ಬೆಂಗಳೂರು(ಜೂ.19): ಯಅವೆಲ್ಲ ಜಿಲ್ಲೆಗಳಲ್ಲಿ ಕೋವಿಡ್ ಸಕಾರಾತ್ಮಕ ದರ ಶೇ.5ಕ್ಕಿಂತ ಕಡಿಮೆ ಇರುವ ರಾಜ್ಯ 16 ಜಿಲ್ಲೆಗಳಲ್ಲಿ ಜೂನ್ 21ರಿಂದ ಅನ್‌ಲಾಕ್ 2.0 ಜಾರಿ ಮಾಡಲಾಗುತ್ತಿದ್ದು ಮತ್ತಷ್ಟು ಸಡಿಲಿಕೆಗಳನ್ನು ಘೋಷಣೆ ಮಾಡಲಾಗಿದೆ. ಆದರೆ ವಾರಾಂತ್ಯ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಇರುತ್ತದೆ.
ಬೆಂಗಳೂರು ನಗರ, ಉತ್ತರ ಕನ್ನಡ, ಹಾವೇರಿ, ಗದಗ, ಬಾಗಲಕೋಟೆ,ಬೆಳಗಾವಿ, ತುಮಕೂರು,ಕಲಬುರ್ಗಿ, ಬೀದರ, ರಾಯಚೂರು, ಯಾದಗಿರಿ, ಕೊಪ್ಪಳ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಅನ್ಲಾಕ್ 2.0 ಜಾರಿ ಮಾಡಲಾಗಿದೆ.ಇದು ಜುಲೈ 5ರ ವರೆಗೆ ಜಾರಿಯಲ್ಲಿರುತ್ತದೆ.
ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿರುವ ಹಾಗೂ ಶೇ. 10ಕ್ಕಿಂತ ಕಡಿಮೆ ಇರುವ ಹಾಸನ, ಉಡುಪಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಕೊಡಗು, ಚಾಮರಾಜ ನಗರ, ವಿಜಯಪುರ ಇಲ್ಲಿ ಜೂನ್ 11 ರ ಆದೇಶದಲ್ಲಿ ಉಲ್ಲೇಖಿಸಲಾದ ಮಾರ್ಗಸೂಚಿಗಳು ಅನ್ವಯವಾಗುತ್ತವೆ. ಅಂದರೆ ಅನ್‌ಲಾಕ್ 1.0 ಸಡಿಲಿಕೆಗಳು ಮಾತ್ರ ಜಾರಿಯಲ್ಲಿರುತ್ತದೆ.
ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ಸಂಜೆ ಸಚಿವರುಗಳ ಜತೆ ಸಭೆ ನಡೆಸಿದ 2ನೇ ಹಂತದ ಅನ್‌ಲಾಕ್‌ನಲ್ಲಿ ಯಾವೆಲ್ಲ ವಿನಾಯಿತಿಗಳನ್ನು ನೀಡಬಹುದು ಎಂಬ ಬಗ್ಗೆ ಚರ್ಚಿಸಿ ಈ ಘೋಷಣೆ ಮಾಡಿದ್ದಾರೆ. ಲಾಕ್‌ಡೌನ್ ಮುಂದುವರೆದಿರುವ ಮೈಸೂರು ಜಿಲ್ಲೆ ಹೊರತು ಪಡಿಸಿ 13 ಜಿಲ್ಲೆಗಳಲ್ಲಿ ಅನ್‌ಲಾಕ್ 1.0 ಜಾರಿಯಲ್ಲಿರುತ್ತದೆ. ಆದರೆ ಮೈಸೂರು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಂಕಿನ ಅಬ್ಬರ ಇಳಿಮುಖವಾಗಿರುವುದರಿಂದ ಜೂ. 21ರಿಂದ ರಿಂದ ಅನ್‌ಲಾಕ್- 2.O ಜಾರಿ ಮಾಡಲು ತಜ್ಞರ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದ ರೀತಿಯಲ್ಲಿ ಅನ್‌ಲಾಕ್ ಪ್ರಕಟಿಸಲಾಗಿದೆ.
ಸೋಮವಾರದಿಂದ ಅನ್ ಲಾಕ್ 2.O ಜಾರಿ ಹಿನ್ನಲೆ, ಅಂದಿನಿಂದ ಕರ್ನಾಟಕ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಸ್ ಸಂಚಾರದ ಬಗ್ಗೆ ಇಂದಿನ ಸಿಎಂ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಆದರೆ
16 ಜಿಲ್ಲೆಗಳಲ್ಲಿ ಅನ್ಲಾಕ್ 2.O ಜಾರಿ, ಯಾವುದಕ್ಕೆ ಅವಕಾಶ…
*ಎಲ್ಲ ರೀತಿಯ ಅಂಗಡಿಗಳ ಆರಂಭಕ್ಕೆ ಅನುಮತಿ, ಆದರೆ ಶೇ. 50ರಷ್ಟು ಜನರ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅವಕಾಶ. ಬೆಳಿಗ್ಗೆ 6ರಿಂದ ಸಂಜೆ 5 ಗಂಟೆ ವರೆಗೆ ಮಾತ್ರ ಅವಕಾಶ,
*ಶೇ. 50ರಷ್ಟು ಗ್ರಾಹಕರ ಮಿತಿಯೊಂದಿಗೆ ಹೋಟೆಲ್‌ಗಳು ಹಾಗೂ ರೆಸ್ಟಾರೆಂಟುಗಳಲ್ಲಿ ಕುಳಿತು ಆಹಾರ ಸೇವನೆಗೆ ಅವಕಾಶ, ಬೆಳಿಗ್ಗೆ 6ರಿಂದ ಸಂಜೆ 5 ಗಂಟೆ ವರೆಗೆ ಮಾತ್ರ, ಹವಾನಿಯಂತ್ರಣ ವ್ಯವಸ್ಥೆ ಬಳಸುವಂತಿಲ್ಲ.
*ಮಧ್ಯದಂಗಡಿಗಳಲ್ಲಿ ಕೇವಲ ಪಾರ್ಸಲ್ಲುಗಳಿಗಷ್ಟೇ ಅವಕಾಶ, ಸಂಜೆ 5 ಗಂಟೆ ವರೆಗೆ ಅವಕಾಶ,
* ಬಸ್ಸುಗಳನ್ನ ಮಾತ್ರ ರಸ್ತೆಗಿಳಿಸಲು ಅನುಮತಿ. ಬಸ್ಸುಗಳಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಸಂಚಾರಕ್ಕೆ ಅನುಮತಿ.
*ಮೆಟ್ರೋ ಸಂಚಾರಕ್ಕೂ ಅವಕಾಶ, ಆದರೆ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ.
*ಅಗತ್ಯ ವಸ್ತುಗಳ ಖರೀದಿ ಸಂಜೆ 5ರ ವರೆಗೂ ವಿಸ್ತರಣೆ
*ಸರ್ಕಾರಿ ಕಚೇರಿಗಳು ಹಾಗೂ ಖಾಸಗಿ ಕಚೇರಿಗಳು ಶೇ. 50 ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಣೆ
*ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ.
*ಹೊರಾಂಗಣ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ. ಆದರೆ ಪ್ರೇಕ್ಷಕರಿಗೆ ಅವಕಾಶವಿಲ್ಲ
*ಜಿಮ್‌ಗಳಿಗೆ ಶೇ.50ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಣೆಗೆ ಅವಕಾಶ.
ಲಾಜ್ ಹಾಗೂ ರೆಸಾರ್ಟುಗಳಲ್ಲಿ ಶೇ.50ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅವಕಾಶ.
ಯಾವುದಕ್ಕೆ ಅವಕಾಶವಿಲ್ಲ
*ಶಿಕ್ಷಣ ಸಂಸ್ಥೆಗಳು
*ಪಬ್‌ಗಳು
*ಅಮ್ಯೂಸ್‌ಮೆಂಟ್ ಪಾರ್ಕ್‌ಗಳು, ಸ್ವಿಮ್ಮಿಂಗ್ ಪೂಲ್‌ಗಳು
*ಚಿತ್ರಮಂದಿರಗಳು
*ಶಾಪಿಂಗ್ ಮಾಲ್‌ಗಳು
*ಸಭೆ-ಸಮಾರಂಭಗಳು, ಕಾರ್ಯಕ್ರಮಗಳು
*ದೇವಸ್ಥಾನಗಳು, ಧಾರ್ಮಿಕ ಸ್ಥಳಗಳು, ಪ್ರಾರ್ಥನಾ ಮಂದಿರಗಳು
ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮೀಣ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 13 ಜಿಲ್ಲೆಗಳಲ್ಲಿ, 5-10% ರಷ್ಟು ಪರೀಕ್ಷಾ ಸಕಾರಾತ್ಮಕತೆ ಇದ್ದು ಈ ಜಿಲ್ಲೆಗಳಲ್ಲಿ ಜೂನ್ 11 ರ ಆದೇಶದಲ್ಲಿ ಉಲ್ಲೇಖಿಸಲಾದ ಮಾರ್ಗಸೂಚಿಗಳು ಅನ್ವಯವಾಗುತ್ತವೆ. ಸಕಾರಾತ್ಮಕ ದರವು 10% ಕ್ಕಿಂತ ಹೆಚ್ಚಿರುವ ಮೈಸೂರು ಜಿಲ್ಲೆಯಲ್ಲಿ ಮಾತ್ರ, ಲಾಕ್‌ಡೌನ್ ಮುಂದುವರಿಯುತ್ತದೆ, ಅಗತ್ಯ ಮಳಿಗೆಗಳು ಬೆಳಿಗ್ಗೆ 10 ರ ವರೆಗೆ ಮಾತ್ರ ತೆರೆದಿರುತ್ತದೆ.
ಹೊಸ ಲಾಕ್‌ಡೌನ್ ನಿಯಮಗಳು ಜುಲೈ 5 ರವರೆಗೆ ಜಾರಿಯಲ್ಲಿರುತ್ತವೆ. ರಾಜ್ಯವ್ಯಾಪಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಹಾಗೆಯೇ ಇರುತ್ತದೆ. ರಾತ್ರಿ ಕರ್ಫ್ಯೂ ಪ್ರತಿದಿನ ಸಂಜೆ 7 ರಿಂದ 5 ರವರೆಗೆ ಮತ್ತು ವಾರಾಂತ್ಯದ ಕರ್ಫ್ಯೂ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ಇರುತ್ತದೆ. ಬಸ್ ಸಾರಿಗೆಯನ್ನು ರಾಜ್ಯದಲ್ಲಿ 50% ಸಾಮರ್ಥ್ಯಕ್ಕೆ ಸೀಮಿತಗೊಳಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಕಟಣೆಯ ಪ್ರಕಾರ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು, ಶಾಪಿಂಗ್ ಮಾಲ್‌ಗಳು, ಚಿತ್ರಮಂದಿರಗಳು, ಪಬ್‌ಗಳು, ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ಇನ್ನೂ ತೆರೆಯಲು ಅನುಮತಿ ಇಲ್ಲ. ಕೋವಿಡ್-19 ಪ್ರೋಟೋಕಾಲ್‌ಗಳನ್ನು ಅನುಸರಿಸಲು ರಾಜ್ಯದ ನಿವಾಸಿಗಳನ್ನು ಅವರು ಕೋರಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ