ವರನಿಗೆ ಕನ್ನಡಕವಿಲ್ಲದೆ ಓದಲು ಆಗಲ್ಲ ಎಂದು ಹಸೆಮಣೆಯಲ್ಲೇ ಮದುವೆಯಾಗಲು ಒಲ್ಲೆ ಎಂದ ಯುವತಿ..!

ಭಾವಿ ಪತಿಗೆ ಕನ್ನಡಕ ಇಲ್ಲದೇ ಓದಲು ಆಗುವುದಿಲ್ಲ ಎಂದು ತಿಳಿದ ವಧು ಮಂಟಪದಲ್ಲೇ ಮದುವೆಯಾಗಲು ನಿರಾಕರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮದುವೆ ಮುರಿದುಕೊಂಡಿದ್ದೊಂದೇ ಅಲ್ಲ, ಮದುಮಗ ಮತ್ತು ಆತನ ಕುಟುಂಬದ ಮೇಲೂ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಉತ್ತರ ಪ್ರದೇಶದ ಜಮ್ಲಾಪುರದಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿಯಾಗಿದೆ.
ಮದುವೆಯ ದಿನ ವರ ಚೆನ್ನಾಗಿ ತಯಾರಿಯಾಗಿಯೇ ಕುಳಿತಿದ್ದ. ಆದರೆ ಆತ ಕನ್ನಡಕ ಧರಿಸಿದ್ದ. ವಧುವಿಗೆ ಮತ್ತು ಆಕೆಯ ಖಾಸಾ ಸಂಬಂಧಿ ಮಹಿಳೆಯೋಬ್ಬಳಿಗೆ ಏನನ್ನಿಸಿತೋ ಏನೋ. ಕನ್ನಡಕ ಧರಿಸಿ ಕುಳಿತ ಆತನ ದೃಷ್ಟಿ ಮೇಲೆ ಅನುಮಾನ ಶುರುವಾಯಿತು. ಹಸೆ ಮಂಟಪದಲ್ಲೇ ತನ್ನ ಭಾವಿ ಪತಿಯ ಬಳಿ ಕನ್ನಡಕ ತೆಗೆದು ಸುದ್ದಿ ಪತ್ರಿಕೆಯೊಂದನ್ನು ಓದಲು ವಧು ಕೇಳಿದಳು. ಈ ಪರೀಕ್ಷೆಯಲ್ಲಿ ಗೆದ್ದರೆ ಮಾತ್ರ ತಾಳಿ ಕಟ್ಟಿಸಿಕೊಳ್ಳುತ್ತೇನೆ ಎಂದು ಹೇಳಿದಳು.
ಆದರೆ ವರ ಕನ್ನಡಕ ಇಲ್ಲದೇ ಓದಲು ಬರುವುದಿಲ್ಲ ಎಂದು ಹೇಳಿದ. ಇದೇ ಕಾರಣ ಒಡ್ಡಿದ ಯುವತಿ ಆತನ ಮದುವೆ ಆಗಲು ನಿರಾಕರಿಸಿದ್ದಾಳೆ. ಜತೆಗೆ ತಿಳಿಸಿದರೆ ವಂಚನೆ ಮಾಡಿದ ಆರೋಪದ ಯುವಕ ಮತ್ತು ಯುವಕನ ಕುಟುಂಬದ ಮೇಲೆ ಪ್ರಕರಣ ದಾಖಲಿಸಿದ್ದಾಳೆ. ಜೊತೆಗೆ ವರದಕ್ಷಿಣೆ ಎಂದು ನೀಡಲಾಗಿದ್ದ ದ್ವಿಚಕ್ರ ವಾಹನ ಮತ್ತು ಹಣವನ್ನೂ ಯುವಕನ ಮನೆಯವರಿಗೆ ಮರಳಿ ನೀಡುವಂತೆ ಯುವತಿ ಕೇಳಿದ್ದಾಳೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ