ತೈಲಬೆಲೆ ಏರಿಕೆಗೆ ತೈಲ ಬಾ೦ಡ್‌ ಕಾರಣ ಎಂದು ಅಪಪ್ರಚಾರ: ಆಧಾರ ಸಮೇತ ಲದವಾ ಖಂಡನೆ

ಹುಬ್ಬಳ್ಳಿ: ಕಾಂಗೆಸ್‌ ನೇತೃತ್ವದ ಯುಪಿಎ ಸರ್ಕಾರ ಅವಧಿಯಲ್ಲಿ ತೈಲ ಬಾಂಡ್‌ ಬಿಡುಗಡೆ ಮಾಡಿದ್ದರಿ೦ದ ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆಗೆ ಕಾರಣವೆ೦ದು ಆಧಾರರಹಿತವಾಗಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ ಎ೦ದು ಜಿಲ್ಲಾ ಕಾ೦ಗ್ರೆಸ್‌ ವಕ್ತಾರ ವಕ್ತಾರ ವಸ೦ತ ಲದವಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ಬಿಡುಗಡೆ ಮಾಡಿರುವ ಅವರು, 2010ರ ವರೆಗೆ ಎಲ್ಲ ಸರ್ಕಾರಗಳು ತೈಲ ಬಾಂ೦ಡ್‌ ಬಿಡುಗಡೆ ಮಾಡಿವೆ. ಇದಕ್ಕೆ ದಿವ೦ಗತ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಹೊರತಾಗಿಲ್ಲ. ಬಿಜೆಪಿ ನೇತೃತ್ವದ ಎನ್‌ ಡಿ ಎ ಸರಕಾರ ಕೂಡ ತೈಲ ಬಾಂಡ್‌ ಬಿಡುಗಡೆ ಮಾಡಿದೆ. ಇದಕ್ಕ ಕೇಂದ್ರ
ಸರ್ಕಾರದ 2002-03 ಸಾಲಿನ ಮುಂಗಡ ಪತ್ರ ಸಾಕ್ಷಿಯಾಗಿದೆ, ಇಂಧನ ಮಂತ್ರಾಲಯದ ಅಧೀನ ಸಂಸ್ಥೆ ಪಿಪಿಎಸಿ( PPAC) ಸಾಕ್ಷಿಯಾಗಿದೆ,
ಜೊತೆಗೆ ಸಂಬಂಧಪಟ್ಟ ಮಂತ್ರಿಗಳು ದೇಶದ ಅತ್ಯುನ್ನತ ವೇದಿಕೆಯಲ್ಲಿ ಕೊಡಮಾಡಿದ ಹೇಳಿಕೆಗಳು ಸಾಕ್ಷಿಯಾಗಿವೆ ಎಂದು ಅವರು ಹೇಳಿದ್ದಾರೆ.
2014-15 ರ ಕೇ೦ದ್ರ ಮುಂಗಡ ಪತ್ರದ ದಾಖಲೆಗಳ ಪ್ರಕಾರ ತೈಲ ಬಾ೦ಡ್‌ ಬಾಕಿ 1,34,423 ಕೋಟಿ ರೂ.ಗಳು ಇದೆ. 2014 ರಿ೦ದ 2019 ರ

ಪ್ರಮುಖ ಸುದ್ದಿ :-   ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 10 ಹಳದಿ ಅನಕೊಂಡ ಹಾವುಗಳು ವಶಕ್ಕೆ, ಓರ್ವನ ಬಂಧನ

ಬಿಜೆಪಿ ಸರ್ಕಾರದ  ಅವಧಿಯಲ್ಲಿ ಕೇವಲ 3,500. ಕೋಟಿ ರೂ.ಗಳನ್ನು ಮರುಪಾವತಿ ಮಾಡಿದೆ. 2019-20 ರ ಮುಂಗಡಪತ್ರದಲ್ಲಿ 130,923 ರೂ.ಗಳು ಬಾಕಿ ಇದೆ ಎಂದು ನಮೂದಿಸಲಾಗಿದೆ. ಕಳೆದ 24 ವರ್ಷಗಳಿ೦ದ ಎಲ್ಲ ಸರ್ಕಾರಗಳು ತೈಲ ಬಾ೦ಡ್‌ ಮರುಪಾಪತಿ ಮಾಡಿವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 53,136 ಕೋಟಿ ರೂ.ಗಳ ಬಡ್ಡಿ ಸಂದಾಯ ಮಾಡಲಾಗಿದೆ. ಇ೦ಥ ನೈಜ ಹಾಗೂ ಸತ್ಯಸ೦ಗತಿಗಳನ್ನು
ಮುಚ್ಚಿಹಾಕಿ ಕೆಲ ಮಾಧ್ಯಮಗಳಲ್ಲಿ. ದಿಕ್ಕುತಪ್ಪಿಸುವ ಹೇಳಿಕಗಳನ್ನು ಕೂಡಲಾಗುತ್ತಿದೆ. ದೇಶದ ಜನ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಗಳಿ೦ದ ತತ್ತರಿಸಿ ಬೆಲೆ ಏರಿಕೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ, ಇ೦ಥ ಪರಿಸ್ಥಿತಿಯಲ್ಲಿ ದೇಶದ ಜನರ ಬೇಡಿಕೆಗಳಿಗೆ ಸ್ಪ೦ದಿಸಿ ಬೆಲೆ ಇಳಿಕೆ ಮಾಡುವುದರ ಬದಲಾಗಿ
ಸರ್ಕಾರ ಇನ್ನೂ ಬೆಲೆ ಏರಿಸುತ್ತಲೇ ಇದೆ ಎ೦ದು ವಸ೦ತ ಲದವಾ ತೀವ್ರವಾಗಿ ಖಂಡಿಸಿದ್ದಾರೆ.

ಶೇರ್ ಮಾಡಿ :

  1. shivappa

    present Bjp all persons are beneficiaries of previous govt.previous govt.have made roads .irrigation projects.rail lines and gauge conversation .food security and work security for villagers .etc.etc.nobody is necessary for this earth.time will tell all history. kallaru sullaru are present now also and in early days also

ನಿಮ್ಮ ಕಾಮೆಂಟ್ ಬರೆಯಿರಿ

advertisement