ಭಾರತಕ್ಕೆ ಹಸ್ತಾಂತರ ಆದೇಶ: ನೀರವ್ ಮೋದಿ ಅರ್ಜಿ ವಜಾಗೊಳಿಸಿದ ಬ್ರಿಟನ್ ಹೈಕೋರ್ಟ್

ಲಂಡನ್: ಭಾರತಕ್ಕೆ ಹಸ್ತಾಂತರಿಸುವ ಆದೇಶವನ್ನು ಪ್ರಶ್ನಿಸಿ ನೀರವ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ಹೈಕೋರ್ಟ್ ವಜಾಗೊಳಿಸಿದೆ. ಕಳೆದ ತಿಂಗಳು ಭಾರತದಲ್ಲಿ ಕೋಟ್ಯಂತರ ರೂ. ವಂಚಿಸಿ ಬ್ರಿಟನ್ ನಲ್ಲಿ ತಲೆಮರೆಸಿಕೊಂಡಿರುವ ವಜ್ರ ವ್ಯಾಪಾರಿ ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಆದೇಶ ಹೊರಡಿಸಿದ್ದರು. ನೀರವ್ ಮೋದಿ ಬ್ರಿಟನ್ ಕಾಯ್ದೆಯನ್ವಯ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೌಖಿಕ ಮೇಲ್ಮನವಿ ಸಲ್ಲಿಸಲು ಐದು ದಿನಗಳ ಕಾಲಾವಕಾಶ ಲಭ್ಯವಾಗಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ ಫೆಬ್ರುವರಿಯಲ್ಲಿ ಆದೇಶ ನೀಡಿತ್ತು.
ಈ ನಿಟ್ಟಿನಲ್ಲಿ ಪ್ರೀತಿ ಪಟೇಲ್ ಅವರು ಭಾರತಕ್ಕೆ ಹಸ್ತಾಂತರಿಸುವಂತೆ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ನೀರವ್ ಮೋದಿ ಬ್ರಿಟನ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಇದು 50 ವರ್ಷದ ವಜ್ರದ ವ್ಯಾಪಾರಿಗೆ ಹೈಕೋರ್ಟ್‌ನಲ್ಲಿ ಸಂಕ್ಷಿಪ್ತ ಮೌಖಿಕ ವಿಚಾರಣೆಯಲ್ಲಿ ತನ್ನ ಪ್ರಕರಣವನ್ನು ನವೀಕರಿಸಲು ಹಾಗೂ ಪೂರ್ಣ ಮೇಲ್ಮನವಿ ವಿಚಾರಣೆ ಮುಂದುವರಿಯಬಹುದೇ ಎಂದು ನಿರ್ಧರಿಸಲು ಕಾನೂನು ಮಾರ್ಗಸೂಚಿಗಳ ಪ್ರಕಾರ, ಮೇಲ್ಮನವಿಯಾಗಿ ನೀರವ್ ಮೋದಿಯವರು ಅಂತಹ ಮೌಖಿಕ ಪರಿಗಣನೆಗೆ ಅರ್ಜಿ ಸಲ್ಲಿಸಲು ಐದು ವ್ಯವಹಾರಿಕ ದಿನಗಳ ಕಾಲಾವಕಾಶ ಹೊಂದಿದ್ದು ಮುಂದಿನ ವಾರದ ತನಕ ಅವರಿಗೆ ಸಮಯವನ್ನು ನೀಡುತ್ತಾರೆ. ನವೀಕರಣ ಅರ್ಜಿ ಸಲ್ಲಿಸಿದರೆ, ಅದನ್ನು ವಿಚಾರಣೆಗೆ ಹೈಕೋರ್ಟ್ ನ್ಯಾಯಾಧೀಶರ ಮುಂದೆ ಪಟ್ಟಿ ಮಾಡಲಾಗುತ್ತದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement