ಜನ ಪ್ರತಿನಿಧಿಗಳ ವಿಶೇಷ ಪೀಠಕ್ಕೆ ಜಾರಕಿಹೊಳಿ ಪ್ರಕರಣ ವರ್ಗಾವಣೆ

ಬೆಂಗಳೂರು; ಸಿಡಿ ಪ್ರಕರಣ ಸಂಬಂಧ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಬ್ಲಾಕ್ ಮೇಲ್ ಪ್ರಕರಣದ ರದ್ದು ಕೋರಿ ಸಂತ್ರಸ್ತ ಯುವತಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಜನಪ್ರತಿನಿಧಿಗಳ ವಿಶೇಷ ಪೀಠಕ್ಕೆ ವರ್ಗಾವಣೆ ಮಾಡಿದೆ.
ರಮೇಶ್ ಜಾರಕಿಹೊಳಿ ದಾಖಲಿಸಿರುವ ಬ್ಲಾಕ್ ಮೇಲ್ ಪ್ರಕರಣ ರದ್ದು ಕೋರಿ ಸಂತ್ರಸ್ತ ಯುವತಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ಸೋಮವಾರ ನ್ಯಾ. ಶ್ರೀನಿವಾಸ ಹರೀಶ್ ಕುಮಾರ್ ಇದ್ದ ಪೀಠಕ್ಕೆ ಬಂದಿತ್ತು. ನ್ಯಾ. ಸುನೀಲ್ ದತ್‌ ಯಾದವ್ ಅವರ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬರಬೇಕಿತ್ತು. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ ಸಂತ್ರಸ್ತ ಯುವತಿ ಪರ ವಕೀಲರಾದ ಸಂಕೇತ ಏಣಗಿ ವಾದ ಮಂಡಿಸಿದರು. ಇವರ ಮನವಿ ಆಲಿಸಿದ ನ್ಯಾಯಪೀಠ ಅರ್ಜಿಯನ್ನು ಜನ ಪ್ರತಿನಿಧಿಗಳ ವಿಶೇಷ ಪೀಠಕ್ಕೆ ವರ್ಗಾವಣೆ ಮಾಡಿದೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನನ್ನು ಹನಿಟ್ರ್ಯಾಪ್ ಮಾಡಲಾಗಿದೆ. ಬ್ಲಾಕ್ ಮೇಲ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ದೂರು ನೀಡಿದ್ದರು. ಈ ದೂರನ್ನು ರದ್ದು ಕೋರಿ ಸಂತ್ರಸ್ತ ಯುವತಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಪೀಠ ರಮೇಶ್ ಜಾರಕಿಹೊಳಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ನೋಟಿಸನ್ನು ರಮೇಶ್ ಜಾರಕಿಹೊಳಿ ಸ್ವೀಕರಿಸಿರಲಿಲ್ಲ. ಇದೀಗ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಪೀಠ ನೋಟಿಸ್ ಜಾರಿ ಮಾಡಿದೆ. ರಮೇಶ್ ಜಾರಕಿಹೊಳಿ ಕುಟುಂಬ ನ್ಯಾಯಾಲಯದ ನೋಟಿಸನ್ನು ಸ್ವೀಕರಿಸಿದೆ. ಅರ್ಜಿಯನ್ನು ಜೂ. 23 ಕ್ಕೆ ಮುಂದೂಡಲಾಗಿದೆ.
ಜೂ. 23 ರಂದು ಎಲ್ಲಾ ಅರ್ಜಿಗಳ ವಿಚಾರಣೆ: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣವನನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ವಕೀರೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಜೂ. 23 ಕ್ಕೆ ಮುಂದೂಡಲಾಗಿದೆ. ಇನ್ನು ಎಸ್‌ಐಟಿ ತನಿಖೆ ಸರಿಯಿಲ್ಲ. ಎಸ್‌ಐಟಿ ತನಿಖೆಯನ್ನು ರದ್ದು ಮಾಡಿ ಎಂದು ಸಂತ್ರಸ್ತ ಯುವತಿ ಕೋರಿ ಸಲ್ಲಿಸಿರುವ ಅರ್ಜಿ ಕೂಡ ಇದೇ ಜೂ. 23 ರಂದು ಬರಲಿದೆ. ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ವಕೀಲರಾದ ಇಂದಿರಾ ಜೈಸಿಂಗ್ ಸಂತ್ರಸ್ತ ಯುವತಿ ಪರ ವಕಾಲತು ವಹಿಸಿದ್ದು, ಜೂ. 23ರಂದೇ ವಾದ ಮಂಡನೆ ಮಾಡಲಿದ್ದಾರೆ. ಇನ್ನ ಸಿಬಿಐ ತನಿಖೆ ಪ್ರಶ್ನಿಸಿ ರಮೇಶ್ ಜಾರಕಿಹೊಳಿ ಸಲ್ಲಿಸಿರುವ ಆಕ್ಷೇಪಣಾ ಅರ್ಜಿ ಕೂಡ ಇದೇ ಜೂ. 23 ರಂದೇ ವಿಚಾರಣೆಗೆ ಬರಲಿದೆ. ಇದೀಗ ಪ್ರಕರಣದ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೂಡ ಅದೇ ದಿನ ಬರಲಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement