ಅನೂಪ್‌ ಮಂಡಲ್‌ ಸಂಘಟನೆ ವಿರುದ್ಧ ನಾಳೆ ಜೈನ ಸಂಘಟನೆಗಳ ಪ್ರತಿಭಟನೆ

posted in: ರಾಜ್ಯ | 0

ಧಾರವಾಡ: ಸಮಾಜ ವಿರೋಧಿ ಮತ್ತು ಅರಾಜಕತಾವಾದಿ ಸಂಘಟನೆಯಾದ “ಅನೂಪ್ ಮಂಡಲ್” ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆಯೆಂದು ಘೋಷಿಸಲು ರಾಷ್ಟ್ರವ್ಯಾಪಿ ಆಂದೋಲನ ಆಯೋಜಿಸಲು ಭಾರತೀಯ ಜೈನ್ ಸಂಘಟನೆ ಕರೆ ನೀಡಿದೆ.
ಧಾರ್ಮಿಕ ವಿರೋಧಿ ಭಾವನೆಗಳನ್ನು ಪ್ರಚಾರ ಮಾಡಿ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವ “ಅನೂಪ್ ಮಂಡಲ್” ಸಂಘಟನೆಯನ್ನು ನಿಷೇಧಿಸಲು ಆಗ್ರಹಿಸಿ ಜೂ.೨೩ರಂದು ದೇಶಾದ್ಯಂತ ಪ್ರತಿಭಟನೆ ನಡೆಯಲಿದೆ. .
ಧಾರವಾಡ ಜಿಲ್ಲಾ ಜೈನ ಸಮಾಜದ ಸಭೆಯಲ್ಲಿ ತೀರ್ಮಾನಿಸಿದಂತೆ ಈ ಕರೆಗೆ ಬೆಂಬಲವಾಗಿ ಜೂನ್‌ ೨೩ರಂದು ಬೆಳಿಗ್ಗೆ ೧೧ ಗಂಟೆಗೆ ಧಾರವಾಡದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. .
ಈ ಪ್ರತಿಭಟನೆಗೆ ಧಾರವಾಡ ಜಿಲ್ಲೆಯ ದಿಗಂಬರ ಜೈನ ಸಮಾಜ ಟ್ರಸ್ಟ್, ಧಾರವಾಡ ಜೈನ ಮಿಲನ, ಧಾರವಾಡ, ಶ್ರೀ ಶ್ವೇತಾಂಬರ ಮೂರ್ತಿ ಪೂಜಕ ಸಂಘ, ಧಾರವಾಡ, ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಸಂಘ, ಧಾರವಾಡ, ಶ್ರೀ ಶ್ವೇತಾಂಬರ ತೆರಾ ಪಂಕ್ತಿ ಜೈನ ಸಂಘ, ಧಾರವಾಡ, ಸನ್ಮತಿ ಸೇವಾ ಸಮಾಜ ಧಾರವಾಡ, ಜೈನ್ ಮಿಲನ್ ದಕ್ಷಿಣ, ಧಾರವಾಡ, ಸಮ್ಯಕ್ ಪ್ರಜ್ಞಾ ಮಹಿಳಾ ಮಂಡಳ, ಧಾರವಾಡ, ಪೆರಮಾಣು ಪ್ರತಿಷ್ಠಾನ, ಧಾರವಾಡ ಹಾಗೂ ಜೈನ ಸಮಾಜ (ನವಲೂರು, ಸತ್ತೂರು, ಅಮ್ಮಿನಭಾವಿ, ಉಪ್ಪಿನಬೆಟಗೇರಿ, ಗರಗ, ಮುಗದ, ಯಾದವಾಡ) ಬೆಂಬಲ ನೀಡಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ