ಕೆನರಾ ಬ್ಯಾಂಕ್ ಎಟಿಎಂ ಬದಲಾಗುತ್ತದೆ ಎಂದು ಅನೇಕರಿಗೆ ಮೊಬೈಲ್‌ ಕರೆ: ಮೋಸಕ್ಕೆ ಯತ್ನ

ಕುಮಟಾ; ಕೆನರಾ ಬ್ಯಾಂಕ್-ಸಿಂಡಿಕೇಟ್ ಬ್ಯಾಂಕ್ ವಿಲೀನವಾಗುತ್ತಿದೆ. ಆದ್ದರಿಂದ ಈ ಹಿಂದಿನ ಎಟಿಎಂ ನಂಬರ್ ಬದಲಾಗುತ್ತದೆ. ನಿಮ್ಮ ಕೆನರಾ ಬ್ಯಾಂಕ್ ಎಟಿಎಂ ಕಾರ್ಡ ನಂಬರ್ ಮತ್ತು ಕೋಡ್ ನಂಬರ್ ತಿಳಿಸಿ ಇಲ್ಲದಿದ್ದರೆ ಕೆನರಾ ಬ್ಯಾಂಕಲ್ಲಿ ನಿಮ್ಮ ಎಟಿಎಂ ನಂಬರ್ ಬ್ಲಾಕ್ ಆಗುತ್ತದೆ ಎಂದು ಬುಧವಾರ ಕುಮಟಾಸೇರಿದಂತೆ ಉತ್ತರಕನ್ನಡ ಜಿಲ್ಲೆಯಾದ್ಯಂತ ಪೊನ್ ಕರೆಗಳು ಬರತೊಡಗಿದೆ.
ಎಟಿಎಂ ನಂಬರ್ ತಪ್ಪು ಮಾಹಿತಿ ನೀಡಿದವರಿಗೆ ಫೋನ್‌ ಮಾಡಿದವರು ಅತ್ಯಂತ ಕೆಟ್ಟ ಶಬ್ದದಿಂದ ಬೈದ ಘಟನೆಯೂ ನಡೆದಿದೆ ಎಂದು ವರದಿಯಾಗಿದೆ.
ಬುಧವಾರ ಬೆಳಿಗ್ಗೆಯಿಂದ ಕುಮಟಾದ ೧೭ ಕ್ಕೂ ಹೆಚ್ಚು ಜನರಿಗೆ ೬೨೯೦೭೭೭೯೫೩ ಎಂಬ ನಂಬರದಿಂದ ಕರೆ ಮಾಡಿದ್ದಾರೆ. ಎಲ್ಲಿಂದ ಫೋನ್‌ ಮಾಡಿದ್ದು ಎಂದು ವಿಚಾರಿಸಿದವರಿಗೆ ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯಿಂದ ಎಂದು ಉತ್ತರಿಸುತ್ತಾರೆ. ಎಟಿಎಂ ಚಾಲ್ತಿಯಲ್ಲಿ ಇರಬೇಕು ಎಂದರೆ ತಕ್ಷಣ ಎಟಿಎಂ ನಂಬರ್ ಹಾಗೂ ಬ್ಯಾಂಕ್ ಡಿಟೇಲ್ ಹೇಳಿ ಎಂದು ಕರೆ ಮಾಡಿದವರು ಜನರಿಗೆ ಹೇಳುತ್ತಾರೆ. ಅವರ ಬಳಿ ಪ್ರಶ್ನೆ ಮಾಡಿದರೆ ಕರೆಯನ್ನು ಸ್ಥಗಿತಗೊಳಿಸುತ್ತಾರೆ. ಈ ಬಗ್ಗೆ ಹಲವರು ದೂರಿದ್ದಾರೆ. ಆದರೆ ಇದು ಖಾತೆಯಿಂದ ಹಣ ಲಪಟಾಯಿಸುವ ಗ್ಯಾಂಗ್ ಎಂದು ತಿಳಿದು ಬಂದಿದ್ದು ಈ ಬಗ್ಗೆ ಕೆಲವರು ಪೊಲೀಸರಿಗೆ ಈ ನಂಬರ್ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊಬೈಲ್‌ದಲ್ಲಿ ಟ್ರೂಕಾಲರ್ ನಲ್ಲಿ ಇದೊಂದು ಬ್ಯಾಂಕ್ ಫ್ರಾಡ್‌ ನಂಬರ್ ಎಂದು ಅದು ತೋರಿಸುತ್ತದೆ. ಈ ಬಗ್ಗೆ ಬಹಳ ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement