ನವದೆಹಲಿ: ಜನರಲ್ಲಿ ಪ್ರಚಲಿತದಲ್ಲಿರುವ ಲಸಿಕೆ ಹಿಂಜರಿಕೆಯನ್ನು ಚಿತ್ರಿಸುವ ವಿಲಕ್ಷಣ ಘಟನೆ ವಿಶೇಷವಾಗಿ ದೇಶದ ಗ್ರಾಮೀಣ ಜನಸಂಖ್ಯೆ ಹೆಚ್ಚಾಗಿ ಹೊಮದಿರುವ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ರಾಜ್ಗಡ ಜಿಲ್ಲೆಯ ಪಟಂಕಲನ್ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆ ಪಡೆಯದಿರಲು ನಿರ್ಧರಿಸಿ ಅದರಿಂದ ತಪ್ಪಿಸಿಕೊಳ್ಳಲು ಮರ ಹತ್ತಿದ್ದಾರೆ..! ಮತ್ತು ದಿನಕ್ಕೆ ಕೋವಿಡ್ ಲಸಿಕೆ ಶಿಬಿರ ಮುಗಿಯುವವರೆಗೂ ಇಳಿಯಲು ನಿರಾಕರಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಅವರು ಸ್ವತಃ ಮರವನ್ನು ಏರಿದ್ದಲ್ಲದೆ, ಅವರಲ್ಲಿ ತಮ್ಮ ಪತ್ನಿಗೂ ಲಸಿಕೆ ಡೋಸ್ ನೀಡಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವರು ತಮ್ಮ ಹೆಂಡತಿಯ ಆಧಾರ್ ಕಾರ್ಡ್ ಅನ್ನು ಸಹ ತೆಗೆದುಕೊಂಡೇ ಮರ ಏರಿದ್ದರು ಎಂದು ವರದಿ ತಿಳಿಸಿದೆ.
ಕೋವಿಡ್ ಲಸಿಕೆ ಶಿಬಿರ ನಡೆಸಲು ಆರೋಗ್ಯ ಇಲಾಖೆ ತಂಡ ಗ್ರಾಮವನ್ನು ತಲುಪಿತ್ತು. ಎಲ್ಲ ಗ್ರಾಮಸ್ಥರನ್ನು ವ್ಯಾಕ್ಸಿನೇಷನ್ ಕೇಂದ್ರಕ್ಕೆ ಕರೆಸಲಾಯಿತು. ಗ್ರಾಮದ ನಿವಾಸಿ ಕನ್ವರ್ಲಾಲ್ ಕೂಡ ಕೇಂದ್ರಕ್ಕೆ ಬಂದರು. ಆದರೆ ಲಸಿಕೆಗಳನ್ನು ನೀಡುತ್ತಿರುವುದನ್ನು ನೋಡಿದ ಅವರು ಡೋಸ್ ತೆಗೆದುಕೊಳ್ಳಲು ನಿರಾಕರಿಸಿದರು. ಅವರ ಲಸಿಕೆ ಹಿಂಜರಿಕೆಯಿಂದ, ಲಸಿಕೆ ಪಡೆಯುವುದರಿಂದ ತಪ್ಪಿಕೊಳ್ಳಲು ಕನ್ವರ್ಲಾಲ್ ವ್ಯಾಕ್ಸಿನೇಷನ್ ಕೇಂದ್ರದ ಬಳಿಯ ಮರವನ್ನು ಹತ್ತಿ ವ್ಯಾಕ್ಸಿನೇಷನ್ ಕ್ಯಾಂಪ್ ಮುಗಿಯುವವರೆಗೂ ಮರದ ಮೇಲೆಯೇ ಇದ್ದರು. ಲಸಿಕೆ ತೆಗೆದುಕೊಳ್ಳಲು ಅವರ ಪತ್ನಿ ಒಪ್ಪಿಕೊಂಡರೂ ಸಹ, ಈ ವ್ಯಕ್ತಿ ತನ್ನ ಪತ್ನಿ ಆಧಾರ್ ಕಾರ್ಡ್ ತೆಗೆದುಕೊಂಡೇ ಮರ ಏರಿದ್ದರು..
ಘಟನೆ ಕೇಳಿದ ಖುಜ್ನರ್ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ.ರಾಜೀವ್ ಗ್ರಾಮಕ್ಕೆ ಭೇಟಿ ನೀಡಿ ಕನ್ವರ್ಲಾಲ್ ಅವರಿಗೆ ಸಲಹೆ ನೀಡಿದರು. “ಸಮಾಲೋಚನೆಯ ನಂತರ, ಈ ವ್ಯಕ್ತಿಯ ಭಯ ದೂರವಾಗಿದೆ. ಈಗ, ಮುಂದಿನ ಬಾರಿ ಅವರ ಗ್ರಾಮದಲ್ಲಿ ವ್ಯಾಕ್ಸಿನೇಷನ್ ಶಿಬಿರವನ್ನು ನಡೆಸಿದಾಗ, ಕನ್ವರ್ಲಾಲ್ ಮತ್ತು ಅವರ ಪತ್ನಿ ಲಸಿಕೆ ಪಡೆಯುತ್ತಾರೆ ”ಎಂದು ಡಾ.ರಾಜೀವ್ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ