ಭಾರತದಲ್ಲಿ 81 ದಿನಗಳಲ್ಲಿ ಕಡಿಮೆ ದೈನಂದಿನ ಕೊರೊನಾ ಸೋಂಕು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿಕೊರೊನಾ ವೈರಸ್ಸಿನ 58,419 ಹೊಸ ಪ್ರಕರಣಗಳನ್ನು ಭಾರತ ದಾಖಲಿಸಿದೆ, ಜೊತೆಗೆ ಿದೇ ಸಮಯದಲ್ಲಿ ಸೋಂಕಿನಿಂದ 1,576 ಸಾವುಗಳು ಸಂಭವಿಸಿವೆ.
ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 87,619 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಒಟ್ಟು ಚೇತರಿಕೆ 2,87,66,009 ಕ್ಕೆ ತಲುಪಿದೆ. ಭಾರತದಲ್ಲಿ ಒಟ್ಟು ಕೋವಿಡ್‌-19 ಪ್ರಕರಣಗಳು ಈಗ 2,98,81,965 ಕ್ಕೆ ಏರಿದೆ ಹಾಗೂ ದೇಶದಲ್ಲಿ 7,29,243 ಸಕ್ರಿಯ ಪ್ರಕರಣಗಳಿವೆ ಎಂದು ಡೇಟಾ ತೋರಿಸಿದೆ.
ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ ಈಗ 3,86,713 ಆಗಿದೆ.
ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳು ಕೇರಳದಲ್ಲಿ 12,443 ಪ್ರಕರಣಗಳು, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ 8,912 ಪ್ರಕರಣಗಳು, ತಮಿಳುನಾಡು 8,183 ಪ್ರಕರಣಗಳು, ಕರ್ನಾಟಕ 5,815 ಪ್ರಕರಣಗಳು ಮತ್ತು ಆಂಧ್ರಪ್ರದೇಶ 5,674 ಪ್ರಕರಣಗಳು ದಾಖಲಾಗಿವೆ.
ಭಾರತದಲ್ಲಿ ಈವರೆಗೆ ಒಟ್ಟು 27,66,93,572 ಜನರಿಗೆ ಕೋವಿಡ್‌-19 ವಿರುದ್ಧ ಲಸಿಕೆ ನೀಡಲಾಗಿದೆ.
ಭಾರತದ ಕೋವಿಡ್ -19 ಮೊತ್ತವು ಕಳೆದ ವರ್ಷ ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿದೆ.
ಇದು ಸೆಪ್ಟೆಂಬರ್ 28 ರಂದು 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ದಾಟಿದೆ ಮತ್ತು ಕಳೆದ ವರ್ಷ ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿದೆ. ಮೇ 4 ರಂದು 2 ಕೋಟಿ ಗಡಿ ದಾಟಿದೆ.
ಏತನ್ಮಧ್ಯೆ, ಯುಎಇ ಅನುಮೋದಿತ ಕೋವಿಡ್‌ -19 ಲಸಿಕೆಯ ಎರಡು ಪ್ರಮಾಣವನ್ನು ಸ್ವೀಕರಿಸಿದ್ದರೆ ದುಬೈನ ಅಧಿಕಾರಿಗಳು ಭಾರತ ಸೇರಿದಂತೆ ಕೆಲವು ದೇಶಗಳ ನಿವಾಸಿಗಳಿಗೆ ಪ್ರಯಾಣ ನಿರ್ಬಂಧವನ್ನು ಸಡಿಲಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಶೇಖ್ ಮನ್ಸೂರ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ನೇತೃತ್ವದ ದುಬೈನಲ್ಲಿನ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣೆಯ ಸುಪ್ರೀಂ ಸಮಿತಿಯು ಜೂನ್ 23 ರಿಂದ ದಕ್ಷಿಣ ಆಫ್ರಿಕಾ, ನೈಜೀರಿಯಾ ಮತ್ತು ಭಾರತದಿಂದ ಒಳಬರುವ ಪ್ರಯಾಣಿಕರಿಗಾಗಿ ದುಬೈನ ಪ್ರಯಾಣ ಪ್ರೋಟೋಕಾಲ್‌ ಗಳಿಗೆ ನವೀಕರಣಗಳನ್ನು ಪ್ರಕಟಿಸಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಭಾರತದಿಂದ ಪ್ರಯಾಣಕ್ಕೆ ಸಂಬಂಧಿಸಿದಂತೆ, ಯುಎಇ ಅನುಮೋದಿತ ಲಸಿಕೆಯ ಎರಡು ಪ್ರಮಾಣವನ್ನು ಪಡೆದ ಮಾನ್ಯ ನಿವಾಸ ವೀಸಾ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ದುಬೈಗೆ ಪ್ರಯಾಣಿಸಲು ಅವಕಾಶವಿದೆ.
ಯುಎಇ ಸರ್ಕಾರವು ಅನುಮೋದಿಸಿದ ನಾಲ್ಕು ಲಸಿಕೆಗಳಿವೆ – ಸಿನೊಫಾರ್ಮ್, ಫಿಜರ್-ಬಯೋಟೆಕ್, ಸ್ಪುಟ್ನಿಕ್ ವಿ ಮತ್ತು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾವನ್ನು ವರದಿಯಲ್ಲಿ ಸೇರಿಸಲಾಗಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement