ಭಾರತದ ಮೊದಲ ಅಂತಾರಾಷ್ಟ್ರೀಯ ಮಹಿಳಾ ಪ್ಯಾರಾ ಶೂಟರ್..28 ಚಿನ್ನದ ಪದಕ ವಿಜೇತೆ..ಈಗ ಬೀದಿ ಬದಿ ಚಿಪ್ಸ್‌ ಮಾರುತ್ತಾರೆ..!

ನವದೆಹಲಿ: 28 ಬಾರಿ ಚಿನ್ನದ ಪದಕ ವಿಜೇತೆ ಪ್ಯಾರಾ ಶೂಟರ್ ದಿಲ್ರಾಜ್ ಕೌರ್ ಈಗ ಜೀವನ ನಿರ್ವಹಣೆಗಾಗಿ ರಸ್ತೆ ಬದಿ ಚಿಪ್ಸ್ ಮಾರುತ್ತಿದ್ದಾರೆ…!
ಇದನ್ನು ನಂಬಲು ಕಷ್ಟವಾದರೂ ಇದು ಸತ್ಯ..!! ಜಾಗತಿಕ ವೇದಿಕೆಗಳಲ್ಲಿ 28 ಬಾರಿ ಚಿನ್ನದ ಪದಕ ಗೆದ್ದು ಭಾರತ ಕೀರ್ತಿ ಪತಾಕೆ ಹಾರಿಸಿದ್ದ ಪ್ಯಾರಾ ಶೂಟರ್‌ ದಿಲ್ರಾಜ್ ಕೌರ್ ಅವರು ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನ ರಸ್ತೆ ಬದಿಯಲ್ಲಿ ಚಿಪ್ಸ್ ಮತ್ತು ಬಿಸ್ಕತ್ ಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ದಿಲ್ರಾಜ್ ಕೌರ್ 2005 ರಲ್ಲಿ ಕ್ರೀಡೆಯಲ್ಲಿ ಪ್ರಾರಂಭವಾಯಿತು ಅವರ ಕ್ರೀಡಾ ಜೀವನ. 15 ವರ್ಷಗಳಲ್ಲಿ ಭಾರತದ ಮೊದಲ ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾ ಶೂಟರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು. ಆದಾಗ್ಯೂ, ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ ಗಳಿಸಿದ ಪುರಸ್ಕಾರಗಳು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಿಲ್ಲ. ಈಗ ಅವರು ಡೆಹ್ರಾಡೂನ್‌ನಲ್ಲಿ ರಸ್ತೆ ಬದಿ ಚಿಪ್ಸ್‌ಗಳನ್ನು ಮಾರಾಟ ಮಾಡುತ್ತಾರೆ..!
34 ವರ್ಷದ ದಿಲ್ರಾಜ್ ಈಗ ಡೆಹ್ರಾಡೂನ್‌ನ ಗಾಂಧಿ ಪಾರ್ಕ್ ಬಳಿಯ ರಸ್ತೆಬದಿಯ ಸ್ಟಾಲ್‌ನಿಂದ ಬಿಸ್ಕತ್ತು ಮತ್ತು ಚಿಪ್ಸ್‌ಗಳನ್ನು ಮಾರುತ್ತಿದ್ದಾರೆ. ದಿಲ್ರಾಜ್ ಕೌರ್ ಅವರು 2004ರಲ್ಲಿ ತಮ್ಮ ಶೂಟಿಂಗ್ ವೃತ್ತಿ ಜೀವನ ಆರಂಭಿಸಿದ್ದರು. ದೇಶದ ಅತ್ಯುತ್ತಮ ಹಾಗೂ ಮೊದಲ ಪ್ಯಾರಾ ಏರ್ ಪಿಸ್ತೂಲ್ ಶೂಟರ್ ಎಂದು ಪರಿಗಣಿಸಲ್ಪಟ್ಟ ದಿಲ್ರಾಜ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 28 ಚಿನ್ನದ ಪದಕ, 8 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ನಾನು ಭಾರತಕ್ಕಾಗಿ ಪದಕಗಳನ್ನು ಗೆದ್ದಿದ್ದೇನೆ.ಆದರೆ ಈಗ ನನಗೆ ಅಗತ್ಯವಿರುವಾಗ ಯಾರೂ ಸಹಾಯಕ್ಕೆ ಇಲ್ಲ” ಎಂದು ಕೌರ್ ನೋವಿನಿಂದ ಹೇಳುತ್ತಾರೆ.
ಅವಳು ತಾಯಿ ಗುರ್‌ಬೀತ್‌ನೊಂದಿಗೆ ಈಗ ಡೆಹ್ರಾಡೂನ್‌ನ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿರುತ್ತಾಳೆ. ನಮ್ಮ ತಂದೆ ತಮ್ಮ ಸುದೀರ್ಘ ಆರೋಗ್ಯ ಸಮಸ್ಯೆಯಿಂದಾಗಿ ಮೃತಪಟ್ಟರು. ನನ್ನ ಸಹೋದರ ಕೂಡ ಇತ್ತೀಚೆಗೆ ಮೃತಪಟ್ಟ. ಇವರಿಬ್ಬರ ಚಿಕಿತ್ಸೆಗಾಗಿ ನಾವು ಸಾಕಷ್ಟು ಹಣ ಖರ್ಚು ಮಾಡಿದ್ದೆವು. ಸಾಕಷ್ಟು ಸಾಲ ಮಾಡಿಕೊಂಡೆವು. ಆದರೂ ಅವರು ಬದುಕಲಿಲ್ಲ. ಪ್ರಸ್ತುತ ನಮ್ಮ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ. ನಾನು ರಸ್ತೆಬದಿಯಲ್ಲಿ ಚಿಪ್ಸ್ ಮತ್ತು ಬಿಸ್ಕತ್ತುಗಳನ್ನು ಮಾರಾಟ ಮಾಡಿ ಇದರಿಂದ ಬಂದ ಹಣದಲ್ಲಿ ಬಾಡಿಗೆ ಮತ್ತು ಇತರ ವೆಚ್ಚಗಳನ್ನು ನಿಭಾಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಉತ್ತರಾಖಂಡದ ಪ್ಯಾರಾ-ಶೂಟಿಂಗ್ ಸಮುದಾಯದಿಂದ ತನಗೆ ಯಾವುದೇ ಸಹಾಯ ಬಂದಿಲ್ಲ ಎಂದು ದಿಲ್ರಾಜ್ ಹೇಳಿದ್ದಾರೆ. ಕ್ರೀಡಾ ಕೋಟಾ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಕೇಳುತ್ತಿದ್ದೇನೆ. ಆದರೆ ಏನೂ ಆಗಿಲ್ಲ ಎಂದು ದಿಲ್ರಾಜ್‌ ಹೇಳುತ್ತಾರೆ.
ಉತ್ತರಾಖಂಡ ಕ್ರೀಡಾ ಸಚಿವರ ಕಚೇರಿ ಅವರ ಪರಿಸ್ಥಿತಿಯ ನಮಗೆ ಬಗ್ಗೆ ತಿಳಿದಿಲ್ಲ ಎಂದು ಹೇಳಿದೆ. “ಈ ವಿಷಯವು ಇನ್ನೂ ನಮ್ಮ ಬಳಿಗೆ ಬಂದಿಲ್ಲ ಮತ್ತು ಸಂಬಂಧಪಟ್ಟ ಕ್ರೀಡಾಪಟು ನಮ್ಮನ್ನು ಸಂಪರ್ಕಿಸಿದರೆ ನಾವು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅವರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement