ಉತ್ತರ ಪ್ರದೇಶ ಬಲವಂತದ ಮತ ಪರಿವರ್ತನೆ ದಂಧೆ: ಪಾಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ ಎಂದ ಸಂತ್ರಸ್ತನ ಕುಟುಂಬ

ನವದೆಹಲಿ: ಉತ್ತರ ಪ್ರದೇಶದಲ್ಲಿ ಬಲವಂತದ ಮತಾಂತರಕ್ಕೆ ಒಳಗಾದವರ ಕುಟುಂಬಕ್ಕೆ ಪಾಕಿಸ್ತಾನದಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಮತಾಂತರಕ್ಕೊಳಗಾದನ ತಂದೆ ಹೇಳಿದ್ದಾರೆ.
ಮನು ಯಾದವ್ ಅವರ ತಂದೆ ತನ್ನ ಮಗನ ಮೊಬೈಲ್ ಸಂಖ್ಯೆಗೆ ಪಾಕಿಸ್ತಾನದಿಂದ ಕರೆ ಮಾಡಿದ್ದು ತಾನು ಕರೆ ಸ್ವೀಕರಿಸಿರುವುದಾಗಿ ಆರೋಪಿಸಿದ್ದಾರೆ.
ಮುಫ್ತಿ ಖಾಜಿ ಜೆಹಂಗೀರ್ ಆಲಂ ಕಸ್ಮಿ ಮತ್ತು ಮೊಹಮ್ಮದ್ ಉಮರ್ ಗೌತಮ್ ಅವರು ತಮ್ಮ ಮಗನನ್ನು ಮತಾಂತರ ಮಾಡಿದ್ದಾರೆ ಎಂಬ ಮಾಹಿತಿ ತಂದೆಗೆ ದೊರೆತಾಗ ಅವರು ಮನುವನ್ನು ಮನೆಗೆ ಕರೆತಂದಿದ್ದಾರೆ.
ಟೈಮ್ಸ್ ನೌ ಜೊತೆ ಮಾತನಾಡಿದ ಸಂತ್ರಸ್ತ ಮನು ಯಾದವ್‌ ತಂದೆ ರಾಜೀವ್ ಯಾದವ್, ತನ್ನ ಮಗ ತನ್ನ ಸ್ನೇಹಿತರನ್ನು ಭೇಟಿಯಾಗಬೇಕು ಎಂದು ಅನುಮತಿ ಕೋರಿ ಅಳುತ್ತಿದ್ದ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಐಎಸ್‌ಐ- ಕತಾರ್‌ನಿಂದ ಹಣ ಬರುತ್ತಿದೆ:
ಈ ಬೆದರಿಕೆ ಕರೆಗಳು ಮತ್ತು ಮನು ಯಾದವ್‌ ಅವರಿಂದ ಒತ್ತಡ ಬಂದ ನಂತರ, ತಂದೆ ಮಗನನ್ನು ಹೋಗಲು ಬಿಟ್ಟರು. ಅಂದಿನಿಂದ, ಮನು ಕಾಣೆಯಾಗಿದ್ದಾನೆ; ಆದಾಗ್ಯೂ, ಅವನು ತನ್ನ ತಾಯಿಯೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ತಂದೆ ರಾಜೀವ್‌ ಯಾದವ್‌ ತಿಳಿಸಿದ್ದಾರೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ.
ಮನು ಯಾದವ್‌ ಇತ್ತೀಚೆಗೆ ತನ್ನ ತಾಯಿಗೆ ಕರೆ ಮಾಡಿ ಇನ್ನು ಕೆಲವೇ ದಿನಗಳಲ್ಲಿ ತನ್ನುನ್ನು ವಿದೇಶಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದಾನೆ ಮತ್ತು ತನ್ನನ್ನು ಮತಾಂತರಗೊಳಿಸಿದವರು ಆತನಿಗೆ ಒಂದು ಉದ್ಯಮ ಸ್ಥಾಪಿಸಲು ಸಹಾಯ ಮಾಡುತ್ತಾರೆ ಮತ್ತು ಎರಡು ಮೂರು ವರ್ಷಗಳ ನಂತರ ಮುಸ್ಲಿಂ ಮಹಿಳೆಯೊಂದಿಗೆ ಮದುವೆಯಾಗುತ್ತಾರೆ ಎಂದು ತನ್ನ ತಾಯಿಗೆ ಮನು ಯಾದವ್‌ ತಿಳಿಸಿದ್ದಾನೆ.
20ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮಕ್ಕಳನ್ನು ಇಬ್ಬರು ಆರೋಪಿಗಳಿಂದ ಮತಾಂತರ ಮಾಡಿದ್ದಾರೆ ಎಂದು ಯುಪಿ ಎಟಿಎಸ್‌ಗೆ ಹೇಳಿಕೆ ನೀಡಿದ್ದಾರೆ.
ಮೊಹಮ್ಮದ್ ಉಮರ್ ಗೌತಮ್ 1000 ಮುಸ್ಲಿಮೇತರರನ್ನು ಇಸ್ಲಾಂಗೆ ಮತಾಂತರಗೊಳಿಸುವುದಾಗಿ ಹೇಳಿಕೊಂಡಿದ್ದಾರೆ
ಟೈಮ್ಸ್ ನೌ ಸಿಕ್ಕದ ವಿಡಿಯೊವೊಂದರಲ್ಲಿ, ಮೊಹಮ್ಮದ್ ಉಮರ್ ಗೌತಮ್ 1000 ಮುಸ್ಲಿಮೇತರರನ್ನು ಇಸ್ಲಾಂಗೆ ಮತಾಂತರಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ. ಮತಾಂತರವಾಗಲು ಮದುವೆ, ಹಣ ಮತ್ತು ಉದ್ಯೋಗಗಳಿಂದ ಆಮಿಷವೊಡ್ಡುತ್ತಾರೆ.
ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಸೇರಿದಂತೆ ಕೆಲವು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಆರೋಪಿಗಳಿಗೆ ಧನಸಹಾಯ ನೀಡಲಾಗಿದೆ ಎಂದು ಉತ್ತರ ಪ್ರದೇಶದ ಎಟಿಎಸ್ ಜೊತೆ ದೆಹಲಿಯ ಜಾಮಿಯಾ ನಗರ ಪ್ರದೇಶದ ಕಸ್ಮಿ ಮತ್ತು ಗೌತಮ್ ಅವರನ್ನು ಬಂಧಿಸಿರುವ ಹೆಚ್ಚುವರಿ ನಿರ್ದೇಶಕ ಜನರಲ್ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಇವರಿಬ್ಬರು ತಮ್ಮ ಇತರ ಸಹಚರರೊಂದಿಗೆ ಇಸ್ಲಾಮಿಕ್ ದವಾಹ್ ಸೆಂಟರ್ (ಐಡಿಸಿ) ಎಂಬ ಸಂಘಟನೆಯನ್ನು ನಡೆಸುತ್ತಿದ್ದರು.
ಕಿವುಡ ಮತ್ತು ಮೂಕ ಮತ್ತು ದೈಹಿಕವಾಗಿ ಸವಾಲಿನ ಮಕ್ಕಳು ಮತ್ತು ಯುವಕರನ್ನು ಮತಾಂತರಗೊಳಿಸಿದವರ ವಿರುದ್ಧ ದರೋಡೆಕೋರ ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಕ್ರಮಕೈಗೊಳ್ಳಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಆದೇಶಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ