಾ ಜಲಾಶಯದಲ್ಲಿ ನೀರಿನ ಒಳಹರಿವು 33,700 ಕ್ಯೂಸೆಕ್ ಇತ್ತು.
ಕಳೆದ 2 ವಾರಗಳಿಂದ ನಿರಂತರವಾಗಿ ಉಡುಪಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿದಿದ್ದು, ಗುರುವಾರ ಕೊಂಚ ಬಿಡುವು ನೀಡಿತ್ತು, ಮಧ್ಯಾಹ್ನ ಮತ್ತೆ ಆರಂಭವಾದ ಮಳೆ ಸುಮಾರು 1ಗಂಟೆ ಎಡೆಬಿಡದೆ ಸುರಿದಿದೆ. ಕುಂದಾಪುರದಲ್ಲಿ ಸಂಜೆ ವೇಳೆಗಾ ಧಾರಾಕಾರ ಮಳೆಯಾಗಿತ್ತು, ಮೂರು ದಿನಗಳ ಕಾಲ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ 40-50 ಕಿಮೀ ವೇಗದಲ್ಲಿ ಪ್ರಬಲ ಗಾಳಿ ಬೀಸುತ್ತಿದೆ.
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ತೀವ್ರಗೊಂಡಿದ್ದು, ಮುಂಗಾರು ಆರಂಭದಲ್ಲೇ ಆರ್ಭಟ ಜೋರಾಗಿದೆ. ಕಳೆದ ವರ್ಷ ಶುರುವಿನಲ್ಲಿ ಬಿಡುವು ಕೊಟ್ಟಿದ್ದ ಮಳೆರಾಯ ಈ ಬಾರಿ ಬಿಟ್ಟೂಬಿಡೆದೇ ಸುರಿಯುತ್ತಿರುವುದು ರೈತರಲ್ಲಿ ಸಣ್ಣಮಟ್ಟಿಗಿನ ಆತಂಕವನ್ನೂ ಸೃಷ್ಟಿಸಿದೆ. ಈಗಲೇ ಹೀಗಾದರೆ ಜುಲೈ, ಆಗಸ್ಟ್ ತಿಂಗಳ ಮಳೆಯ ಹೊಡೆತವನ್ನು ತಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಕೃಷಿಕರಲ್ಲಿ ಆರಂಭವಾಗಿದೆ. ಜೋರು ಮಳೆಯಿಂದಾಗಿ ಜಲಾಶಯಗಳಿಗೂ ಭರಪೂರ ನೀರು ಹರಿದು ಬರಲಾರಂಭಿಸಿದೆ.

ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

ಹಾಸನ, ಸಕಲೇಶಪುರ, ಆಲೂರು, ಬೇಲೂರು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಹೆತ್ತೂರು ಸಮೀಪದ ಹಾಡ್ಯ ಗ್ರಾಮದಲ್ಲಿ ಮನೆ ಕುಸಿತಗೊಂಡಿದೆ. ಹೆತ್ತೂರು ಗ್ರಾಮದಲ್ಲಿ ಗದ್ದೆ ಸಮೀಪದ ಅಲ್ಪ ಪ್ರಮಾಣದ ಭೂ ಕುಸಿತ ಕೂಡ ಸಂಭವಿಸಿದ್ದು, ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಇನ್ನು ಸಕಲೇಶಪುರ ತಾಲೂಕಿನ ಬಾಣಗೇರಿ ಗ್ರಾಮದಲ್ಲಿ ಭಾರೀ ಗಾಳಿ ಮಳೆಗೆ ಅಂಗನವಾಡಿ ಮೇಲ್ಛಾವಣಿ ಹಾರಿ ಹೋಗಿದ್ದು, ಇಡೀ ಕಟ್ಟಡ ಕುಸಿಯುವ ಹಂತ ತಲುಪಿದೆ.ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, ನದಿ ಪಾತ್ರದ ಜನರಿರಲ್ಲಿ ಪ್ರವಾಹ ಆತಂಕ ಎದುರಾಗಿದೆ.ಆಗುಂಬೆ,ಸಿದ್ದಾಪುರ, ಶೃಂಗೇರಿ, ಕಳಸ, ಭಾಗಮಂಡಲ, ಮಂಚಿಕೆರೆ, ತಾಳಗುಪ್ಪ, ಮುಂಡಗೋಡು, ಬೆಳ್ತಂಗಡಿ, ಜಯಪುರ, ಬೆಳಗಾವಿ, ಧರ್ಮಸ್ಥಳ, ಕದ್ರ, ವಿರಾಜಪೇಟೆ, ಮೂಡುಬಿದಿರೆ, ಅಥಣಿ, ಸಿದ್ದಾಪುರ, ಕಿರವತ್ತಿ, ಕೊಲ್ಲೂರು, ನಿಪ್ಪಾಣಿ, ಬೆಳಗಾವಿ, ಖಾನಾಪುರ ಹಾವೇರಿ, ಹುಂಚದಕಟ್ಟೆ, ಮಂಗಳೂರು, ಪಣಂಬೂರು ಮೊದಲಾದ ಕಡೆ ಮಳೆಯಾಗಿದೆ.
ಶಿವಮೊಗ್ಗದ ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಹೀಗಾಗಿ ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚಾಗಿದೆ.
ಜೂನ್ 21ರ ವರೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಕಲಬುರಗಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಜಾಗ್ರತಾ ಕ್ರಮವಾಗಿ ಮುಂದಿನ ಮೂರು ದಿನ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಅಣೆಕಟ್ಟೆಗಳು ತುಂಬಿತ್ತಿವೆ, ನದಿಗಳ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಅನೇಕ ಕಡೆಗಳಲ್ಲಿ ರಸ್ತೆ -ಸೇತುವೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳ  ನೀರಿನ ಮಟ್ಟದ ವಿವರ ಕೊಡಲಾಗಿದೆ.

ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ: 554.4 ಅಡಿ​
ಒಟ್ಟು ಸಾಮರ್ಥ್ಯ: 151.75 ಟಿಎಂಸಿ
ಇಂದಿನ ನೀರಿನ ಮಟ್ಟ: 53.38 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 27.3 ಟಿಎಂಸಿ
ಇಂದಿನ ಒಳಹರಿವು: 31,676 ಕ್ಯೂಸೆಕ್ಸ್​
ಇಂದಿನ ಹೊರಹರಿವು: 958 ಕ್ಯೂಸೆಕ್ಸ್

ಸೂಪಾ ಜಲಾಶಯ
ಒಟ್ಟು ಸಾಮರ್ಥ್ಯ: 145.33 ಟಿಎಂಸಿ
ಇಂದಿನ ನೀರಿನ ಮಟ್ಟ: 53.20 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 38.9 ಟಿಎಂಸಿ
ಇಂದಿನ ಒಳಹರಿವು: 18,232 ಕ್ಯೂಸೆಕ್ಸ್​
ಇಂದಿನ ಹೊರಹರಿವು: 503 ಕ್ಯೂಸೆಕ್ಸ್​

ಭದ್ರಾ ಜಲಾಶಯ
ಒಟ್ಟು ಸಾಮರ್ಥ್ಯ: 71.54 ಟಿಎಂಸಿ
ಇಂದಿನ ನೀರಿನ ಮಟ್ಟ: 29.71 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ: 23.36 ಟಿಎಂಸಿ
ಇಂದಿನ ಒಳಹರಿವು: 12,557 ಕ್ಯೂಸೆಕ್ಸ್​
ಇಂದಿನ ಹೊರಹರಿವು: 68 ಕ್ಯೂಸೆಕ್ಸ್​

ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ: 1,633 ಅಡಿ
ಒಟ್ಟು ಸಾಮರ್ಥ್ಯ: 100.86 ಟಿಎಂಸಿ
ಇಂದಿನ ನೀರಿನ ಮಟ್ಟ: 10.06 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 6.14 ಟಿಎಂಸಿ
ಇಂದಿನ ಒಳಹರಿವು: 568 ಕ್ಯೂಸೆಕ್ಸ್​
ಇಂದಿನ ಹೊರಹರಿವು: 301 ಕ್ಯೂಸೆಕ್ಸ್

ವಾರಾಹಿ ಜಲಾಶಯ
ಗರಿಷ್ಠ ಮಟ್ಟ: 594.36 ಅಡಿ​
ಒಟ್ಟು ಸಾಮರ್ಥ್ಯ: 31.10 ಟಿಎಂಸಿ
ಇಂದಿನ ನೀರಿನ ಮಟ್ಟ: 2.50 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 3.46 ಟಿಎಂಸಿ
ಇಂದಿನ ಒಳಹರಿವು: 3,897 ಕ್ಯೂಸೆಕ್ಸ್​
ಇಂದಿನ ಹೊರಹರಿವು: —ಕ್ಯೂಸೆಕ್ಸ್​

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

ಕೆಆರ್​ಎಸ್​ ಜಲಾಶಯ
ಗರಿಷ್ಠ ನೀರಿನ ಮಟ್ಟ: 124.80 ಅಡಿ
ಒಟ್ಟು ಸಾಮರ್ಥ್ಯ: 49.45 ಟಿಎಂಸಿ
ಇಂದಿನ ನೀರಿನ ಮಟ್ಟ: 12.98 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 17.72 ಟಿಎಂಸಿ
ಇಂದಿನ ಒಳಹರಿವು: 6,934 ಕ್ಯೂಸೆಕ್ಸ್
ಇಂದಿನ ಹೊರಹರಿವು: 365 ಕ್ಯೂಸೆಕ್ಸ್​

ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 2,284 ಅಡಿ
ಒಟ್ಟು ಸಾಮರ್ಥ್ಯ: 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 11.24 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 8.19 ಟಿಎಂಸಿ
ಇಂದಿನ ಒಳಹರಿವು: 13,022 ಕ್ಯೂಸೆಕ್ಸ್​
ಇಂದಿನ ಹೊರಹರಿವು: 700 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ: 1,704 ಅಡಿ
ಒಟ್ಟು ಸಾಮರ್ಥ್ಯ: 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 25.07 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 35.06 ಟಿಎಂಸಿ
ಇಂದಿನ ಒಳಹರಿವು: 13,784 ಕ್ಯೂಸೆಕ್ಸ್​
ಇಂದಿನ ಹೊರಹರಿವು: 451 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ: 662.94 ಅಡಿ​
ಒಟ್ಟು ಸಾಮರ್ಥ್ಯ: 51.00 ಟಿಎಂಸಿ
ಇಂದಿನ ನೀರಿನ ಮಟ್ಟ: 7.16 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 9.32 ಟಿಎಂಸಿ
ಇಂದಿನ ಒಳಹರಿವು: 17,114 ಕ್ಯೂಸೆಕ್ಸ್​​
ಇಂದಿನ ಹೊರಹರಿವು: 87 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ: 633.83 ಅಡಿ​
ಒಟ್ಟು ಸಾಮರ್ಥ್ಯ: 37.73 ಟಿಎಂಸಿ
ಇಂದಿನ ನೀರಿನ ಮಟ್ಟ: 9.85 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 12.02 ಟಿಎಂಸಿ
ಇಂದಿನ ಒಳಹರಿವು: 877 ಕ್ಯೂಸೆಕ್ಸ್​
ಇಂದಿನ ಹೊರಹರಿವು: 194 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ: 2,922 ಅಡಿ​
ಒಟ್ಟು ಸಾಮರ್ಥ್ಯ: 37.10 ಟಿಎಂಸಿ
ಇಂದಿನ ನೀರಿನ ಮಟ್ಟ: 11.03 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 9.86 ಟಿಎಂಸಿ
ಇಂದಿನ ಒಳಹರಿವು: 10,454 ಕ್ಯೂಸೆಕ್ಸ್​​
ಇಂದಿನ ಹೊರಹರಿವು: 200 ಕ್ಯೂಸೆಕ್ಸ್​

ಹಾರಂಗಿ ಜಲಾಶಯ
ಗರಿಷ್ಠ ಮಟ್ಟ: 871.42 ಅಡಿ​
ಒಟ್ಟು ಸಾಮರ್ಥ್ಯ: 8.50 ಟಿಎಂಸಿ
ಇಂದಿನ ನೀರಿನ ಮಟ್ಟ: 3.42 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 3.52 ಟಿಎಂಸಿ
ಇಂದಿನ ಒಳಹರಿವು: 1,411 ಕ್ಯೂಸೆಕ್ಸ್​
ಇಂದಿನ ಹೊರಹರಿವು: 80 ಕ್ಯೂಸೆಕ್ಸ್​​

ನಾರಾಯಣಪುರ ಜಲಾಶಯ
ಒಟ್ಟು ಸಾಮರ್ಥ್ಯ: 33.31 ಟಿಎಂಸಿ
ಇಂದಿನ ನೀರಿನ ಮಟ್ಟ: 19.53 ಟಿಎಂಸಿ
ಕಳೆದ ವರ್ಷದ ನೀರಿನ ಮಟ್ಟ: 19.82 ಟಿಎಂಸಿ
ಇಂದಿನ ಒಳಹರಿವು: 267 ಕ್ಯೂಸೆಕ್ಸ್​
ಇಂದಿನ ಹೊರಹರಿವು: 267 ಕ್ಯೂಸೆಕ್ಸ್​​

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement