ಬೆಂಗಳೂರು ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಬರ್ಬರ ಹತ್ಯೆ

ಬೆಂಗಳೂರು: ಛಲವಾದಿ ಪಾಳ್ಯದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನುಗುರುವಾರ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬೆಳಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿದೆ.
ಕೋವಿಡ್‌ ಸಂದರ್ಭದಲ್ಲಿ ಅನ್ನದಾನ ಮಾಡಲು ಹೋಗಿದ್ದ ರೇಖಾ ಅವರನ್ನು ಹೊರಗೆ ಕರೆಯಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆ ಮಾಡುವ ಮುನ್ನ ಕಚೇರಿ ಮುಂದಿದ್ದ ಸಿಸಿಟಿವಿ ಕ್ಯಾಮರಾಗಳನ್ನು ತಿರುಗಿಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಹೀಗಾಗಿ ಇದೊಂದು ಪೂರ್ವಯೋಜಿತ ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
2018 ರಲ್ಲಿ ರೇಖಾ ಅವರ ಕದಿರೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.ಇದೀಗ ಪತ್ನಿಯನ್ನು ಕೊಲೆ ಮಾಡಿರುವುದು ಸಿಲಿಕಾನ್‌ ಸಿಟಿಯನ್ನು ಬೆಚ್ಚಿಬೀಳಿಸಿದೆ.
ಛಲವಾದಿ ಪಾಳ್ಯದ ಮಾಜಿ ಕಾರ್ಪೊರೇಟರ್ ಅಗಿದ್ದ ರೇಖಾ ಕದಿರೇಶ್ ಫ್ಲವರ್ ಗಾರ್ಡನ್‌ನಲ್ಲಿ ವಾಸವಾಗಿದ್ದರು. ಸೋಂಕು ಹಿನ್ನೆಲೆಯಲ್ಲಿ ಬಡವರಿಗೆ ಅನ್ನದಾನ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ ಬೆಳಗ್ಗೆ 9.30 ರ ಸುಮಾರಿಗೆ ಛಲವಾದಿ ಪಾಳ್ಯದಲ್ಲಿರುವ ಕಚೇರಿಗೆ ರೇಖಾ ಬಂದಿದ್ದರು. ಕಚೇರಿಯಿಂದ ಹೊರಗೆ ಕರೆಸಿಕೊಳ್ಳುವ ಮುನ್ನ ಕಚೇರಿಯ ಎರಡು ಸಿಸಿಟಿವಿ ಕ್ಯಾಮರಾಗಳನ್ನು ಮೇಲಕ್ಕೆ ತಿರುಗಿಸಿದ್ದಾರೆ. ಹೊರಗೆ ಬಂದ ರೇಖಾ ಕದಿರೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಲಾಗಿದೆ. ಗಾಯಗೊಂಡ ರೇಖಾ ಅವರನ್ನು ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ರೇಖಾ ಅವರ ಪತಿ ಕದಿರೇಶ್‌ರನ್ನು ಶೋಭನ್ ಮತ್ತು ಸಹಚರರು 2018 ರಂದು ಮುನೇಶ್ವರ ದೇವಸ್ಥಾನದ ಬಳಿ ಕೊಚ್ಚಿ ಕೊಲೆ ಮಾಡಿದ್ದರು. ಟೆಂಡರ್ ವಿಚಾರವಾಗಿ ಕದಿರೇಶ್‌ರನ್ನು ಕೊಂದಿದ್ದ ಶೋಭನ್ ಮತ್ತು ಸಹಚರರು ನಂತರ ನ್ಯಾಯಾಲಯಕ್ಕೆ ಶರಣಾಗಿದ್ದರು. ಇದೀಗ ಮೂರು ವರ್ಷದ ಬಳಿಕ ರೇಖಾ ಕದಿರೇಶ್ ಅವರನ್ನು ಕೊಲೆ ಮಾಡಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಎಂಟು ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದೆ.
ಮೊದಲೇಯೋಜನೆ: ರೇಖಾ ಕದಿರೇಶ್ ಒಬ್ಬರೇ ಕಚೇರಿಯಲ್ಲಿದ್ದರು. ಈ ವೇಳೆ ಕಚೇರಿ ಶುದ್ಧ ಗೊಳಿಸಲು ಒಬ್ಬ ವ್ಯಕ್ತಿಯಷ್ಟೇ ಇದ್ದ. ಈ ವೇಳೆ ಹೊರಗೆ ಕರೆಸಿದ ಮೂವರು ಕಿರಾತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕದಿರೇಶ್ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಸ್ಟೀಫನ್ ಮತ್ತು ಸಹಚರರು ಇತ್ತೀಚೆಗೆ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.
ರೇಖಾ ಕದಿರೇಶ್ ಕಚೇರಿಯಲ್ಲಿದ್ದಾಗ ಮೂವರು ದುಷ್ಕರ್ಮಿಗಳು ಹೊರಗೆ ಕರೆಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಕೊಲೆ ಮಾಡುವ ಬಗ್ಗೆ ಮೊದಲೇ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಕಚೇರಿಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಮೇಲಕ್ಕೆ ತಿರುಗಿಸಿ ನಂತರ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ರೇಖಾ ಕದಿರೇಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆರೋಪಿಗಳ ಪತ್ತೆಗೆ ಎಂಟು ತಂಡ ರಚನೆ ಮಾಡಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement