ಜೆಎಸ್ಎಸ್ ಐಟಿಐನಲ್ಲಿ ಕ್ಯಾಂಪಸ್ ಸಂದರ್ಶನ

posted in: ರಾಜ್ಯ | 0

ಧಾರವಾಡದ ವಿದ್ಯಾಗಿರಿಯಲ್ಲಿರುವ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐಟಿಐ ಕಾಲೇಜಿನಲ್ಲಿ ದಿನಾಂಕ ೦೧.೦೭.೨೦೨೧ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಉತ್ತರ ಪ್ರದೇಶದ ಯುಫ್ಲೆಕ್ಸ್‌ ಕಂಪನಿಯವರು ಧಾರವಾಡದಲ್ಲಿ ನೂತನವಾಗಿ ಪ್ರಾರಂಭಿಸಿದ ಕೈಗಾರಿಗೆ ಟೆಕ್ನಿಕಲ್ ಟ್ರೈನೀ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ.
೨೦೧೮, ೨೦೧೯, ೨೦೨೦ ಹಾಗೂ ೨೦೨೧ ರಲ್ಲಿ ಐ.ಟಿ.ಐ ಫಿಟ್ಟರ್, ಇಲೆಕ್ಟ್ರಿಕಲ್, ಟರ್ನರ್, ವೆಲ್ಡರ್, ಡೀಸೆಲ್ ಮೆಕ್ಯಾನಿಕ್, ಮಶಿನಿಸ್ಟ್‌ ಉತ್ತೀರ್ಣರಾದ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ಸಂದರ್ಶನಕ್ಕೆ ಹಾಜರಾಗುವಾಗ ತಮ್ಮ ಬಯೋಡೆಟಾ, ೨ ಪೋಟೊ, ಆಧಾರ ಕಾರ್ಡ್‌ ಝರಾಕ್ಸ ಪ್ರತಿ ಹಾಗೂ ಅಂಕಪಟ್ಟಿಯ ಝರಾಕ್ಸ್‌ ಪ್ರತಿ ತರಬೇಕು ಎಂದು ತಿಳಿಸಲಾಗಿದೆ. ದಿನಾಂಕ ೨೯.೦೬.೨೦೨೧ ರ ಒಳಗಾಗಿ ತಮ್ಮ ಹೆಸರುಗಳನ್ನು ೦೮೩೬-೨೪೬೨೨೦೨ ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಲು ಈ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ