ಸೇನೆ ಕಾರ್ಯಾಚರಣೆ: ಲಷ್ಕರ್ ಕಮಾಂಡರ್‌ ಉಗ್ರ ಮುದಸಿರ್ ಸೇರಿದಂತೆ ಮೂವರು ಉಗ್ರರು ಹತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆಯಲ್ಲಿ ಕುಖ್ಯಾತ ಭಯೋತ್ಪಾದಕನೊಬ್ಬ ಹತನಾಗಿದ್ದಾನೆ.
ಮೂವರು ಪೊಲೀಸರು, ಇಬ್ಬರು ಕೌನ್ಸಿಲರ್ ಗಳು ಹಾಗೂ ಇಬ್ಬರು ನಾಗರೀಕರ ಸಾವಿಗೆ ಕಾರಣನಾಗಿದ್ದ ಪ್ರಮುಖ ಲಷ್ಕರ್ ಉಗ್ರ ಮುದಸಿರ್ ಸೇರಿದಂತೆ ಒಟ್ಟು ಮೂವರು ಉಗ್ರರನ್ನು ಎನ್ ಕೌಂಟರ್ ನಲ್ಲಿ ಸೇನೆ ಹೊಡೆದುರುಳಿಸಿದೆ.
ಕಾಶ್ಮೀರದ ಸೋಪೋರ್ ಜಿಲ್ಲೆಯ ಗುಂಡ್ ಬ್ರಾತ್ ಪ್ರದೇಶದಲ್ಲಿ ನಡೆದ ಮ್ಯಾರಥಾನ್ ಎನ್ ಕೌಂಟರ್ ನಲ್ಲಿ ಲಷ್ಕರ್ ಸಂಘಟನೆಯ ಪ್ರಮುಖ ಕಮಾಂಡರ್ ಮುದಸಿರ್ ಪಂಡಿತ್ ಮತ್ತು ವಿದೇಶಿ ಉಗ್ರ ಪಾಕ್ ಮೂಲದ ಅಸ್ರಾರ್ ಅಲಿಯಾಸ್ ಅಬ್ದುಲ್ಲಾ ಸೇರಿದಂತೆ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಾಶ್ಮೀರ ಐಜಿಪಿ ವಿಜಯ್ ಕುಮಾರ್ , ಲಷ್ಕರ್‌ ಕಮಾಂಡರ್‌ ಹಾಗೂ ಕಾಶ್ಮೀರದಲ್ಲಿ ಮೂವರು ಪೊಲೀಸರು, ಇಬ್ಬರು ಕೌನ್ಸಿಲರ್ ಗಳು, ಹಾಗೂ ಜನರ ಸಾವಿಗೆ ಕಾರಣನಾಗಿದ್ದ ಲಷ್ಕರ್ ಉಗ್ರರನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ.
ಈ ಪೈಕಿ ಲಷ್ಕರ್ ಸಂಘಟನೆಯ ಪ್ರಮುಖ ಕಮಾಂಡರ್ ಮುದಸಿರ್ ಪಂಡಿತ್ ಮತ್ತು ವಿದೇಶಿ ಉಗ್ರ ಪಾಕ್ ಮೂಲದ ಅಸ್ರಾರ್ ಅಲಿಯಾಸ್ ಅಬ್ದುಲ್ಲಾ ಕೂಡ ಸೇರಿದ್ದಾರೆ ಎಂದು ಹೇಳಿದರು. ವಿದೇಶಿ ಉಗ್ರ ಅಸ್ರಾರ್ ಅಲಿಯಾಸ್ ಅಬ್ದುಲ್ಲಾ 2018ರವರೆಗೂ ಉತ್ತರ ಕಾಶ್ಮೀರದಲ್ಲಿ ಸಕ್ರಿಯವಾಗಿ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂದು ವಿಜಯ್ ಕುಮಾರ್ ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement